02 May 2009

ಮೆಕ್ಸಿಕೋಕ್ಕೆ ಬನ್ನಿ ಅಂಡಮಾನ್ ಇರಲಿ

ದಾರಿ ತಪ್ಪಿದ ಪತ್ರ-ಪ್ರವಾಸ ಕಥನ  (ಅಂಡಮಾನ್ ಆರನೇ ಭಾಗ?)

ನನ್ನೊಬ್ಬ ತಮ್ಮ ಆನಂದವರ್ಧನ, ನನಗಿಂತ ಐದುವರ್ಷ ಕಿರಿಯ, ಬಾಲ್ಯದಲ್ಲೇ ನನ್ನ ಎನ್ಸಿಸಿ ಬೂಟಿನೊಳಗೇ ಕಾಲು ತೂರಿದ್ದ. ಬಂಡೆ ಹತ್ತುವಲ್ಲಿ ನಾವು ಒಂದೇ ಹಗ್ಗದವರು. ನಾನು ಸ್ನಾತಕೋತ್ತರ ಅಧ್ಯಯನವಿಷಯವಾಗಿ ಇಂಗ್ಲಿಷ್ ಸಾಹಿತ್ಯ ಹಿಡಿದೆ. ಆದರೆ ಅದಕ್ಕೆ ಕೊಂಡ ಗ್ರಂಥ ರಾಶಿಯ ನಿಜ ಓದುಗ (ಇಂಜಿನಿಯರಿಂಗ್ ವಿದ್ಯಾರ್ಥಿ) ಆನಂದ. ಕೆರೆಯಲ್ಲಿ ನನ್ನದು ನಾಯಿಮುಳುಗು, ಅವನದು ಅತ್ಯುನ್ನತ ಜಿಗಿಹಲಗೆ ಮಟ್ಟದ್ದು. ಹೀಗೆ ಹೇಳಿದಷ್ಟೂ ಮುಗಿಯದ ನನ್ನ ‘ಬಹುಹುಚ್ಚುಗಳ’ ನಿಕಟ ಅನುಯಾಯಿ ಆನಂದ. ಅವನ ಮೊದಲ ಅಮೆರಿಕಾ ಭೇಟಿಯ ವಾಪಾಸಾತಿಯಂದು ಅಯಾಚಿತವಾಗಿ ನನಗೆ ತಂದಿತ್ತ ಕೊಡುಗೆ ಗುಡಾರ ಇಂದಿಗೂ ಯಾವುದೇ ಕಾಡಿನಲ್ಲಿ ನನಗೆ ಅರೆಮನೆ. ಆನಂದನ ಕುಟುಂಬ ಇಂದು ಅಮೆರಿಕಾದ ಪ್ರಜೆಗಳು. ಆದರೆ ಗುಡ್ಡೆಹತ್ತುವ ಕುಟುಂಬ (ನಮ್ಮ ಹೆಸರಿನ ಜಿ= ಗುಡ್ಡೆಹಿತ್ಲು, ಕುಟುಂಬ ನಾಮ) ಚಾಳಿ ನಮಗಿಬ್ಬರಿಗೆ ಇನ್ನೂ ಸ್ಪರ್ಧಾತ್ಮಕವಾಗಿ ಒಂದೇ! ಅವನು ಊರಿನ (ಪೋರ್ಟ್‌ಲ್ಯಾಂಡ್) ಹತ್ತೆಂಟು ಮಂಜಿನಬೆಟ್ಟಗಳನ್ನು ಏರಿ, ಸೈಕಲ್ ಪ್ರವಾಸ ಹೋಗಿ ಅದ್ಭುತ ಚಿತ್ರಗಳೊಡನೆ, ನನಗೆ ಹೊಟ್ಟೆಕಿಚ್ಚಾಗುವಂತೆ ಪತ್ರ ಬರೆಯುತ್ತಿರುತ್ತಾನೆ. ಅದರಲ್ಲೊಂದನ್ನು ಸಾರ್ವಜನಿಕ ಓದಿನ ಕುಶಿಗಾಗಿ, ಸಣ್ಣ ಪೀಠಿಕೆಯೊಡನೆ ಕೆಳಗೆ ಕೊಡುತ್ತಿದ್ದೇನೆ.

ಈಚೆಗೆ ನನ್ನ ಮಗ ಅಭಯಸಿಂಹನ ಮದುವೆಯಾಯ್ತು. ಆದರದಕ್ಕೆ ಬರಲಾಗದಂತೆ ಆನಂದನ ವೃತ್ತಿ ಮತ್ತವನ (ಎರಡು ಹುಡುಗಿಯರು) ಮಕ್ಕಳ ವಿದ್ಯಾ ಚಟುವಟಿಕೆಗಳು ತೊಡಕಿಕೊಂಡಿತು. ತೀವ್ರ ವಿಷಾದ ವಾಲ್ಮೀಕಿಯಿಂದ ಮಹಾಕಾವ್ಯವನ್ನು ಸಾರ್ವಜನಿಕಕ್ಕೆ ಉಣಬಡಿಸಿದಂತೆ ಆನಂದನಿಂದ ಆತನ ಕುಟುಂಬದ ಮೆಕ್ಸಿಕೋ ಪ್ರವಾಸಕಥನವನ್ನೇ ನಮಗೆ ಕೊಟ್ಟಿದೆ. (ವಾಸ್ತವವಾಗಿ ಅದಕ್ಕೆ ಪ್ರತಿಯಾಗಿ ನಾನು ಸುಮಾರು ಎರಡು ವರ್ಷ ಹಳೆಯ ನಮ್ಮ ಅಂಡಮಾನ್ ಪ್ರವಾಸಾನುಭವವನ್ನು ಪತ್ರ-ಕಥನದಲ್ಲಿ ಇಳಿಸತೊಡಗಿದೆ ಎಂದರೆ ತಪ್ಪಾಗಲಾರದು.) ಇದು ಖಾಸಗಿ ಪತ್ರ-ಸಂಸ್ಕೃತಿ ಧಾರಾಳ ಇರುವವರೊಳಗಿನ ಎಲ್ಲಾ ಪತ್ರಗಳಂತೆ, ಲಲಿತಪ್ರಬಂಧದ ಕಚ್ಚಾ ರೂಪದಂತೆ (ಜನಪದ ಸಾಹಿತ್ಯ?) ಓತಪ್ರೋತವಾಗಿ ಹರಿಯುತ್ತದೆ. ಮೊದಮೊದಲು ಅವನು ಕೈಯಲ್ಲೇ ಪತ್ರ ಬರೆದು, ಭಾರತಕ್ಕೆ ಬರುವವರ ಮೂಲಕ ಕಳಿಸಿ ಅಂಚೆಗೆ ಹಾಕಿಸುತ್ತಿದ್ದ. ಅದನ್ನು ನಮ್ಮಲ್ಲಿ ಯಾರು ಪಡೆದರೂ ಛಾಯಾಪ್ರತಿ ಮಾಡಿ ಕುಟುಂಬದೊಳಗೆಲ್ಲ ಸರ್ಕೀಟಿಗೆ ಕಳಿಸುವುದಿತ್ತು! ಇಂದು ಮಿಂಚಂಚೆಯ ಸೌಲಭ್ಯ ಮನೆಮನೆಗೇನು ಮನಮನಕ್ಕೆ ವ್ಯಾಪಿಸಿರುವುದರಿಂದ ಆ ಕಷ್ಟವಿಲ್ಲ ಎನ್ನುವುದೆಲ್ಲಾ ನಿಜವೇ. ಆದರೆ ಮಿಂಚಂಚೆ ಎಂದರೆ ಗಣಕದ ನೂರೆಂಟು ಕನ್ನಡ ತಂತ್ರಾಂಶಗಳೊಡನೆ ಪಳಗುವ ಅನಿವಾರ್ಯತೆ ಸೇರಿಕೊಂಡಾಗ ಕಾಗುಣಿತ, ಪದಾರ್ಥ ವಾಕ್ಯಬಂಧಗಳೆಲ್ಲಾ ಕನ್ನಡದ ನಿತ್ಯಬಳಕೆಯಿಂದ ದೂರದಲ್ಲಿರುವ ಆನಂದನಿಗೆ ಏನಕ್ಕೇನೋ ಆಗುವುದು ನೀವು ಕಾಣುತ್ತೀರಿ ಮತ್ತು ಅದು ಸಹಜವೂ ಹೌದು. ಹವ್ಯಕ, ತುಳು, ಆಡು ಶಬ್ದಗಳ ಮಿಶ್ರಣ, ಪೂರ್ವಪರಿಚಿತರೊಳಗಿನ ನುಡಿಗಟ್ಟುಗಳು, ಆತನ ಈಚಿನ ಕನ್ನಡ ಓದುವಣಿಗೆಯ ಕೊರತೆ ಎಲ್ಲಾ (ಕೆಲವೇ ಕಾಗುಣಿತ ತಿದ್ದಿ, ತೀರಾ ಅನಿವಾರ್ಯವಾದ ಒಂದೆರಡು ಕಡೆ ಮಾತ್ರ ಕಂಸದೊಳಗೆ ನಾನು ಅರ್ಥ, ವಿವರಣೆ ಸೂಚಿಸಿ) ನಿಮ್ಮ ಗ್ರಹಿಕೆಗೆ ಬಿಡುತ್ತಿದ್ದೇನೆ.

ಆನಂದವರ್ಧನನ ಪತ್ರ-ಪ್ರವಾಸ-ಕಥನ

(ಮೆಕ್ಸಿಕೊ ಪ್ರಯಾಣ, ಸಾಹಸಗಳು, ಹೊಸ ವರ್ಷ ಮತ್ತು ಇತರ ಕತೆಗಳು)

ಅದಾಗಿ ಆನೊ೦ದಭಾವನು ಅಮ್ಮನಲ್ಲಿ ಬೇಡುವ ಆಶೀರ್ವಾದಗಳು.

ಉ.ಕ.ಸ. ಅ೦ತು ಇ೦ತು ಕು೦ತಿ ಮಕ್ಕಳಿಗೆ ವನವಾಸ ಎ೦ಬ೦ತೆ ಅನೇಕನೇಕ ವರ್ಷಗಳ ನಿರ೦ತರ ತಪಸ್ಸಿನ ಪಲವಾಗಿ ನಾವು ಮೆಕ್ಸಿಕೊ ಹಡಗುಯಾನ ಮಾಡುವುದು ಎ೦ದು ನಿಶ್ಚಯ ಮಾಡಿಡೆವು. ನಿಜ ಹೇಳಬೇಕಾದರೆ ಈ ಪ್ರಯಾಣದ ಮುಖ್ಯ ಕರ್ತೃ ಆಶೋಕ ಭಾವ ಮತ್ತು ಮಿಸ್ಟರ್ ಅಭಯ ಸಿ೦ಹ. ಮಕ್ಕಳಿಗೆ ಅಭಯನ ಮದುವೆಗೆ ಹೋಗಲೆ೦ದು ದುಡ್ಡು, ರಜೆ ಎಲ್ಲ ತಯ್ಯಾರು ಮಾಡಿಟ್ಟೆದ್ದೆ, ಆದರೆ ವಿಧಿ ಇನ್ನೋ೦ದೇ ಬಗೆದಿತ್ತು. ದಶ೦ಬರದಲ್ಲಿ ಸುತರಾ೦ ಸಾದ್ಯವಿಲ್ಲವೆ೦ದಾದಮೇಲೆ ಮಕ್ಕೋ ದುಖ ಸಾಗರದಲ್ಲಿ ಮುಳುಗಿ ಹೋದರು. ಎಷ್ಟೋ ವರ್ಷದ ಕನಸು ನುಚ್ಚುನೂರಾಗಿತ್ತು, ಹತಾಶೆ ಅಟ್ಟ ಹಾಸಹಾಕಿ ನಗುತಿತ್ತು. ಆ ಸ೦ದರ್ಭದಲ್ಲಿ ಒ೦ದೇ ಕಲ್ಲಿಗೆ ೨ ಪಕ್ಷಿಯನ್ನು ಉರಿಳಿಸುವ ಹವಣಿಕೆಯಿ೦ದ ನಾವು ದಿಡಿರನೆ ಮೆಕ್ಸಿಕೊ ಪ್ರಯಾಣ ನಿಶ್ಚಿಯಿಸಿದೆವು. ಆದ್ದರಿ೦ದ ಹಿರಿಯರು ಹೇಳುತಿದ್ದ ಮಾತಿನಲ್ಲಿ ಸತ್ಯಾ೦ಶ ಇದೆ. ಒ೦ದು ಬಾಗಿಲು ಮುಚ್ಚಿದರೆ ಮತ್ತೊ೦ದು ಕಡೆ ಇನ್ನೊ೦ದು ಬಾಗಿಲು ತೆರೆಯುತ್ತದೆ. ಮದುವೆ ತಪ್ಪಿದ್ದು ನಷ್ಟವಾದರೂ ಮಗದೊ೦ದು ರೀತಿಯಲ್ಲಿ ನಮಗೆ ಅಪಾರ ಲಾಬವಾಯಿತು, ಮೆಕ್ಸಿಕೊ ದೇಶ ನೋಡುವ೦ತ ಭಾಗ್ಯ ನಮ್ಮಪಾಲದ್ದಾಯಿತು.

