

ನಾನು ಕ್ರಮದಂತೆ ನಮಸ್ಕಾರ ಕೊಟ್ಟು, ಪ್ರವರ ಹೇಳಿ “ಮಾರ್ಚ್ ಕೊನೆಯಲ್ಲಿ ನನ್ನಿಂದ ಕೊಂಡ ಪುಸ್ತಕಗಳ ಪಾವತಿ ಇನ್ನೂ ಬಂದಿಲ್ಲ, ಸ್ವಲ್ಪ ನೋಡ್ತೀರಾ?” ನನ್ನ ಮಾತು ಮುಗಿಯುವುದಕ್ಕಿಲ್ಲ, ಕಛೇರಿಯ ವಕ್ತಾರ ದುಡುಕಿದ “ಎಂಥ ಸ್ವಾಮಿ, ಪಾವತಿ ಕೊಟ್ಟಾಗಿದೆ. ಯಾವ ಬಾಕಿಯೂ ಇಲ್ಲ.” ಆತನ ಸ್ವರಭಾರ ಮತ್ತು ಅನಿರೀಕ್ಷಿತ ಉತ್ತರ ನನ್ನನ್ನು ಒಂದು ಗಳಿಗೆ ಯೋಚಿಸುವಂತೆ ಮಾಡಿತು. ನಿಧಾನಕ್ಕೆ ಮುಂದುವರಿಸಿದೆ “ನಾನು ಕಾಲೇಜಿನ ಹೆಸರಿಗೆ ಕ್ರೆಡಿಟ್ ಬಿಲ್ಲ್ ಕೊಟ್ಟಿದ್ದೆ. ನಿಮ್ಮ ಪಾವತಿ ಹೇಗೆ ಹೋಗಿದೆ? ಪ್ರತಿಯಾಗಿ ನನ್ನ ರಸೀದಿ ನಿಮ್ಮಲಿದೆಯೇ?” “ಅದೆಲ್ಲಾ ಆಗಿರ್ತದೆ, ನಮ್ಮಲ್ಲಿ ಯಾವ ಬಿಲ್ಲೂ ಪೆಂಡಿಂಗಿಲ್ಲ. ನಿಮ್ಮ ಕಡತ ಸರೀ ತನಿಖೆ ಮಾಡಿಕೊಳ್ಳಿ” ಎಂದು ಅಸಹನಾವಾಣಿ ಕುಟುಕಿತು. ಈಗ ನನಗೂ ಹಠ ಬಂತು “ಪಾವತಿ ಕೊಟ್ಟ ವಿವರ, ನನ್ನ ರಸೀದಿ ಸಂಖ್ಯೆ ಹೇಳಿ” ಎಂದು ಒತ್ತಾಯಿಸಿದೆ. ಅತ್ತಣ ಗಂಟುಮೋರೆ “ತಗೊಳಿ, ಗ್ರಂಥಪಾಲರಲ್ಲೆ ಮಾತಾಡಿಕೊಳ್ಳಿ” ಎಂದು ಕಾಲೇಜಿನ ಅಂತಃಸಂಪರ್ಕದಲ್ಲಿ ನನ್ನನ್ನು ತಳ್ಳಿದರು. ಗ್ರಂಥಪಾಲ ಅಸಹಾಯಕ - ಕಾಲೇಜು ಕಛೇರಿ ಮತ್ತು ಸಹಕಾರಿ ಸಂಘದ ನಡುವಣ ಕೇವಲ ರಬ್ಬರ್ ಮೊಹರು ಇರಬೇಕು. ಆತ ಸಹಜವಾಗಿ “ಸಂಘದ ಕಾರ್ಯದರ್ಶಿ (ಓರ್ವ ಹಿರಿಯ ಅಧ್ಯಾಪಿಕೆ, ನನಗೆ ಪರಿಚಿತರೇ) ಈಗ ಇಲ್ಲಿಲ್ಲ. ವಿವರಗಳು ಅವರಲ್ಲಿವೆ. ನಾನವರಿಗೆ ನಾಳೆ ಬಂದಾಗ ತಿಳಿಸುತ್ತೇನೆ. ಮತ್ತವರೇ ನಿಮ್ಮನ್ನು ಸಂಪರ್ಕಿಸುತ್ತಾರೆ.”

ದಿನ ಕಳೆಯಿತು. ಕಾರ್ಯದರ್ಶಿಯವರ ದೂರವಾಣಿ ಕರೆ ಬಂತು ಮತ್ತು ಸಮಾಧಾನದಲ್ಲೇ ಹೇಳಿದರು “ಅತ್ರಿ ಹೆಸರಿನ ಪಾವತಿ ಚೆಕ್ನ್ನು (ಮೂಲ್ಕಿ ಸಿಂಡಿಕೇಟ್ ಬ್ಯಾಂಕಿನದು) ನಾನೇ ಸಹೋದ್ಯೋಗಿ ಮಿತ್ರರ ಮೂಲಕ ಕಳಿಸಿಕೊಟ್ಟಿದ್ದೇನೆ ಸಾರ್. ಮತ್ತೆ ನಿಮ್ಮ ರುಜು ಸಹಿತ ವೋಚರ್ ಕೂಡಾ ಪಡೆದುಕೊಂಡಿದ್ದೇನೆ. ನಿಮ್ಮಲ್ಲೇ ಏನೋ...” ಈಗ ನನಗಿದ್ದ ಸಣ್ಣ ಅಧೈರ್ಯ ಕಳಚಿಕೊಂಡಿತು. ಪಾವತಿ ನಗದಿನ ರೂಪದಲ್ಲಿ ಬಂದದ್ದಾಗಿದ್ದರೆ, ನನ್ನನ್ನು ‘ಮುದಿಮರುಳು’ ಎಂದು ಝಾಡಿಸಿಬಿಟ್ಟಿದ್ದರೆ ಸುಧಾರಿಸುವುದು ಕಷ್ಟವಿತ್ತು. ಹಾಗಾಗಿ ಹೆಚ್ಚಿನ ಧೈರ್ಯದಲ್ಲಿ “ಹೋ ಚೆಕ್ಕೇ. ಅಂದರೆ ಅದರ ವಿವರಗಳನ್ನಾದರೂ ಕೊಡಿ. ಮತ್ತೆ ಕ್ರೆಡಿಟ್ ಬಿಲ್ಲಿಗೆ ಪಾವತಿ ಬಂದಾಗ ನಾನು ನನ್ನದೇ ರಸೀದಿ ಕೊಡುವ ಕ್ರಮ ಇಟ್ಟುಕೊಂಡಿದ್ದೇನೆ. ಆ ವಿವರಗಳನ್ನಾದರೂ ಕೊಡಿ” ಎಂದೆ. ಅವರು ಏಪ್ರಿಲ್ ಮೂರರ ಚೆಕ್ ನಂಬರ್ ಏನೋ ಕೊಟ್ಟರು. ನಾನು ರಸೀದಿ ಕೊಡಲಿಲ್ಲವೆಂದೂ ಕಾಲೇಜಿನ ಮುದ್ರಿತ ವೋಚರ್ ಮೇಲೇ ಸಹಿ ಹಾಕಿದ್ದಿದೆಯೆಂದೂ ಅದರ ಛಾಯಾ ನಕಲು ಕಳಿಸುವೆನೆಂದೂ ಹೇಳಿ ಒಮ್ಮೆಗೆ ಮುಗಿಸಿದರು. ಆದರೆ ಅವರು ನಿಜವಾಗಿ ವಿರಮಿಸಲಿಲ್ಲ. ಕೆಲ ಹೊತ್ತು ಕಳೆದು ಹೆಚ್ಚಿನ ವಿವರ ಸಹಿತ ಮತ್ತೆ ದೂರವಾಣಿಸಿದರು. ನನ್ನಂಗಡಿಯ ಹೆಸರಿನಲ್ಲೇ ಇದ್ದ ಚೆಕ್ಕು ಕೆ.ಎಸ್.ರಾವ್ ರಸ್ತೆಯ ಕಾರ್ಪೊರೇಶನ್ ಬ್ಯಾಂಕಿನ ಶಾಖೆಯ ಮೂಲಕ ಹಾಜರಾಗಿ ಏಪ್ರಿಲ್ ಆರರಂದೇ ನಗದಾಗಿರುವುದನ್ನೂ ಸಾರಿದರು. ಹೆಚ್ಚಿನ ತಿಳುವಳಿಕೆಗಾಗಿ ಮಾರಣೇ ದಿನವೇ ಆ ಚೆಕ್ ತಂದೊಪ್ಪಿಸಿದ ವ್ಯಕ್ತಿಯ (ಕಾಲೇಜಿನ ಇನ್ನೋರ್ವ ಜವಾಬ್ದಾರಿಯುತ ಅಧ್ಯಾಪಕ) ಮೂಲಕವೇ ‘ನಾನು ಸಹಿ ಮಾಡಿದ’ ವೋಚರನ್ನೂ ನೋಡಲು ಕಳಿಸಿಕೊಡುವುದಾಗಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಯಶಸ್ವಿಯಾಗಿ ಚೆಂಡನ್ನು ನನ್ನಂಗಳಕ್ಕೆ ದಾಟಿಸಿದ್ದರು. ನನ್ನ ಬ್ಯಾಂಕ್ ಪಾಸ್ ಪುಸ್ತಕ ಮತ್ತು ನಗದು ಅಥವಾ ಚೆಕ್ ಜಮಾ ಮಾಡುವ ಚಲನ್ ಪುಸ್ತಕಗಳನ್ನು ತನಿಖೆ ಮಾಡಿದೆ - ರೂ ೧೦೧೬೭/-ರ ಯಾವುದೇ ನಮೂದುಗಳಿರಲಿಲ್ಲ. ಬ್ಯಾಂಕ್ನಲ್ಲಿ ಗಣಕ ಚಾಲಿತ ಮುದ್ರಕ ಪಾಸ್ ಪುಸ್ತಕ ಮುದ್ರಿಸುವಾಗ ಒಮ್ಮೊಮ್ಮೆ ನಡು ಸಾಲಿನ ನಮೂದುಗಳು ಬಾರದಿರುವುದು ಅಥವಾ ಮಸುಕಾಗಿರುವುದು ನನಗೆ ರೂಢಿಸಿತ್ತು. ಹಾಗಾಗಿ ನನ್ನ ಬ್ಯಾಂಕಿಗೂ ಒಮ್ಮೆ ಹೋಗಿ ಆರನೇ ತಾರೀಕಿನ ಹಿಂದು ಮುಂದಿನ ನಾಲ್ಕೈದು ದಿನಗಳನ್ನೇ ಸೇರಿಸಿ ಅದು ಬಂದಿಲ್ಲವೆನ್ನುವುದನ್ನೂ ಖಾತ್ರಿ ಪಡಿಸಿಕೊಂಡೆ. ಇನ್ನು ವೋಚರ್ ಸಂಗತಿ.
