12 April 2009
ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು
ಪ್ರಿಯರೇ,
ಈ ಕ್ಷಣದಲ್ಲಿ ಅಲ್ಲದಿದ್ದರೂ ಇಂದೇ ಓದಬೇಕಾದ ಲೇಖನ ಇಕೋ ಇದು ಉಡುಪಿ ಕುಂದಾಪುರಗಳಿಂದಲೂ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಂಚಿಗೇ ಇರುವ, ಸಾಕ್ಷಾತ್ ಅರಬ್ಬೀ ಸಮುದ್ರದಿಂದಲೇ ಅಕ್ಷರಶಃ ಪಾದ ತೊಳೆಸಿಕೊಳ್ಳುತ್ತಿರುವ ಒತ್ತಿನೆಣೆ. ಇಲ್ಲೇ ಈಚೆಗೆ ಕನ್ನಡದ ಒಬ್ಬ ಸಿನಿ-ನಿರ್ಮಾಪಕನಿಗೆ ತನ್ನೊಂದು ಸಿನಿಮಾಕ್ಕೆ ಬೃಹತ್ ಚಾರ್ಲೀ ಚಾಪ್ಲಿನ್ ವಿಗ್ರಹ ನಿಲ್ಲಿಸಬೇಕೆಂದು. . . ಎಂದೇ ನಾನು ಅಂಡಮಾನ್ ಕಥನದ ನಾಲ್ಕನೇ ಭಾಗಕ್ಕೆ ತೊಡಗಿದ್ದೆ.
ಸ್ವತಃ ಸಿನಿಮಾ ಉದ್ಯಮಿಯಾಗಿರುವ ಅಭಯ (ತನ್ನ ಬ್ಲಾಗಿನಲ್ಲಿ) ಶಿವನ ಮೂರನೇ ಕಣ್ಣನ್ನು ಪ್ರತಿವ್ಯಕ್ತಿಯ ವಿವೇಚನಾ ದೃಷ್ಟಿಯಾಗಿ ಗ್ರಹಿಸಿ ಚಾಪ್ಲಿನ್ ವಿಚಾರದಲ್ಲಿ ಕಣ್ಣು ತೆರೆಯಲು ಆಗ್ರಹಿಸಿದ, ತನ್ನ ಬ್ಲಾಗಿನ `ಶಿವನ ಮೂರನೇ ಕಣ್ಣು' ಲೇಖನದಲ್ಲಿ.
ಹಿಂದೆ ಉದಯವಾಣಿಯಲ್ಲಿ `ಪಬ್ಬು ಗಬ್ಬಿನ' ಜಾಡಮಾಲಿಯಾಗಿದ್ದ ಗೆಳೆಯ ದೇವು ಹನೆಹಳ್ಳಿ, ಇದೇ ಸುಮಾರಿಗೆ ಮತ್ತೆ ಉದಯವಾಣಿಯಲ್ಲಿ ‘ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು’ ಎಂಬ ಹೆಸರಿನಲ್ಲಿ ಅದ್ಭುತ ಲೇಖನ ಬರೆದರು. ಈ ಬರಹ ಬೀರುತ್ತಿದ್ದ ನೆಲದ ಕಂಪು, ಜನಪದೀಯ ಆಪ್ತತೆ ಎಲ್ಲಕ್ಕೂ ಮಿಗಿಲಾಗಿ ವೈಚಾರಿಕ ಪ್ರಖರತೆ ನಾಳೆ ಕೇವಲ ಗಜೇಟಾಗಬಾರದು ಎಂದನ್ನಿಸಿತು. ನನ್ನ ಬ್ಲಾಗಿನ ಮೂಲಕವೂ ಪ್ರಸರಿಸುತ್ತೇನೆ ಎಂದೆ. ಜೊತೆಗೆ ಒತ್ತಿನೆಣೆಯ ಚಿತ್ರಗಳನ್ನೂ ಹಾಕುವ ಆಸೆ ಸೇರಿಸಿದೆ. ಒಕ್ಕಾಲು, ನಿರಾಹಾರದ ತಪಸ್ಸುಗಳನ್ನೇನು ಬಯಸದ ದೇವರು ತಥಾಸ್ತು ಎಂದ! ಮೊನ್ನೆ ಸಂಜೆ ಅಂಗಡಿಯಲ್ಲಿ ಏನೋ ಕೆಲಸದಲ್ಲಿದ್ದಾಗ ದೂರವಾಣಿ ರಿಂಗಿತು. ಅತ್ತಣಿಂದ "ಹಾಂ, ನಾನು ದೇವು. ಚಾರ್ಲೀಚಾಪ್ಲೀನಿನ (ವಿಗ್ರಹದ) ಗೋರಿಯೊಳಗಿನಿಂದ ಮಾತಾಡುತ್ತಿದ್ದೇನೆ". ಮಾರಣೇ ದಿನವೇ ತಾಜಾ ತಾಜಾ ಚಿತ್ರಗಳೂ ಬಂದವು.
ನನ್ನ ಬ್ಲಾಗ್ ಮಾಸ್ಟರ್ - ಅಭಯ. ದೇವು ಬರಹ, ಚಿತ್ರಗಳಿಗೆ ಪೀಠಿಕೆ ಬರೆಯುವ ನನ್ನ ನಿಧಾನ ಗ್ರಹಿಸಿ ಆತ ಅದನ್ನು ತನ್ನದೇ ಬ್ಲಾಗಿಗೇರಿಸಿಬಿಟ್ಟಿದ್ದಾನೆ. ಹಾಗಾಗಿ ಕೂಡಲೇ ಇಲ್ಲಿ ಕ್ಲಿಕ್ಕಿರಿ, ಸುಖಪ್ರಯಾಣವಾಗಲಿ, ವೈಚಾರಿಕ ಪ್ರಜ್ಞೆ ಬೆಳಗಲಿ: www.abhaya.wordpress.com
Subscribe to:
Post Comments (Atom)
ಪ್ರಿಯ ಅಶೋಕ್
ReplyDeleteನಾನು ಮೊನ್ನೆಯೇ ಇದನ್ನು ಓದಿದ್ದೆ. ಬಹಳ ಕುಶಿಯಾಗಿತ್ತು. ಅದರಲ್ಲೂ ಬಜರಂಗಿಗಳ ಬೈಯಲು ಕಾರಣ ಎನ್ನುವ ವಾಕ್ಯ. ಆಗ ನಾನು http://halliyimda.blogspot.com/2009/04/blog-post_10.html ಗೀಚುವುದರಲ್ಲಿ ತಲ್ಲೀನನಾಗಿದ್ದ ಕಾರಣ ಪ್ರತಿಕ್ರಿಯೆ ಹಾಕಲಾಗಲಿಲ್ಲ.
ಪ್ರೀತಿಯಿಂದ
ಗೋವಿಂದ