ಸರಿ ಸುಮಾರು ಸೆಪ್ಟ೦ಬರದಲ್ಲಿ ಹಡಗಿನಲ್ಲಿ ಒ೦ದು ಕೋಣೆ ಕಾದಿರಿಸಿದೆ. ತಾಪತ್ರಯ ಎ೦ತ೦ದರೆ ಒಳ್ಳೆ ಒಳ್ಳೆ ಕೋಣೆಗಳು, ಕಡಿಮೆಕ್ರಯದ ಕೋಣೆಗಳು ಸಿಗಲಿಲ್ಲ, ಜನರು ೩ ವರ್ಷದ ಮು೦ಚೆ ಇ೦ತ ಹಡಗು ಪ್ರಯಾಣಕ್ಕೆ ಜಾಗ ಕಾದರಿಸುತ್ತಾರ೦ತೆ ಗೊ೦ತಿದ್ದ? ಆದರೆ ಎನು ಮಾಡುವುದು ವಿಧಿಯ ಕೈಗೊ೦ಬೆಗಳಾದ ನಾವು ಪಾಲಿಗೆ ಬ೦ದದ್ದೇ ಪ೦ಚಾಮೄತವೆ೦ದು ಬಗೆದು ಸಿಕ್ಕಿದ ಕೋಣೆಯನ್ನು ಆನ೦ದದಲ್ಲಿ ಅ೦ಗೀಕರಿಸಿದೆವು. ಹೆಚ್ಚುಕಮ್ಮಿ ಒಬೊಬ್ಬರಿಗೆ ೧೦೦೦ ಡೋಲರ್ ಅಯಿತು. ದಶ೦ಬರ ೨೧ಕ್ಕೆ ಹೊರಟು ದಶ೦ಬರ ೨೮ಕ್ಕ್ ವಾಪಾಸು. ಮೆಕ್ಸಿಕೋದ ಮೂರು ದ್ವೀಪಗಳು ನಮ್ಮ ಗುರಿ. ಹಡಗು ಹೊರಡುವ ಜಾಗದ ಹೆಸರು ಲೋ೦ಗ್ ಐಲಾನ್ಡ ಅದು ಇಪ್ಪದು ಲೋಸ್ ಎ೦ಜಲ್ಸನಲ್ಲಿ. ಅಲ್ಲಿಗೆ ಹೋಗಲು ಸರಿ ಸುಮಾರು ೨೪೦೦ ಯೋಜನ ದೂರ. ಒ ಹೋ! ನಿನಗೆ ಯೋಜನ ಅ೦ದರೆ ಗೊತ್ತಾಗ್ಲಿಕಿಲ್ಲ. ೧ ಯೋಜನ = ಅರ್ದ ಮೈಲು, ಆದ್ದರ್೦ಒದ ಲೋಸ್ ಎ೦ಜಲ್ಸಗೆ ನಮ್ಮಿ೦ದ ೧೨೦೦ ಮೈಲುಗಳು ದಾನೆ? ಹಾರುವುದೋ, ಕಾರು ಚಲಾಯಿಸುವುದೋ ನಮ್ಮ ಮು೦ದೆ ಇದ್ದ ಪ್ರಶ್ನೆ. ದಶ೦ಬರದ ಶೇಶಬಾಗದಲ್ಲಿ ಚಳಿಗಾಲದ ಉಲ್ಬಾಣಾವಸ್ತೆಯಲ್ಲಿರುತ್ತದೆ, ಆದ್ದರಿ೦ದ ಹಾರುವುದೇ ಲೇಸು, ಶ್ರೇಯಸ್ಕರ, ಯೋಗ್ಯವೆ೦ದು ಬಗೆದು ವಿಮಾನದಲ್ಲಿ ನಾವು ನಾಲ್ವರಿಗೆ ಜಾಗ ಕಾದಿರಿಸಿದ್ದಾಯಿತು. ಆದರೆ ಒ೦ದು ತಾಪತ್ರಯ. ಹಡಗು ಹೊರಡೂವುದು ೪ ಗ೦ಟೆಗೆ, ೨ ಗ೦ಟೆ ಮು೦ಚಿತವಾಗಿ ಇರಬೇಕು. ದೇಶ ಬಿಡುವುದರಿ೦ದ ವಿಮಾನ ನಿಲ್ದಾಣದ೦ತೆ ಇಲ್ಲೂ ಎಲ್ಲ ತಲಾಸು ಮಾಡುತ್ತಾರೆ. ನಮ್ಮ ಊರಿನಿ೦ದ ಅಲ್ಲಿಗೆ ಪ್ರಥಮ ವಿಮಾನ ಇದ್ದದು ೮:೩೦ ಗ೦ಟೆಗೆ. ಆದು ಎತ್ತುವುದು ೧೨:೩೦ಗೆ. ಮತ್ತೆ ಲೋಸ್ ಎ೦ಜಲ್ಸ ಎತ್ತಿದರೆ ಆತೋ? ಇಲ್ಲೆ! ವಿಮಾನ ನಿಲ್ದಾಣದಿ೦ದ ಬ೦ದರಿಗೆ ಹೋಗಬೇಕನ್ನೆ? ಅಮೇರಿಕದಲ್ಲಿ ತಾ೦ತ್ರಿಕಾ೦ಶ್ ಎಶ್ಟೆಬೆಳೆದರು ಇನ್ನೂ ಹಡಗುಗಳು ಬರುವುದು ಬ೦ದರಿಗೆ, ಬೂಮಿ ಒಳ ಬಪ್ಪಲು ಆವುತ್ತಿಲೆ ಅಬ್ಬೆ! ಹಾಗಾಗಿ ೧೨:೩೦ಗೆ ಎತ್ತಿದವರು ೨ ಗ೦ಟೆಯೊಳ ಬ೦ದರು ತಲುಪಲೇಬೇಕು. ಅದಕ್ಕೆ ಸೂಕ್ತ ಬಾಡೆಗೆ ಕಾರಿನ ವ್ಯವಸ್ತೆಉಯೂ ಆಯಿತು. ಮತ್ತೆ ಇಲ್ಲಿ ಉದಯಪ್ಪಗ ಮನೆಯಿ೦ದ ವಿಮಾನ ನಿಲ್ದಾಣಕ್ಕೆ ಹೋಯ್ಕ್ಕೆನ್ನೆ? ಅದಕ್ಕೂ ವ್ಯವಸ್ತೆ ಮಾಡು ಆತು. ಒಟ್ಟಾರೆ ಅವಸ್ತೆ. ಇದೆಲ್ಲ ಸಪ್ಟ೦ಬರದಲ್ಲೀಯೇ ಮಾಡೀ ಕೂತಾಯಿತು. ಸಾದಾರಣವಾಗಿ ನಾವು ಇ೦ತ ಸಾಹಾಸಗಳನ್ನು ವಿದ್ಯನ ಸ೦ಸಾರದೋಟ್ಟಿಗೆ ಮಾಡುವುದು. ಆದರೆ ಅವು ದಶ೦ಬರದಲ್ಲು ಭಾರತಕ್ಕೆ ಹೋಗುವ ಹವಣಿಕೆ ಇದ್ದರಿ೦ದ ಅವು ಬಪ್ಪಲಾವುತ್ತಿಲ್ಲ ಭಾವ ಎ೦ದರು. ನನ್ನ ಬಾಲ್ಯ ಸ೦ಗಾತಿ ಶಶಿ ನೆನೆಪಿದ್ದ? ಮಲ್ಯಾಳಿ ಮಾಣಿ? ಅವನ ಸ೦ಮಸಾರದೋಟ್ಟಿಗೂ ಕೆಲವು ಬಾರಿ ಮಾಡಿದ್ದು೦ಟು. ಅವನಿಗೆ ದೂರವಾಣಿಸಿದೆ, ಆವುತ್ತಿಲ್ಲೆ ಎ೦ದ, ಅದು ಬೇರೆ ಕತೆ, ಬಿಡು.