ಮಾರಣೇ ದಿನ ಸಂಜೆ ಕಾರ್ಯದರ್ಶಿಯ ಪ್ರತಿನಿಧಿ ವೋಚರ್ ತಂದು ನನ್ನ ಮುಖಕ್ಕೆ ಹಿಡಿದಾಗ ಅದೆಲ್ಲಾದರೂ ನನ್ನದೇ ಸಹಿಯಾಗಿದ್ದರೆ ಏನು ಗತಿ ಎಂದು ಸಂಶಯದ ಹುಳು ಕೊರೆಯತೊಡಗಿತು. ಕೆಲವು ಸಲ ಒಂದೆರಡು ಗಿರಾಕಿಗಳನ್ನು ಸುಧಾರಿಸುವ ಎಡೆಯಲ್ಲಿ ಕೊರಿಯರ್ರೋ ಅಂಚೆಯಣ್ಣನೋ ಯಾವುದಾದರೂ ಪ್ರಕಾಶಕ/ ವಿತರಕರ ಪ್ರತಿನಿಧಿಗಳೋ ‘ಮಾಲು’ ಕೊಟ್ಟು ವೋಚರ್ ಸಹಿ, ಸೀಲು ಪಡೆದುಕೊಂಡು ಹೋಗುವುದು ನಡೆದಿರುತ್ತದೆ. ವಾಸ್ತವವಾಗಿ ಅವರು ಕೊಟ್ಟದ್ದೇನು ಎನ್ನುವುದನ್ನು ಮತ್ತೆ ವಿರಾಮದಲ್ಲಿ ನೋಡಿಕೊಳ್ಳುವುದು ಇದ್ದರೂ ಎಂದೂ ತಪ್ಪಿದ್ದಿಲ್ಲ. ಈ ಕಾಲೇಜಿನ ಪ್ರತಿನಿಧಿಗೆ ಹಾಗೆಲ್ಲಾದರೂ ಅನುಮೋದನೆ ಕೊಟ್ಟದ್ದಿರಬಹುದೇ? ಆತ ದುರುದ್ದೇಶಪೂರ್ವಕವಾಗಿ ಚೆಕ್ಕನ್ನು ತನ್ನಲ್ಲೇ ಉಳಿಸಿಕೊಂಡು ತನ್ನ ಖಾತೆಗೆ ಹಾಕಿಕೊಂಡಿರಬಹುದೇ? ಚೆಕ್ ಕ್ರಾಸ್ ಆಗಿತ್ತೇ ‘ಖಾತಾಪಾವತಿ ಮಾತ್ರ’ ಎಂಬ ಷರಾ ಹೊತ್ತಿತ್ತೇ? ಅಧ್ಯಾಪಕ ಈ ಸ್ಥಿತಿಯನ್ನು ಮುಂದಾಲೋಚಿಸಿ ಸಾದಾ ಚೆಕ್ಕೇ (bearer) ಬರೆಸಿಕೊಳ್ಳುವಲ್ಲಿ ಕಾಲೇಜು ಸಿಬ್ಬಂದಿ ಶಾಮೀಲಾಗಿರಬಹುದೇ? ಕಾರ್ಪೊರೇಶನ್ ಬ್ಯಾಂಕಿನವರು ಆ ಖಾತಾದಾರನ ವಿಶ್ವಾಸಾರ್ಹತೆಯ ಮೇಲೆ ‘ಅತ್ರಿ ಬುಕ್ ಸೆಂಟರ್’ನ್ನು ಅವಗಣಿಸಿರಬಹುದೇ? ಹಾಗೆಲ್ಲಾ ಒಂದು ಮುಖ. ಯಾವುದಕ್ಕೂ ಇರಲಿ ಎಂದು ಒಂದು ಅಂಚೆ ಕಾರ್ಡಿನಲ್ಲಿ ಸೂಕ್ಷ್ಮವಾಗಿ ಇವೆನ್ನೆಲ್ಲಾ ನಮೂದಿಸಿ ಕಾಲೇಜಿನ ಪ್ರಾಂಶುಪಾಲರಿಗೆ ‘ನನಗೆ ಪಾವತಿ ಬಂದಿಲ್ಲ. ಕೂಡಲೇ ನಿಮ್ಮಲ್ಲಿ ತನಿಖೆ ಮಾಡಿ ವ್ಯವಸ್ಥೆ ಮಾಡಿ’ ಎಂದು ಬರೆದು ಹಾಕಿಬಿಟ್ಟೆ.
ಇನ್ನು ನನ್ನ/ನಮ್ಮ ಮರೆವು? ಇಲ್ಲೂ ಕೆಲವು ಸಾಧ್ಯತೆಗಳು ಮೊಳೆತವು! ಹೊರ ಊರಿನ ಚೆಕ್ಕ್ ಬಂದಾಗ ಬ್ಯಾಂಕ್ ವಿಧಿಸುವ ಕಲೆಕ್ಷನ್ ಛಾರ್ಜ್ ಮತ್ತು ವಿಳಂಬ ತಪ್ಪಿಸಲು ಬ್ಯಾಂಕೇ ಸುಲಭ ಉಪಾಯ ಕೊಟ್ಟಿತ್ತು (ಮತ್ತು ನಾನದನ್ನು ಹಲವು ಬಾರಿ ಬಳಸಿದ್ದೂ ಇತ್ತು). ಅಂಥಾ ಚೆಕ್ಕನ್ನು ಕನಿಷ್ಠ ತೊಂಬತ್ತು ದಿನಕ್ಕೆ ಯಾವುದೇ ನಿರಖು ಠೇವಣಿಯಲ್ಲಿ ತೊಡಗಿಸಿದ್ದೇ ಆದರೆ ಶುಲ್ಕ ಹಾಗೂ ವಿಳಂಬ ಇರುವುದಿಲ್ಲ. ಕೂಡಲೇ ನನ್ನ ಕಡತ ತೆರೆದು ನೋಡಿಕೊಂಡೆ. ಇಲ್ಲ, ಆ ಸಮಯದಲ್ಲಿ ನಾನು ಯಾವುದೇ ನಿರಖು ಠೇವಣಿ ಎಲ್ಲೂ ಮಾಡಿಸಿಕೊಂಡಿರಲಿಲ್ಲ. ಅದಕ್ಕೂ ಹೊರತಾಗಿ ನನಗೆ ಕಾರ್ಪೊರೇಶನ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಯಾವುದೇ ರೀತಿಯ ಖಾತೆ ಮತ್ತು ವ್ಯವಹಾರವಿಲ್ಲ.
