ವಾರಾಂತ್ಯದಲ್ಲಿ ಅದೇನೋ ಅಂಗಡಿಗೆ ಎರಡು ದಿನ ರಜೆ ಸಿಕ್ಕಿತ್ತು. ನಾನು ಸಪತ್ನೀಕನಾಗಿ `ಅಭಯಾರಣ್ಯ’ಕ್ಕೆ (ಇಲ್ಲೇ ನಗರದ ಹೊರ ವಲಯದಲ್ಲಿರುವ ನಮ್ಮದೇ ವನ್ಯ ಪುನರುತ್ಥಾನದ ಪ್ರಯೋಗಭೂಮಿ) ಹೋಗಿದ್ದೆ. ಪುತ್ತೂರಿನ ಹಳ್ಳಿ ಮೂಲೆಯಲ್ಲಿದ್ದ ನನ್ನೊಬ್ಬ ಸೋದರಮಾವ ರೇಡಿಯೋ ವಾರ್ತೆಯಲ್ಲಿ ಕೇಳಿದರು “ಮಲೆನಾಡಿನ ಮೂಲೆಯ ಕಾಡುಹೊಳೆಯಲ್ಲಿ ಅತ್ರಿಯವರು ಸಪತ್ನೀಕರಾಗಿ ಮುಳುಗಿ ಸತ್ತರು”. ನನ್ನ ಅಂಗಡಿಯ ಪರಿಚಯಸ್ತರಿಗೆಲ್ಲ ನಾನು ಅತ್ರಿಯವನೇ. ಮತ್ತೆ ನನ್ನ ಹವ್ಯಾಸ ಪರಿಚಯವಿರುವವರಿಗೆಲ್ಲಾ ನಾನು ಮಲೆನಾಡಿನ ಕಾಡಮೂಲೆಯಲ್ಲಿದ್ದಿರಬಹುದಾದ್ದು ತೀರಾ ಸಂಭಾವ್ಯ! ನನ್ನ ನೆರೆಮನೆಯ ಮಾವನ ಮನೆಗೆ ಫೋನಿನ ಮೇಲೆ ಫೋನು. ಅವರಿಗೆ ಸ್ಪಷ್ಟವಿತ್ತು, ಆದರೆ ಸಂಶಯದ ಹುಳುವಿನ ಕಡಿತ ನಂಜಾದರೆ? `ಅಭಯಾರಣ್ಯ’ದಲ್ಲಿ ಫೋನಿಲ್ಲ. ನಾನು ಜಂಗಮವಾಣಿಯನ್ನು ಬಹಿಷ್ಕರಿಸಿದವ. ಅಭಯಾರಣ್ಯದ ಒತ್ತಿನ ಭೂಮಿಯ ನನ್ನ ಚಿಕ್ಕಮ್ಮನ ಮನೆಗೆ ಭಯದ ವರ್ಗಾವಣೆಯಾಯ್ತು. ತಮ್ಮ ಇದ್ದ ಕೆಲಸ ಬಿಟ್ಟು ನಾವಿದ್ದಲ್ಲಿಗೆ ಧಾವಿಸಿ, ನಮ್ಮನ್ನು ನೋಡಿ ನಿಟ್ಟುಸಿರು ಬಿಟ್ಟ. ನಮ್ಮ ಕ್ಷೇಮಸಮಾಚಾರದ ಹಿಂಪ್ರಸಾರ ಎಲ್ಲ ಕುತೂಹಲಿಗಳಿಗೆ ಮುಟ್ಟುವ ವೇಳೆಯಲ್ಲಿ ನಿಜದ ದುರಂತ ಸ್ಪಷ್ಟವಾಗಿತ್ತು - ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಅತ್ರಿ ಶಿವಮೊಗ್ಗದ ಸಮೀಪದ ತಮ್ಮ ಮಾವನ ಮನೆಯ ಬಳಿ ವಿಹಾರಕ್ಕೆ ಹೋದವರು ಸಪತ್ನೀಕರಾಗಿ ಹೊಳೆಪಾಲಾಗಿದ್ದರು.
02 November 2008
ಹೆಸರಿನಲ್ಲೇನಿದೆ...?
Subscribe to:
Post Comments (Atom)
Yes, some such incidents gives us shock, which may end up with blunder.(specially in case of emotional minded people). By sharing this, the reader can feel a different pinch, which can make him more firm prevent him from blunder steps when ever he face these type of incident.
ReplyDeleteಮಾನ್ಯರೇ,
ReplyDeleteಜಿ.ವಿ ಅತ್ರಿಯವರ ಈ ದುರಂತ ನಡೆದಿದ್ದು ಶೃಂಗೇರಿ(ಚಿಕ್ಕಮಗಳೂರು ಜಿಲ್ಲೆ) ಬಳಿಯ ಸಣ್ಣಾನೆಗುಂದ ಎಂಬ ಊರಿನಲ್ಲಿ.
-
ರವಿ.
ಪ್ರಿಯ ರವಿ, ಸ್ಠಳನಾಮ ತಿದ್ದಿದ್ದಕ್ಕೆ ಕೃತಜ್ಞ. ಗೊಂದಲದ ನೆನಪು ಮಾತ್ರ ಗಟ್ಟಿಯಿತ್ತು, ವಿವರಗಳು ಮರೆತುಹೋಗಿತ್ತು. ಸಾರ್ವಕಾಲಿಕ ಸತ್ಯಗಳನ್ನು ಅರಸುವಾಗ ದೇಶ,ಕಾಲ, ವ್ಯಕ್ತಿ ನಗಣ್ಯರಾಗುತ್ತಾರೆ ಎಂದೂ ಹೇಳಬಹುದಲ್ಲವೇ? ಅಶ್ವತ್ಥಾಮನೆಂಬ ಆನೆ ಕೊಂದವರು ದ್ರೋಣನಿಗೆ ಪುತ್ರ ವ್ಯಾಮೋಹ ತಂದದ್ದು ನೆನಪಿಗೆ ಬರುತ್ತದೆ!
ReplyDeleteಅಶೋಕವರ್ಧನ
ಅಶೋಕರೇ
ReplyDeleteಬ್ಲಾಗ್ ನೋಡಿದೆ! ಚೆನ್ನಾಗಿದೆ! ಅಶ್ವತ್ಥಾಮ ಹತಕುಂಜರ ಯಕ್ಷಗಾನ ಪ್ರಸಂಗ ನೋಡಿದಂಗಾಯ್ತು!
ವೈದೇಹಿ ಅಕ್ಕಂಗೆ ದೀರ್ಘಾಯುಷ್ಯ ಆಗಲಿ!
ಕೇಸರಿ ಪೆಜತ್ತಾಯ