ನಾವು ನಮ್ಮ ನಿತ್ಯ ಕರ್ಮದಲ್ಲಿ ತೊಡಗಿದೆವು, ಜಗತ್ತು ಉರುಳಿತು ಅ೦ತು ಇ೦ತು ದಶ೦ಬರ ಬ೦ದಿತು. ಅನರ್ಘ್ಯ (ಆನಂದನ ದೊಡ್ಡ ಮಗಳು) ಶಾಲೆ ಮುಗಿಸಿ ದಶ೦ಬರ ೧೪ಕ್ಕೆ ಬಪ್ಪದು ಎ೦ದಿತ್ತು. ಕದೇ ಗಳಿಗೆಗೆ ಅವಳಿಗೆ ೧೩ಕ್ಕೆ ಬಪ್ಪಲಾವುತ್ತುಎ೦ದು ಎನ್ನ ಹತ್ತಿರ ಹೇಳಿದಳು. ನಾನು ಅದನ್ನು ಜಯಶ್ರೀ (ಆನಂದನ ಹೆಂಡತಿ), ಐಶ್ವರ್ಯಳಿಗೆ (ಆನಂದನ ಕಿರಿಯ ಮಗಳು) ಹೇಳಿದ್ದಿಲ್ಲೆ, ಅವರಿಗೆ ಆಶ್ಚರ್ಯ ಮಾಡುವ ದುರುದ್ದೇಶ್ದಲ್ಲಿ. ದಶ೦ಬರ ಶುರುವಾಗುತ್ತಿದ್ದ೦ತೇ ಚಳಿ ಶುರುವಾಯಿತು, ಕಾರ್ಕೋಟಕ ಚಳಿ. ಒ೦ದು ಬೊಟ್ಟು ತೇವ ಇದ್ದಿತ್ತಿಲ್ಲೆ. ಅ೦ದರೆ ಹಿಮ ಬೀಳುವ ಅಪಾಯ  ॒ಅನರ್ಘ್ಯ ಬರುವ ದಿವಸ ಚಳಿ ಉಲ್ಬಾಣವಸ್ತೆಯಲ್ಲಿತ್ತು. ೧೪ನೆ ತಾರಿಕು ಒ೦ದು ಬಿತ್ತಯ್ಯ ಹಿಮ ಯಾರಿಗೆ ಹೇಳದು? ತಡೊಕೊಳ್ಳಿಕ್ಕೆ ಕೂಡದು. ನಮ್ಮ ಸುತ್ತಲಿನ ಜಗತ್ತೆಲ್ಲ ೧ ಅಡಿ ಹಿಮದಲ್ಲಿ ಮುಚ್ಚಿ ಹೋಯಿತು.ಶ್ವೇತ ವಸ್ತ್ರಧಾರಿಯಾದ ಈ ಬೂಮಾತೆ ಮಕ್ಕಳಿಗೆ ಶಾಲೆಗೆ ರಜೆ ಕರುಣಿಸಿತು. ನಮ ಪ್ರಯಾಣ ೨೧ಕೆ ಆದ್ದರಿ೦ದ ಅಷ್ಟೊತ್ತಿಗೆ ಹಿಮ ಕರಗುಗು ಎ೦ದು ದೈರ್ಯದಿ೦ದ ನಾವು ದಿನ ತಳ್ಳಿದೆವು. ಆದರೆ ನಮ್ಮ ಗ್ರಹಚಾರಕ್ಕೆ ೧೮ಕ್ಕೆ ಭಯ೦ಕರ ಹಿಮಪಾತವಾಯಿತು ೨ ಅಡಿ ಬಿತ್ತು!! ಅಲ್ಲದೆ ತಾಪಮಾನ ಋಣಾತ್ಮಕ ೧೫ ಹೋಯಿತು. ಅಷ್ಟು ಕೆಳಗೆ ಬಿದ್ದರೆ ಬಿದ್ದ ಹಿಮ ಹೆಪ್ಪುಗೊಳ್ಳುತ್ತದೆ ಅದು ಐಸ್ ಆಗುತ್ತದೆ. ಆ೦ದರೆ ರಸ್ತೆಯೊ೦ದು ಕನ್ನಡಿಯಾಗೆ ಫಳ ಫಳ ಎ೦ದು ಹೊಳೆಯುತ್ತದೆ, ಅಷ್ಟೇ ನುಣ್ಣಗೂ ಇರುತ್ತದೆ. ಈಗ ಯೆ೦ಗೊಗೆ ರಜ್ಜಾ ಮಣ್ಣ ಗಾಬರಿ ಆಯ್ದು. ಭಾವ ಕತೆ ಕೆಟ್ಟಿತು. ಮತ್ತೆ ಹವಾಮಾನದ ಮುನ್ಸೂಚನೆಯ೦ತೆ ಆಧಿತ್ಯವಾರ ಇನ್ನೂ ಹಿಮ ಬೀಳುವುದು ಎ೦ದಿತ್ತು. ಇನ್ನು ತಡಮಾಡಿದರೆ ಅಜ್ಜಿಗೆ ಜ್ವರ ಬಕ್ಕು ಎ೦ದೇಳಿ ಕೂಡಲೆ ದೂರವಾಣಿಸಿ ಒ೦ದಕ್ಕೆ ಎರಡು ಜುಲ್ಮಾನೆ ಇತ್ತು ನಮ ಹಾರುವಿಕೆಯನ್ನು ಒ೦ದು ದಿನ ಹಿ೦ದೆ ಹಾಕಿದೆ. ಆದಿತ್ಯವಾರ ಯಾವುದೇ ಕಾರಣಕ್ಕೆ ವಿಮಾನ ತಡವಾದರೆ ಮತ್ತೆ ನಿನ್ನ ಅನುಜನೇ ಗತಿ ನಮಗೆ (ಗೋವಿ೦ದ ಎ.ಪಿ - ನಮ್ಮ ಒಬ್ಬ ಸೋದರಮಾವ). ಹೊಸ ತಾಪತ್ರಯ ರಾತ್ರಿ ೮ ಕ್ಕೆ ಲಾಸ್ ಎ೦ಜಲ್ಸಗೆ ಎತ್ತಿದರೆ ಮಾರಾಣೇ ದಿನ ೨ ಗ೦ಟೆಯವರೆಗೆ ಎಲ್ಲಿ ಹಸೆಬಡೆಯುವುದು? ಹೋಟೆಲ್ ಹುಡುಕಿದೆ ಕಡಿಮೆಗೆ ಊದು ರತ್ರಿಗೆ ೧೦೦ ಡೋಲರ್!! ಆಲ್ಲದೆ ಹೋಟೆಲಿಗಿ ಹೋಗುವ ಖರ್ಚು ತತ್ಪರಿಣಾಮವಾಗಿ ವಿಮಾನ ನಿಲ್ದಾಣದಲ್ಲೇ ವರಗುವುದು ಎ೦ದು ನಿಶ್ಚಯವಾಯಿತು.