ಇತ್ತ ದೇವಕಿ ಅರ್ಥಾತ್ ನನ್ನ ಹೆಂಡತಿಗೆ ಸ್ವತಂತ್ರ ‘ತಲೆನೋವು’ ಅಂಟಿಕೊಂಡಿತು. ಅಂಗಡಿಯಲ್ಲಿ ನಾನು ಸಂಜೆ ಕಾಫಿ ಕುಡಿಯುವ ನೆಪದಲ್ಲಿ ಹೊರಬಿದ್ದವನು ಕೆಲವೊಮ್ಮೆ ಒಂದೆರಡು ಗಂಟೆ ಹೊರಗೆ ಹೋಗಿರುವುದುಂಟು. ಆಗ ಅಂಗಡಿಯನ್ನು ಹೆಚ್ಚಾಗಿ ದೇವಕಿ (ಕೆಲವೊಮ್ಮೆ ಸಹಾಯಕ ಶಾಂತಾರಾಮನೂ) ವಹಿವಾಟು ನೋಡಿಕೊಳ್ತಾಳೆ. ಅವಳಿಗೆ ಕಾರ್ಪೊರೇಶನ್ ಬ್ಯಾಂಕ್ನಲ್ಲಿ ‘ನಾಲ್ಕಾಣೆ’ ಖಾತೆಯೂ ಒಂದಿದೆ. ಅದು ಲೆಕ್ಕಕ್ಕೆ ಬೆಸೆಂಟ್ ಕಾಲೇಜು ಕಟ್ಟಡದ ಒತ್ತಿಗಿರುವ ಶಾಖೆಯಲ್ಲೇ ಆದರೂ ಈ ಬ್ಯಾಂಕುಗಳನ್ನು ಪೂರ್ಣ ನಂಬುವ ಹಾಗಿಲ್ಲ! (ಉದಾ: ಹಂಪನಕಟ್ಟೆಯಲ್ಲೇ ಇದ್ದ ಕೆನರಾ ಬ್ಯಾಂಕಿನ ಎರಡನೇ ಶಾಖೆಗೆ ಭೂ ನಿಶಾನಿ - ಬಲ್ಮಠ ರಸ್ತೆ! ಬಲ್ಮಠ ವೃತ್ತದಲ್ಲಿದ್ದ ಇನ್ನೊಂದೇ ಶಾಖೆಗೆ ಕಲೆಕ್ಟರ್ಸ್ ಗೇಟ್. ಮತ್ತದು ಈಗ ಕಟ್ಟಡ ಬದಲಾಯಿಸುವ ನೆಪದಲ್ಲಿ ಬೆಂದೂರ್ ಸರ್ಕಲ್ಲಿಗೆ ಹೋಗಿ ಕುಳಿತಿದೆ!) ಅಂಗಡಿಯಲ್ಲಿ ನನ್ನ ಗೈರು ಹಾಜರಿನ ವೇಳೆ ತಾನು ಸ್ವೀಕರಿಸಿರಬಹುದಾದ ಚೆಕ್ಕನ್ನು ತಪ್ಪಿ ತನ್ನ ಕಾರ್ಪೊರೇಶನ್ ಖಾತೆಗೆ ಜಮಾ ಮಾಡಿದ್ದಿರಬಹುದೇ? ಅದರ ಅಸಾಧ್ಯತೆಯನ್ನು ತನ್ನೊಳಗೇ ಅವಳು ಬುದ್ಧಿಪೂರ್ವಕವಾಗಿ ಎಷ್ಟು ಕಂಡುಕೊಂಡರೂ ಮೆಟ್ಟಿದಷ್ಟೂ ಮೊಳೆಯುವ ಬಾಳೆ ಕಂದಿನಂತೆ ಕಾಡುತ್ತಲೇ ಇತ್ತು!



**********
ಶ್ರೀ ಅಶೋಕವರ್ಧನರಿಗೆ ನಮಸ್ಕಾರಗಳು.
ReplyDeleteನೀವು ಚಕ್ ರವ್ಯೂಹ ಭೇದಿಸಿದ್ದು ಕುತೂಹಲದಿಂದ ಓದಿಸಿತು.
ನಾನು ನಿನ್ನೆ ನಿಮ್ಗೆ ಖಾ(ನಿಮ್ಮ ಕ್ಯಾ!)ತೆಗೆ ಬೇಂಕಿನಲ್ಲಿ ಪಾವತಿಸುವಾಗ
ಬೇಂಕಿನವರಿಗೆಗೆ ಸಹಾಯವಾಗಲೆಂದು
ಕನ್ನಡದಲ್ಲ್ತ್ಲಿಬರೆದಿದ್ದ ಚಲನೆ ಜೊತೆ ನಿಮ್ಮ ರಸೀತಿಯ ಹಿಂದಿನ ಬರಹವನ್ನೂ ಅವರಿಗೆ ಕೊಟ್ಟಿದ್ದೆ.
ಅದು ಇಂದು ನಿಮಗೆ ತಲುಪಿದೆ ಎಂದು ಭಾವಿಸಿದ್ದೇನೆ.
ಚೆಕ್ಕನ್ನು 90 ದಿನಗಳ ಠೇವಣಿಯಾಗಿರಿಸಿದರೆ ಬ್ಯಾಂಕಿನ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲವೆಂದು ನನಗೆ ಗೊತ್ತಿರಲಿಲ್ಲ. ಬಹುಶಃ ಅದಕ್ಕೆ ಮೊತ್ತದ ಕನಿಷ್ಠ ಮಿತಿ ಇರಲಾರದು.
ನನಗೆ ಅತಿ ಸಣ್ಣ ಮೊತ್ತಕ್ಕೂ ಚೆಕ್ ಬರುತ್ತವೆ. ಅದರಲ್ಲಿ ಸಂಗ್ರಹಣ ಶುಲ್ಕ ಮುರಿದುಕೊಂದರೆ
ನನಗೆ ಅದರ ಅರ್ಧವೂ ಸಿಕ್ರುಕಿವುದಿಲ್ಲ!
ಮಾಹಿತಿಗೆ ಧನ್ಯವಾದಗಳು
ಪಂಡಿತಾರಾಧ್ಯ
ಮುಲ್ಕಿಯ ಕಾಲೇಜು ಸರ್ಕಾರೀ ಕಾಲೇಜು ಆಗಿದ್ದರೆ ಆ ಮಟ್ಟದಲ್ಲಿ ಆದ ತಪ್ಪಿಗೆ ಮೊದಲು ದೊರೆತ ಉದ್ಧಟತನದ ಉತ್ತರಕ್ಕೆ ನನಗೇನೂ ಆಶ್ಚರ್ಯ ಆಗುವುದಿಲ್ಲ. ಖಾಸಗಿ ಕಾಲೇಜು ಆಗಿದ್ದರೆ ಆಡಳಿತ ಮಂಡಲಿ ಮೊಳಕೆಯೊಡೆಯುತ್ತಿರುವ ಬೇಜವಾಬ್ದಾರೀತನವನ್ನು ಈಗಲೇ ನಿರ್ಮೂಲಗೊಳಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಇನ್ನೊಂದು ಖಾಸಗಿ ಅಂಗಡಿಯವರು ನೂರಕ್ಕೆ ನೂರು ಪ್ರಾಮಾಣಿಕರಲ್ಲ ಎಂದು ಅರ್ಥೈಸುತ್ತೇನೆ. ಬ್ಯಾಂಕಿನ ಘಟನೆ ನನಗೆ ಅಚ್ಚರಿ ಉಂಟು ಮಾಡಲೇ ಇಲ್ಲ. ನಾನು 'ಸೆಲ್ಫ್' ಚೆಕ್ ನೀಡಿದಾಗ ಇನ್ನಾರದೋ ಖಾತೆಯಿಂದ ಹಣವನ್ನು ಕಡಿತಗೊಳಿಸಿ ನನಗೆ ಕೊಟ್ಟದ್ದು, ನನ್ನ ಖಾತೆಗೆ ಸಂದಾಯವಾಗ ಬೇಕಾದ್ದಕ್ಕಿಂತ ಹೆಚ್ಚು ಹಣ 'ಟೈಪಿಂಗ್ ಮಿಸ್ಟೇಕ್'ನಿಂದಾಗಿ ಸಂದಾಯವಾದದ್ದು ಇತ್ಯಾದಿ ಇತ್ಯಾದಿ ಅನುಭವಗಳು ನನಗಾಗಿವೆ.
ReplyDeleteಕಾಲೇಜಿನಲ್ಲಿರುವ ಬೋಧಕರೆಲ್ಲರೂ ವಿದ್ಯಾವಂತರು ಎಂಬುದು ನಿನ್ನ ತಪ್ಪು ಕಲ್ಪನೆ. ಅವರ ಪೈಕಿ ಹೆಚ್ಚಿನವರು 'ಡಿಗ್ರಿವಂತರು'.
ಖಾಸಗಿ ಕಾಲೇಜು ಆದ್ದರಿಂದ ಕಾಲೇಜಿನವರೂ ನೀವೂ ಬಚಾವ್. ಗೋರ್ಮೆಂಟಾಲಿಟಿಯ ಕಾಲೇಜಾಗಿರುತ್ತಿದ್ದರೆ ಆ ಚಕ್ಕನ್ನು ಪುನಾ ಪಡೆಯಲು ಎಷ್ಟು ಗೋಳಾಟವಾಗುತ್ತಿತ್ತು? ನಿಮ್ಮ ಮತ್ತು ಟ್ರೆಷರಿಯ ನಡುವೆ ಸಿಕ್ಕಿ ಒದ್ದಾಡಬಹುದಾಗಿದ್ದ ಪ್ರಾಂಶುಪಾಲರ ಸ್ಥಿತಿ ಊಹಿಸಿ !!!!
ReplyDeleteನಿಮ್ಮ ಪ್ರಥಮ ದೂರವಾಣಿಗೆ ಸಿಕ್ಕ ಪ್ರತಿಕ್ರಿಯೆ ಕೇಳಿ ನನಗೂ ಬೇಸರ ಉಂಟಾಯಿತು. ಲಕ್ಷಾಂತರ ಕಾಲುಗಳು ಹಾರಾಡುವಾಗ ಹಲವು ಸಲ ನಮ್ಮ ಕರೆಗೆ ನ್ಯಾಯ ದೊರಕುವುದಿಲ್ಲ. ನನ್ನಂತೆ ಕಿವಿ ಸಮಸ್ಯೆ ಇರುವವರಂತೂ ಬಹಳ ಗೊಂದಲಕ್ಕೆ ಒಳಗಾಗುತ್ತಾರೆ. ಹಾಗಾಗಿ ಕರೆ ಸ್ವೀಕರಿಸಿದ ನೌಕರನನ್ನು ಹುಡುಕಿ ಆ ಕಾಲೇಜಿನವರು ಚೆನ್ನಾಗಿ ಉಗಿಯಬೇಕು.
ReplyDeleteಹಲವೊಮ್ಮೆ ಹೊಸತಾಗಿ ತೆರೆದ ಖಾತೆಗಳಿಗೆ ಪಾವತಿಸಬಾರದೆಂಬ ಖಾತೆದಾರರ ಕೋರಿಕೆ ಹಿಂಬಾಗದಲ್ಲಿ ಮುದ್ರಣವಾದರೂ ಅದಕ್ಕೆ ಗಮನ ಕೊಡುವುದು ಕಡಿಮೆ. ಯಾಂತ್ರಿಕವಾಗಿ ರುಜು ಮತ್ತು ಮೊತ್ತ ಮಾತ್ರ ಗಮನಿಸುತ್ತಾರೆ.
Some times it happens. You R learned / good old people. We apologize [orally] regret for the error. Sorry. ..... This is the words from Banking heads. If U go beyond this your Degrees [Learned / good old people] withdrawn and Eric quarrelsome trade mark given...
ReplyDeleteAthyutthama Durantha haasyavu
ReplyDelete--mpjoshy.
GIRISH BHAT SIR'S nudigalu aksharasha anubhava sathya irabahudu.
ReplyDeleteI think the management of VIJAYA COLLEGE has not yet appointed the Principle, after the death of Prof. Joshi.Hence perhaps the initial irresponsibility of the office.
ReplyDeleteThe copy of this article may be sent to the NEWS PAPERS and to the Management. MLSAMAGA
ನಿಮ್ಮ ಚೆಕ್ನ ಮಾರ್ಗ ಕಂಡು ಹಿಡಿಯುವ ಪತ್ತೇದಾರಿ ಕಥೆ ಚನ್ನಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ವೊರ್ಕಹೊಲಿಕ್ಸ್ ಗೆ ಸ್ಪಷ್ಟ ನಿದರ್ಶನ ನಿಮ್ಮ ಲೇಖನ ಛಲಬಿಡದ ತ್ರಿವಿಕ್ರಮನ ನೆನಪು ತರುತಿದ.
ReplyDeleteಶುಭಮಕ್ಕೆ,
ಪಾ ನ ಮಯ್ಯ
nice..