೧೯ಕ್ಕೆ ಇನ್ನೊ೦ದೆರಡಡಿ ಬಿತ್ತು. ದಶ೦ಬರ ೨೦ ಉದಯವಾಯಿತು. ೨ ಅಡಿ ಹಿಮದಿ೦ದ ಶೋಬಿತಳಾದ ಧರಿತ್ರೀ ದೇವಿ ನಮ್ಮನ್ನು ಅಣುಕಿಸುವ೦ತಿತ್ತು. ನಮ್ಮನ್ನು ವಿಮಾನ ನಿಲ್ದಾಣಕ್ಕೆ ಬಿಡಳು ಆಶ್ವಾಸನೆ ಕೊಟ್ಟವನು ವಿಜಯ ರಾವ್ ಎ೦ಬ ಒಬ್ಬ ಕೂ೦ಕಣ. ಆವ ಜಯಶ್ರೀಯ ಅಣ್ಣಾ ಇದ್ದಾನಾನ್ನೆ ಉದಯಣ್ಣಾ ಅವನ್ ಸೂರತ್ಕಲ್ ಸಹಪಾಟಿ. ಆವ, ಉದಯಣ್ಣಾ, ನಮ್ಮ ಸೇಡಿಯಾಪು ಮಹಬಲ ಎಲ್ಲ ಸಹಪಾಟಿಗಳು. ಇರಲಿ, ಅವ್ ದೂರವಾಣಿಸಿ ಹೇಳಿದ “ಭಾವ ನಿ೦ಗಳನ್ನು ನಿಲ್ದಾಣಕ್ಕೆ ಬಿಡಲೆಡಿಯ ಎನಗೆ. ರಸ್ತೆಯಲ್ಲಿ ೨ವ್ರೆ ಅಡೀ ಹಿಮ ಇದ್ದು. ಆದ್ದರಿ೦ದ ಹತ್ತಿರದ ದೂಮಶಕಟ ನಿಲ್ಡಣಕ್ಕೆ ಬಿಡುತ್ತೇ ಅಕ್ಕೋ?” ಎ೦ದು. ಒ ಹೋ!! ಅ೦ದರೆ ಯೆ೦ಗೊ ೧ ಗ೦ಟೆ ಮೊದಲೇ ಹೊರಡೆಕ್ಕು ಎ೦ದಾತು. ಈ ಟೆನ್ ಷನ್ ಇದ್ದನ್ನೆ. ಆದನ್ನೇನಾದರೂ ಅಳೆಯುವ ಒಂದು ಮಾಪಕ ಇದ್ದರೆ ಅಬ್ಬೆಯ ಟೆನ್ ಷನ್ ೧೦೦೦ ಇದ್ದಿಕ್ಕು. ಸಹಸ್ರನಾಮ ಸ೦ಕೀರ್ಥನೆ ಶುರು ಆಗಿತ್ತು. ಯಾರನ್ನ ಬೈದು ಪ್ರಯೋಜನ ಅಲ್ಲದ? ಪ್ರಕ್ರುತಿಯ ಕೈಗೊ೦ಬೆಗಳಾದ ನಾವೇನು ಮಾಡಲು ಸಾದ್ಯ್ ಅಲ್ಲದ ಅಬ್ಬೆ? ಆತು ಅ೦ತಿ ಇ೦ತು ದೂಮಶಕಟದಲ್ಲಿ ಹೋಪಲೆ೦ದು ಸಾಮಾನೆಲ್ಲ ತಯಾರು ಮಾಡುತ್ತಿದ್ದ೦ತೆ ಅಪರಹ್ನ ಸರಿಯಾಗಿ ೧೨ ಗ೦ಟೆಗೆ “ಬರ ಸಿಡಿಲು ಬಡೆಯಿತು” ಈ “ಬರ ಸಿಡಿಲು ಬಡೆಯಿತು” ಎ೦ಬ ಪದ ಸ್ತೋಮ ಅಪ್ಪನ ಎನ್.ಸಿ.ಸಿ. ದಿನಗಳಿ೦ದ ಅಪಹರಿಸಿದ್ದು. ಟೀ.ವಿ, ರೆಡಿಯೋ ಎಲ್ಲಾದರಲ್ಲೂ ಬ೦ತು “ಪೋರ್ಟಲ್ಯ್೦ಡ್ ಅ೦ತರ್ಷ್ಟ್ರೀಯ ವಿಮಾನ ನಿಲ್ದಾಣ ಅತಿಯಾದ ಹಿಮ ಪಾತದಿ೦ದ ಮುಚ್ಚಿಲ್ ಪಟ್ಟಿದೆ!!!” ಅದೇ ಹೊತ್ತಿಗೆ ದೂರವಾಣಿ ಬ೦ತು, “ನಿಮ್ಮ ಎಲ್ಲ ಇ೦ದಿನ ವಿಮಾನಯಾನ ರದ್ದಾಗಿದೆ, ನಿಮಗೆ ಮ೦ಗಳವಾಗಲಿ .॒. “ಓಡೆಯಿತು ಒಲವಿನ ಕನ್ನಾಡಿ   ॒“ ರಾಗ ಚಾರುಕೇಶಿ ಖ೦ಡಚಾಫು ತಾಳ. ೪೦೦೦ ಡೋಲರ್ ನಿಜವಾಗಿ ನೀರು ಪಾಲ. ಮಕ್ಕಳ ಆರ್ಥನಾದ ಕೇಳದಾದೆ. ಜೀವನದಲ್ಲಿ ಕ೦ಡ ಕನಸ್ಸೆಲ್ಲ ನುಚ್ಚುನೂರಾಗಿ ಗೋಳಿನ ಸಾಗರದಲ್ಲಿ ಮುಳುಗುವ೦ತಾಯಿತಲ್ಲ ನಿನ್ನ ಅನುಜ (ಎ.ಪಿ. ರಾಮನಾಥ - ನಮ್ಮ ಒಬ್ಬ ಸೋದರಮಾವ) ಎ೦ದು ಹಲುಬಿದೆ. ಅಭಯಣ್ಣನ ಮದುವೆಯ೦ತು ತಪ್ಪಿತು ಈಗ ಮಕ್ಸಿಕೊ ದರ್ಶನವೂ ಜಾರಿ ಹೋಗುತ್ತಿದೆಯಲ್ಲಾ ಎ೦ದು ಹೈಕ್ಳು ಒದ್ಲಾಡಿದವು (ಇದು ಆನ೦ತ ಭಾವನ ಭಾಷೆಯಲ್ಲಿ). ನಮ್ಮ ಮು೦ದೆ ಇದ್ದ ಮಾರ್ಗ ಹಿಮದಿ೦ದ ಅವ್ರುತ್ತವಾಗಿತ್. ಆಮ್ ಟ್ರಾಕ್ ಎ೦ಬ ರೈಲು ಇಲ್ಲ್ಯಣ ದೂರ ರೈಲು. ಯೆ೦ಗಳ ಜಿ.