ReplyDeletevisit my blog @ http://ragat-paradise.blogspot.com
RAGHU
ಬ್ಯಾಂಕ್ ಎಡವಟ್ಟಿನ ಕಥೆಗಳು
ReplyDeleteಎಂಜಿಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗ (ಸದ್ಯ ನಿವೃತ್ತ) ಬೆನ್ನಹುರಿ ನೆಟ್ಟಗಿಟ್ಟು, ಹಸ್ತಗಳನ್ನು ಶುದ್ಧವಿಟ್ಟು ನಡೆದ ಬಲದಲ್ಲಿ ಪ್ರೊ| ಎಂ.ಎಲ್ ಸಾಮಗರು ಕೊಟ್ಟ ಸೂಚನೆಯೇನೋ ಉಚಿತವಾದದ್ದೇ. ಆದರೆ ನನ್ನ ವಿವೇಚನೆಯ ನೆಲೆಯಲ್ಲಿ ಈ ಪ್ರಸಂಗವನ್ನು ತೂಗಿದಾಗ ಯಾರೂ ದುರುದ್ದೇಶದಿಂದ ವರ್ತಿಸಿಲ್ಲ. ಅಲ್ಲದೆ ಗೊಂದಲ ತಿಳಿಯಾಗಿಸಲು ಮತ್ತು ನ್ಯಾಯ ಸಂದಾಯಕ್ಕೆ ವಿಳಂಬಿಸಲಿಲ್ಲ ಎಂದೂ ಕಂಡದ್ದರಿಂದ ಸಾಮಗರು ಸೂಚಿಸುವ ಮೊದಲೇ ‘ಮೇಲಿನವರಿಗೆ ದೂರು’ ಅನಗತ್ಯ ಎಂದು ನಿರ್ಧರಿಸಿದ್ದೆ. ಈ ಗೊಂದಲದಲ್ಲಿ ಪಾಲುದಾರರಾದ ಪುಸ್ತಕ ಮಳಿಗೆ ಅಥವಾ ಬ್ಯಾಂಕಿನ ವ್ಯವಹಾರಗಳನ್ನು ಪ್ರಶ್ನಿಸಲು ನಾನು ಅನಧಿಕಾರಿ. (ಮಳಿಗೆಯನ್ನು ಕಾಲೇಜಿನವರು, ಬ್ಯಾಂಕನ್ನು ಮಳಿಗೆಯವರು ಕ್ಷಮಾಪೂರ್ವಕವಾಗಿಯೇ ಕೇಳಬಹುದು; ಏನು ಮಾಡಿದರೆಂದು ನಾನು ತಿಳಿಯಹೋಗಿಲ್ಲ) ಆದರೆ ಸಾರ್ವಜನಿಕ ತಿಳುವಳಿಕೆಗಾಗಿ ಒಟ್ಟು ಪ್ರಸಂಗವನ್ನು ಲೇಖನ ಮಾಡಿದೆ. ಸಂಸ್ಥೆಗಳ ಎಚ್ಚರಕ್ಕಾಗಿ ಲೇಖನದ ಕುರಿತು ಅವರ ಗಮನವನ್ನೂ ಸೆಳೆದಿದ್ದೇನೆ.
ಲೇಖನ ಪ್ರಕಟವಾದ ಬೆನ್ನಿಗೆ ನನಗೆ ಆಪ್ತ ಸಮಾಲೋಚನೆಯಲ್ಲಿ ಬ್ಯಾಂಕ್ ವ್ಯವಸ್ಥೆಯ ಇತರ ಕೆಲವು ಗೊಂದಲ ಕಥೆಗಳು ಹರಿದು ಬಂದವು. ಅದರಲ್ಲಿ ಮರುಕಳಿಕೆಯಾಗದಂತೆ ಕೆಲವನ್ನು ಸೂಕ್ಷ್ಮವಾಗಿ ಪ್ರಸ್ತುತಪಡಿಸುವುದೂ ಲೇಖನದಷ್ಟೇ ಅವಶ್ಯ ಎಂದು ಭಾವಿಸುತ್ತೇನೆ.
ಪ್ರಸ್ತುತ ಬ್ಯಾಂಕ್ ಮ್ಯಾನೇಜರ್ ದೂರವಾಣಿಸಿ ಬೇಷರತ್ ಕ್ಷಮಾಯಾಚನೆ ಮಾಡಿದ್ದು ಅವರ ದೊಡ್ಡಗುಣ. ನನಗೆ ಪ್ರತಿಕ್ರಿಯೆ ಅಥವಾ ಕಾರಣ ಕೊಡುವ ಉದ್ದೇಶವಿಲ್ಲದೆ ಅವರು ಬ್ಯಾಂಕುಗಳು ಗಣಕೀಕೃತಗೊಳ್ಳುವ ಈ ಸ್ಥಿತ್ಯಂತರ ಕಾಲದ ಕಷ್ಟಗಳನ್ನು (ಗಣಕೀಕರಣ) ಸೂಕ್ಷ್ಮವಾಗಿ ನಿವೇದಿಸಿಕೊಂಡದ್ದನ್ನೂ ಇಲ್ಲಿ ಸೇರಿಸಿಕೊಂಡಿದ್ದೇನೆ. (ಎಲ್ಲಾ ಅವರವಲ್ಲ!)
ಪೆನ್ನು ಕಾಗದ ಹಿಡಿದೇ ಕೆಲಸ ನಡೆಯುತ್ತಿದ್ದ ಕಾಲದಲ್ಲಿ ಎಲ್ಲಾ ಕ್ರಿಯೆಗಳಿಗೂ ‘ನಮೂದಿಸುವವನು’, ‘ತನಿಖೆ ಮಾಡಿದವನು’ ಎಂಬ ಎರಡು ಹಂತ ಅನಿವಾರ್ಯವಿತ್ತು. ಇಂದು ಒಂದೇ. ಬರೆಯುವಲ್ಲಿ ತಪ್ಪು ‘ಮರೆವಿನಿಂದ’ ಎಂದೇ ಒಪ್ಪಿಕೊಳ್ಳೋಣ. ಆದರೆ ಗಣಕದಲ್ಲಿ ‘ಆಕಸ್ಮಿಕತೆಯ’ ಪಾಲು ತುಂಬಾ ಇದೆ. ಯಾವುದೇ ಕೀಲಿಯ ಮೇಲಿನ ಒತ್ತು ನಿರ್ದಿಷ್ಟ ಸಮಯ ಮೀರುವುದು, (ಏಳು ಸಾವಿರ ನಮೂದಿಸಬೇಕಾದಲ್ಲಿ ಎರಡು ಸೊನ್ನೆ ಹೆಚ್ಚು ಒತ್ತಿಹೋಗಿ ಆದ ಗೊಂದಲದ ಕಥೆ ಕೇಳಿದ್ದೇನೆ), ಒಂದಕ್ಕಿನ್ನೊ೦ದು ಒತ್ತಿಹೋಗುವುದು (ಖಾತಾ ಸಂಖ್ಯೆ ತಪ್ಪಿ ರಾಮನ ಲೆಕ್ಕ ಕೃಷ್ಣನಿಗೆ ಸೇರಿದ್ದು, ‘ಜಮೆ’ ಕೀಲಿಯ ಬದಲು ‘ವಜಾ’ ಒತ್ತಿದ್ದಕ್ಕೆ ಹಣ ತುಂಬಿಯೂ ಕೊರತೆ ಕಾಡಿದ್ದು) ಇತ್ಯಾದಿ ಇತ್ಯಾದಿ.
ಹೈದ್ರಾಬಾದೀಯೊಬ್ಬ ಮಂಗಳೂರಿಗೆ ಭೇಟಿ ನೀಡಿದ್ದಾಗ ಇದ್ದ ಒಂದೇ ಸ್ವನಾಮಧೇಯದ ಚೆಕ್ಕು ಹಿಡಿದು ತನ್ನ ಬ್ಯಾಂಕಿನ ಸ್ಥಳೀಯ ಶಾಖೆಗೆ ಹೋಗಿ ತುರ್ತು ಮೂವತ್ತು ಸಾವಿರ ನಗದು ತೆಗೆಯಲು ಪ್ರಯತ್ನಿಸಿದ. ಬ್ಯಾಂಕ್ ನಿಯಮ ಹೇಳಿತು ‘ಹೊರ ಊರಿನಲ್ಲಿ ಖಾತಾದಾರ ನಗದು ತೆಗೆಯುವುದಾದರೆ ಹತ್ತು ಸಾವಿರ ಮೀರಲಾಗದು’. ಆತ ಅದನ್ನೇ ಪರಿಚಿತ ಸ್ಥಳೀಯ ವ್ಯಾಪಾರಿಯೋರ್ವನ ಅಸಂಖ್ಯ ಕಲೆಕ್ಷನ್ ಚೆಕ್ಕುಗಳ ನಡುವೆ ಸೇರಿಸಿ ಹಾಜರುಪಡಿಸಿದ. ಪರಿಚಿತ ವ್ಯಾಪಾರಿ ಹೈದ್ರಾಬಾದಿಗೆ ಮೂವತ್ತು ಸಾವಿರ ನಗದು ತನ್ನ ಖಾತೆಯಿಂದ ತೆಗೆದುಕೊಟ್ಟ. ಹೈದ್ರಾಬಾದಿ ಪಾಸ್ ಪುಸ್ತಕದಲ್ಲಿ ಮೂವತ್ತು ಸಾವಿರ ಸ್ವನಾಮಧೇಯಕ್ಕೇ ನಮೂದಾಗಿತ್ತು! ಖ್ಯಾತ ಸಂಸ್ಥೆಗಳ ವಹಿವಾಟಿನಲ್ಲಿ ‘ಪ್ರತಿಷ್ಠೆ’ ಪ್ರಭಾವಿಸುತ್ತದೆ. ಇಲ್ಲೊಂದು ಸಂಭಾವ್ಯತೆ ನೋಡಿ. ಕೃಷ್ಣ ವೆಂಕಟನ ಹೆಸರಿನಲ್ಲಿ ಚೆಕ್ ಬರೆದ. ಅದನ್ನು ಪ್ರಭಾವೀ ರಾಮ (ನಾಮ ಮಹಿಮೆಯಲ್ಲಿ) ನಗದೀಕರಿಸಿಕೊಂಡ. ಆದರೆ ದಾಖಲೆಗಳು ವೆಂಕಟನ ಹೆಸರನ್ನೇ ಉಲ್ಲೇಖಿಸಿ ಆತನಿಗೆ ವಾಸ್ತವದಲ್ಲಿ ಪಂಗನಾಮ ಎಳೆಯುವಲ್ಲಿ ಯಶಸ್ವಿಯಾಗುವ ಅಪಾಯವಿಲ್ಲವೇ?
ಸಂಗ್ರಹ: ಅಶೋಕವರ್ಧನ
ಕಳೆದವಾರ ಕಾರ್ಪೊರೇಶನ್ ಬ್ಯಾಂಕಿನ ಗಿರಾಕಿ ಸೇವಾ ವಿಭಾಗದಿಂದ ಒಂದು ಸಾಲಿನ ಪತ್ರ ಬಂತು - `ನಿಮ್ಮ ಪತ್ರ. ವಿಚಾರಣೆಗೆ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಫಲಿತಾಂಶವನ್ನು ಸದ್ಯದಲ್ಲೇ ನಿಮಗೆ ರವಾನಿಸಲಿದ್ದೇವೆ.'