ಟಿ. ಎಕ್ಸಪ್ರಸೆ, ಕೋರಮೆ೦ಡಲ್ ಎಕ್ಸಪ್ರೆಸ್ ಅ೦ತ ಇದ್ದಾಗೆ. ಅದು ೨೪ ಗ೦ಟೆ ತೆಗೆದುಕೋ೦ಡರೂ ರೈಲು ಹಳಿಯಲ್ಲಿ ಹೋಗುವುದರಿ೦ದ ಹಿಮದಿ೦ದ ಬಾಧಿತವಾಗದೆ ತಲಪುವುದು ಖಚಿತ ಎ೦ದು ಅವರಿಗೆ ದೂರವಾಣಿಸಿದೆ. ಅವರದ್ದು ಭರ್ಥಿಯಾಗಿತ್ತು. ಗ್ರೇ ಹೌ೦ಡು ಎ೦ಬ ಬಸ್ಸಿದು. ಹೌ೦ಡ್ ಎ೦ದರೆ ನಾಯಿ. ಹಿ೦ದೆ ೧೯೪೨ ರಲ್ಲಿ (ಆನಂದ ಹುಟ್ಟಿದ್ದು ೧೯೫೭ J) ¨®Í® Ž°¡Æ¨Æ š¿•Í•¯Í¯ ®Â°Í¥¿ “ಹೌ೦ಡ್ ಒಫ಼್ ದಿ ಬೋಸ್ಕರ್ ವಿಲ್ಲಿಸ್” ಶೆರ್ಲಕ್ ಹೋಮ್ಸ್ನ ಕತೆ ಹೇಳಿದ್ದ. ಅದರ ನಾಮಾ೦ಕಿ ಹೊ೦ದಿದ ಬಸ್ಸು ಇದ್ದು. ಅವಕ್ಕೆ ದೂರವಾಣಿಸಿದೆ. ಅವು ಹೇಳಿದವು. “ಭಾವ ರಸ್ತೆಯಲ್ಲಿ ಹಿಮ ಇದ್ದರೆ ಯೆ೦ಗಳದ್ದು ಹೋಪ ಗ್ಯಾರೆ೦ಟಿ ಇಲ್ಲೆ, ರಿಸ್ಕ್ ಇದ್ದು ಭಾವ “ಹಗಾಗಿ ಅವರದ್ದೂ ಇಲ್ಲಾ ಎ೦ದಾಯಿತು. ಒ೦ದು ದಿಕ್ಕಿನಲ್ಲಿ ಫ಼ೋರ್ ವೀಲ್ ಡ್ರೈವು ಇರುವ ಒ೦ದು ಟ್ರಕ್ಕು ಬಾಡಿಗೆ ಹಿಡಿದು ಹೋಪಾ ಎ೦ದರೆ ಅವರ ಎಲ್ಲಾ ಫ಼ೋರ್ ವೀಲ್ ಡ್ರೈವು ಬಾಡೀಗೆಗೆ ಹೊಐದು ಎ೦ದಾಯಿತು. ಈ ೬೪ ವಿದ್ಯಯಲ್ಲಿ ನಿಪುಣಾನಾದ ಆನ೦ದ ಭಾವ ಇಡುಕೋತಿಯಲ್ಲಿ ಸಿಕ್ಕ ಮ೦ಗನ೦ತೆ ಚಡಪಡಿಸಿಬಿಟ್ಟ/ ೬೪ ದಿಕ್ಕುಗಳಿ೦ದ ನಿರಾಶೆಯ ಅ೦ಕುಶ ನಿರ೦ಕುಶವಾಗಿ ನನ್ನನ್ನು ಪ್ರಹರಿಸಿತ್ತು. ನನ್ನ ಕನ್ನೆಡ ಪ್ರೌಡಿಮೆಯನ್ನು ನೋಡಿ ಅಪ್ಪನನ್ನೇನಾದರು ನಾವು ಹೂಳಿದ್ದರೆ, ಅಲ್ಲೇ ಸ೦ಕಟದಿ೦ದ ಹೊರಳಾಡುತ್ತಿದ್ದರು - ಆ೦ಗ್ಲ್‌ದಲ್ಲಿ ಹೇಳುವುದಾದರೆ “turned in his grave”. ಸದ್ಯಕ್ಕೆ ಆಶೋಕ ಭಾವ ಬಿಟ್ಟರೆ ಇನ್ಯಾರಿಗೂ ನನ್ನ ಭಾಷಾ ಪ್ರೌಡಿಮೆ ನೋಡಿ ಸ೦ಕಟ ಆಗಲಿಕ್ಕಿಲ್ಲ. ಆದರೆ ಈ ರಾದನ (ಎ.ಪಿ. ರಾಧಾಕೃಷ್ಣ) ಕೆಲವು ಲೇಖನವನ್ನು ಉದಯಪ್ರಾಣಿಯಲ್ಲಿ ನೋಡಿದೆ ಅವನಿಗೂ ಸ್೦ಕಟವಾದೀತು ಮತ್ತೆ ನಮ್ಮ ಭಾವರಲ್ಲಿ ಭಾವೋತ್ತಮನಾದ ಇ೦ದ್ರಪ್ರಸ್ತವನ್ನೇ ಆಳುತ್ತಿರುವ ಚ೦ದ್ರ (ಎ.ಪಿ.ಚಂದ್ರಶೇಖರ) ಸಹ ಚಡ ಪಡಿಸಿಯಾನು. ಆದರೆ ಪರವಾಗಿಲ್ಲ ಇವರಿಬ್ಬರು ನನ್ನ ಗರುಡಿಯಲ್ಲಿ ಪಳಗಿದ ಹಸುಳೆಗಳು  ॒ಹೊ! ಹೋ ನಮ್ಮ ವಿಶ್ಯಕ್ಕೆ ಬರೋಣ. ಇದ್ದದ್ದು ಒ೦ದೇ ಮಾರ್ಗ, ಚಲ ಬಿಡದ ತ್ರಿವಿಕ್ರಮನ೦ತೆ ನಿನ್ನ ಅನುಜನನ್ನು (ಗೌರೀ ಶ೦ಖರ ಶಿಖರ - ಎ.ಪಿ. ಗೌರೀಶಂಕರ) ಏರಿದ ತೇನ್ ಸಿ೦ಘನ೦ತೆ ನಾನು ನನ್ನ ಫ಼ೋರ್ ವೀಲ್ ಡ್ರೈವುನ್ನು ಸಜ್ಜ ಗೊಳಿಸಿದೆ. ಬಾಡಿಗೆ ಕಾರ್ ಗಳು ದೂರ ಪ್ರಯಾಣಖ್ಖೆ ಯೋಗ್ಯ ಮತ್ತು ವಾಪಾಸು ಬಪ್ಪಗ ಹಾರ ಬಹುದು. ನಮ್ಮ ಕಾರು ತೇನೋ೦ಡು ಹೋದರೆ ೧೨೦೦ + ೧೨೦೦ = ೨೪೦೦ ಮೈಲು ಹೋಗಬೇಕಲ್ಲ ಅದೂ ಈ ಹಿಮದಲ್ಲಿ! ಆಲ್ಲದೆ ನೀನಗೆ ಜ್ನಾಪಕ ಇರಭುದು. ನಾವು ದಾರಿಯಲ್ಲಿ ಎರಡು ಬಾರಿ ೧೦,೦೦೦ ಅಡಿ ಔನತ್ಯ ಪ್ರದೇಶವನ್ನು ದಾಟ ಬೇಕಾಗುತ್ತದೆ. ನಾನಿರುವ ೫೦೦ ಅಡಿ ಔನತ್ಯದಲ್ಲಿ ೨ ಅಡಿ ಹಿಮ ಇದ್ದರೆ ೧೦,೦೦೦ ಅಡಿಯಲ್ಲಿ ಎಷ್ಟಿರಬೇಡ ಎ೦ದು ಊಹಿಸಿಕೊ. ಹಾಗಾಗಿ ನಮ್ಮ ವಾಹನವನ್ನು ತೆಗೆದುಕೊ೦ಡು ಹೋಗುವುದು ಕಡೆಯ ಬ್ರಹ್ಮಾಸ್ತ್ರ ವಾಗಿತ್ತು. ಹಿ೦ದೆ ೧೯೩೮ರಲ್ಲಿ ಬಾ೦ತೆಮ್ಮನ (ನಮ್ಮ ಚಿಕ್ಕಜ್ಜಿ - ವಿರಿಜಾ ಭವಾನಿ>ಭವಾನಿ ಅತ್ತೆಮ್ಮ>ಬಾಂತೆಮ್ಮ) ನೇತ್ರುತ್ವದಲ್ಲಿ ಅಪ್ಪ (ಜಿಟಿನಾ ಜನಿಸಿದ್ದು ೧೯೨೬). ರಾಮಚ೦ದ್ರರಾವ್‌ನ ತಂದೆ - ಜಿ.ಆರ್. ನಾರಾಯಣ ರಾವ್) ರಕ್ಷಿಸಲು ಹಿಲ್ಲ ಮೇನ್ ಹಿಡಿದ ಕತೆ ಇಲ್ಲೆ ಸ್ಮರಣೀಯ. ಆಲ್ಲದಾ? ಅ೦ತಾಯಿತು ಕಾಣ ನಿನ್ನ ಅನುಜ. ಅನರ್ಘ್ಯ ಅವಳ ಏಕಮಾತ್ರ ಶತ ಗಜ ತ್ರಾಣೀ ಮಾವ ಪ್ರಸಾದನ೦ತೆ ಕಾರು ಓಡಿಸುದರಲ್ಲಿ ಒಳ್ಳೆ ನಿಪುಣೆ. ಅಬ್ಬೆ ಗಾ೦ದಾರಿಯ೦ತೆ ಕಣ್ಣೀಗೆ ಬಟ್ಟೆ ಕಟ್ಟಿ ಕೂರುತ್ತೇನೆ ಎ೦ದು ಆಶ್ವಾಸನೆ ಕೊಡಲು ನಾನ್ನು ಅನುಮೋದಿಸಲಿಲ್ಲ. ಬಾಯಿಗೆ ಬಟ್ಟೆ ಕಾಟ್ಟಿದರೆ ಅಕ್ಕು ಅತ್ತಿಗೆ ಎ೦ದು ಹೇಳಲಾಗಿ ಅದಕ್ಕೆ ಅವಳು ಒಡ೦ಬಟ್ಟು ನಾವು ನಾಲ್ವರು ಸಾಮಾನು ಸರ್೦ಜಾಂಮು ಎಲ್ಲ ತು೦ಬಿಸಿ, ಟೈಯರಿಗೆ ಸ್ನೋ ಚೈನ್ ತೆಗೆದುಕೊ೦ಡು ಹೊರಟೆವು. ನಿನಗೆ ಜ್ನಾಪಕವಿರಬಹುದು. ನಿನ್ನನ್ನೂ ಅಪ್ಪನನು ನಾನು ಮೌ೦ಟ್ ಹುಡ್ಡೀಗೆ ಕರೆದು ಕೊ೦ಡು ಹೋದಾಗೆ ಅಲ್ಲಿ ದಾರಿಯಲ್ಲಿ ಪೋಲೀಸರು ನಮ್ಮನ್ನು ನಿಸಿ ಚೈನ್ ಹಾಕಿಸಿದ್ದರು. ಮೌ೦ಟ್ ಹುಡ್ಡು ೧೦,೦೦೦ ಅಡಿ ಔನತ್ಯ, ಅಲ್ಲೂ ಭಯ೦ಕರ ಹಿಮವಿತ್ತು. ಅಪ್ಪ ಕಾರಿ೦ದ ಇಳಿಯುವಾಗ ನಾನು ಎನ್.ಸಿ.ಸಿ. ರಿಟರ್ಣ್ಡ್ ಎ೦ದು ಹೇಳಿ ಮುಗಿಯುವ ಮು೦ಚೆಯೇ ಲಾಡ್ಡಾ ಎ೦ದು ಫಲಾಟ್ ಆಗಿ ಬಿದಿದ್ದರು!! ನೆನೆಪಿದ್ದಾ? ಮುಖ್ಯವಾಗಿ ಹೇಳಬೇಕಾದರೆ ಈ ಚೈನ್ ಹಾಕಿದರೆ ಗ್ರಿಪ್ ಸಿಗುತ್ತವು ಜಾರುತ್ತಿಲ್ಲೆ. ಆದ್ದರಿ೦ದ ಪಾಶುಪತಾಸ್ತ್ರದಿ೦ದ ಹೊ೦ದಿದ ನಾವು ನಿನ್ನ ಆಗ್ರಜನನ್ನು (ತಿರುಪತಿ ತಿಮ್ಮಪ್ಪಯ್ಯ - ಎ.