ReplyDeleteಇಂದು ಮತ್ತೆ ಶಾಖಾ ಕಚೇರಿಯಿಂದ ಮ್ಯಾನೇಜರ್ ಮತ್ತು ಸೀನಿಯ ಮ್ಯಾನೇಜರ್ ದೂರವಾಣಿಸಿ ಅವರ ಕ್ಷಮಾಯಾಚನೆಯನ್ನು ಪುನರುಚ್ಚರಿಸಿದರು. ಹಾಗಾಗಿ ಕೆಳಗಿನ ಪತ್ರ:
ಶ್ರೀ ಕಿಶೋರ್ ಜಿ. ಶಾನುಭೋಗ್ ಇವರಿಗೆ
ಡೆಪ್ಯುಟಿ ಜನರಲ್ ಮ್ಯಾನೇಜರ್, (ಗಿರಾಕಿ ಸೇವಾ ವಿಭಾಗ) ಕಾರ್ಪೊರೇಶನ್ ಬ್ಯಾಂಕ್, ಮಂಗಳೂರು
ಮಾನ್ಯರೇ
ನನ್ನ ೫-೫-೨೦೧೧ರ ಪತ್ರ ಮತ್ತು `ರಾಷ್ಟ್ರೀಕೃತ ಬ್ಯಾಂಕ್ ಹೀಗೂ ಇರಬಹುದೇ?' ಎನ್ನುವ ಬ್ಲಾಗ್ ಲೇಖನದ ಯಥಾಪ್ರತಿ ಬ್ಯಾಂಕಿಗೆ ಎಚ್ಚರಿಕೆಯಾಗಿಯೂ ಸಾರ್ವಜನಿಕರಿಗೆ ತಿಳುವಳಿಕೆಗಾಗಿಯೂ ಬರೆದದ್ದಾಗಿದೆ. ಅದರಲ್ಲಿ ಉಲ್ಲೇಖವಾದ ಹಣಕಾಸಿನ ವಿವರಗಳು ಪೂರ್ಣ ನನ್ನ ತೃಪ್ತಿಗೆ ಪರಿಹಾರವಾಗಿರುವುದರಿಂದ ಇದು ದೂರಿನ ಪತ್ರವಲ್ಲ. (Not a letter of complaint)
ಈ ಲೇಖನವನ್ನು ನನ್ನ ಪತ್ರ ಸೂಚನೆಯ ಮೇರೆಗೆ ಈಗಾಗಲೇ ಸಂಬಂಧಿಸಿದ ಶಾಖಾ ಸಿಬ್ಬಂದಿಗಳು (ದೂರವಾಣಿಯಲ್ಲಿ ನನ್ನನ್ನು ಸಂಪರ್ಕಿಸಿ ಪರಿಚಯಿಸಿಕೊಂಡಂತೆ ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್) ಓದಿ, ಅರ್ಥ ಮಾಡಿಕೊಂಡಿರುತ್ತಾರೆ. ಬ್ಲಾಗ್ ಲೇಖನ ಪ್ರಕಟವಾದ ಮುಂದುವರಿದ ದಿನಗಳಲ್ಲಿ ಅವರು ಮೌಖಿಕವಾಗಿ ಕೊಟ್ಟ `ಬೇಷರತ್ ಕ್ಷಮಾಯಾಚನೆ'ಯನ್ನು ನಾನು ಅದೇ ಲೇಖನದ ಪ್ರತಿಕ್ರಿಯಾ ಅನುಬಂಧದಲ್ಲಿ ಸೇರಿಸಿರುವುದನ್ನು ನೀವು, ಯಾರೂ ನೋಡಬಹುದು. ಹಾಗಾಗಿ ನನಗೇನಾದರೂ ಸ್ವಲ್ಪ ಮಾನಸಿಕ ಆಕ್ರೋಶವಿದ್ದದ್ದನ್ನು ನಾನು ಕಳೆದುಕೊಂಡಿದ್ದೇನೆ ಮತ್ತು ಈ ಪ್ರಕರಣದ ಬಗ್ಗೆ ನಿಮ್ಮಿಂದ ಇನ್ನೇನೂ ಕೇಳಲು ಆಶಿಸುವುದಿಲ್ಲ. ನನ್ನ ಲೆಕ್ಕಕ್ಕೆ ಈ ಪ್ರಸಂಗ ಮುಗಿದಿದೆ. (Issue is closed)
ಇದರ ಯಥಾ ಪ್ರತಿಯನ್ನು ಬ್ಲಾಗಿನಲ್ಲೂ ಹಾಕಿದ್ದೇನೆ.
ನಿಮ್ಮ ಕಾಳಜಿಗೆ ಕೃತಜ್ಞತೆಗಳು.
ಇಂತು ವಿಶ್ವಾಸಿ
ಅಶೋಕವರ್ಧನ ಜಿ.ಎನ್
ಹ್ಹಾ!! ದುಡ್ಡು ಸಿಕ್ಕಿತಲ್ಲಾ... ಪಾರ್ಟಿ ಯಾವಾಗ? ;-) (ಹೀಗೆ ಕೇಳುವವರು ಸುಮಾರು ಜನ ಇರ್ತಾರೆ, ಇದರ ಬಗ್ಗೆ ಮುಂದೊಮ್ಮೆ ನನ್ನ ಬ್ಲಾಗಿನಲ್ಲಿ ಬರೆಯಲಿದ್ದೇನೆ)
ReplyDeleteಆಸಕ್ತಿದಾಯಕವಾದ ಲೇಖನ, ಒಳ್ಳೆ ತಾಳ್ಮೆಯಿಂದ, ಗೌರವಯುತವಾಗಿ ಬರೆದಿದ್ದೀರಿ.
(ಕಳೆದ ಕೆಲವು ವಾರಗಳಲ್ಲಿ ನಿಮ್ಮ ಬ್ಲಾಗ್ ನೋಡಲು ಸಾಧ್ಯವಾಗಿರಲಿಲ್ಲ, ಈಗ ಹಳೆಯದನ್ನು ಕೆದಕುತ್ತಿದ್ದೇನೆ.)
ಇತಿ,
ಕೃಷ್ಣ ಶಾಸ್ತ್ರಿ.
ನನಗೆ ಯಾವುದೋ ಪತ್ತೇದಾರಿ ಕಾದಂಬರಿ ಓದಿದ ಹಾಗಾಯಿತು. ಅಂತೂ ಹಣ ಬಂತು.
ReplyDeletenannu banglore ge hodaga doddian emergency ettu atm card hakidre atm card nalli hanna ella antha corp bank atm alli banthu,corp bank bank ge kalidre nivu chenque kotidira anta halidru ,nanu cheque book avara bali tagode ella ande, nanna acc, hasaralli bare yavarige cheque book kotidru and naanna signature annu koda avra software nalli madiralilla, hage signature node kotidru, nau police compalit kodthi and lead and rbi bank compailt koti andaga
ReplyDeletecompait serios aagi tagondru , and nanna amt nanage kotru,
n