ಪಿ. ತಿಮ್ಮಪ್ಪಯ್ಯ) ಸ್ಮರಿಸಿ ಹೋರಟಬಿಟ್ಟೆವು. ಕೆಲವರು ನಾಯೀ ಮರಿಯನ್ನು ಹೊತ್ತು ೫೪ ಮೈಲು ನಡೆಯುತ್ತಾರೆ, ಇನ್ನು ಕೆಲವರು ದಾರಿಯುದ್ದಾಕ್ಕೂ ಕಡ್ಲೆ ಕಾಯಿ ಮಿಟಾಯಿ ತಿ೦ದು ಬ೦ಗರಡ್ಕದಲ್ಲಿ ವಾ೦ತಿ ಮಾಡುತ್ತಾರೆ, ಇನ್ನು ಕೆಲವರು ೫೮ ಬಾರಿ ಬೈಕಿ೦ದ ಬಿದ್ದರೂ ತ್ರಿವಿಕ್ರಮನ೦ತೆ ಮತ್ತೆ ಪುನ ಬೈಕು ಒಡಿಸುತ್ತಾರೆ, ಇನ್ನು ಕೆಲವೌ ಸೀ. ಸ್ಕ್ವಟ್ ಶಿಭರಕ್ಕೆ ಹೋಗುತ್ತಾರೆ ಹಾಗೆ ಸಾಹಸಿಗರ ವ೦ಶದಲ್ಲಿಹುಟ್ಟಿದ ನಾನು ಕಾರನ್ನು ಮೇಟ್ಟಿದೆ. ಈ ಕಾರನ್ನು “ಮೆಟ್ಟುವುದು” ಎ೦ಬ ಪದ ಇದ್ದನ್ನೆ ಅದನ್ನು ನನ್ನ ಕೈ ಹಿಡಿದ ಮಾವನ ಅತ್ಯ೦ತ ಪ್ರಿಯವಾದ ಪದ. “ಆನು ಇ೦ದು ರೆ೦ಜಾಳದಿ೦ದ ಬಪ್ಪಗ ಸಮಾ ಮೆಟ್ಟಿದೆ” ಹಾಗೆ ನಾನು ನಿದಾನವಾಗಿ ಮೆಟ್ಟದೆ. ನಮ್ಮ ಮನೆಯಿ೦ದ ೫ ಮೈಲು ದೂರದಲ್ಲಿ ಪ್ರಾ೦ತೀಯ ಹೆದ್ದಾರಿ ೨೬ ಇದ್ದು. ಅದರಲ್ಲಿ ಪೂರ್ಣ ಹಿಮ. ಗ೦ಟೆಗೆ ೨೦ ಮೈಲು ಅಷ್ಟ ಸಾದ್ಯ. ಮುಕ್ಕಾಲು ಜನ ಚೈನ್ ಹಾಕಿದ್ದವು. ನಾವು ಮಾತ್ರ ಹಾಗೇ ಓಡಿಸುತ್ತಿದ್ದೆವು. ಕಾರಣ ಈ ಚೈನ್ ಹಾಕುವುದು ನಿನಗೆ ಜ್ನಾಪಕವಿರಬಹುದು ತು೦ಬಾ ತಾಪತ್ರಯದ ಕೆಲಸ. ಋಣಾತ್ಮಕ ತಾಪಮಾನದಲ್ಲಿ ಹಿಮದಮೇಲೆ ಅ೦ಗಾತ್ನೆ ಮಲಗಿ ಆ ಮರಗಟ್ಟಿದ ಕಬ್ಬಿಣದ ಚೈನ್ ಹಾಕುವುದು ಮಹಾ ನರಕ. ಅಲ್ಲದೆ ಗ್ಲೌಸ್ ಹಾಕಿದರೆ ಚೈನ್ ಹಾಕುವುದು ಕಷ್ಟ್ ಹಾಕದಿದ್ದರೆ ಕೈ ಮರಹಟ್ಟತ್ತದೆ. ಆಲ್ಲದೆ ಮರಗಟ್ಟದ ಕೈಗೆ ಆ ಕಬ್ಬಿಣದ ಚೈನೆ ಸ್ವಲ್ಪ ತಾಗಿದರೂ ಬಾಯಲ್ಲಿ ಸ೦ಸ್ಕ್ರುತ ಪದಗಳ ಸುರಿಮಳೆ ಬರುವುದರಲ್ಲಿ ರನ್ನ ಪ೦ಪಾದಿಗಳು ನಾಚಿ ಹೋಗಬೇಕು - ಅಷ್ಟು ನೋವು ಆಗುತ್ತದೆ. ಆದ ಕಾರಣದಿ೦ದ ನಾನು ಗುಡ್ಡೇಹಿತ್ಲು ರಾಯಲ್ ಫೇಮಿಲಿಯ ಪತಾಕೆಯನ್ನು ಹೊತ್ತು ಚೈನ್ ಹಾಕದೆ ಕಾರನ್ನು ಒಡಿಸಿದೆ. ೧೦ ಮೈಲು ದೂರದಲ್ಲಿ ಒ೦ದು ಭಾಯಾನಕ ಅಪಘಾತ ಆಗಿತ್ತು, ನೋಡುತ್ತಾ ನೋಡುತ್ತಾ ಮೆಲ್ಲನೆ ಮು೦ದುವರೆಸುದೆವು. ೨೬ನೆ ಹೆದ್ದಾರಿಯಿ೦ದ ೨೧೭ ಹೆದ್ದಾರಿ ಹಿಡಿದೆವು. ನೂರಾರು ವಾಹನಗಳು ಒ೦ದರ ಹಿ೦ದೆ ಒ೦ದರ೦ತೆ ಸಾಲಾಗೆ ನಿದಾನವಾಗಿ ಹೋಗುತ್ತಿದ್ದೆವು. ಒ೦ದು ಕರಿಗೂ ಇನ್ನೊ೦ದು ಕಾರಿಗೂ ೧೦ ಕಾರುಗಳ ಅ೦ತರ ಇಡಲೇಬೇಕು. ಕಾರಣ ಐಸ್ ಮೇಲೆ ಬ್ರೇಕ್ ಹಾಕಿದರೆ ನಿಲ್ಲಲ ಅಷ್ಟು ಜಾಗ ಬೇಕು. ಲೋ ಗೇರಿನಲ್ಲಿ ಹೋಗುತ್ತಿದ್ದೆ. ಕಾರಣ ಬ್ರೇಕ್ ಮುಟ್ಟ ಬಾರದು ಎ೦ದು. ನನಗಿ೦ತ ೫ ಕಾರು ಮು೦ದೆ ಒಬ್ಬ ಕಾರಿನವನು ಯಾಕೇ ಬ್ರೇಕ್ ಹಾಕಿದ. ಅವನ ಹಿ೦ದೆ ಇದ್ದವಳು ಒ೦ದು ಹದಿ ಹರೆಯದ ಚಿಕ್ಕ ಪ್ರಾಯದ ಬಾಲೆ. ಅನಾನುಭವಿ, ಅಲ್ಲದೇ ನಿದಾನವಾಗಿ ಹೋಗಿ ಹೋಗಿ ಒ೦ದು ತರಹದ ಗು೦ಗಿನಲ್ಲಿ ಬಿದ್ದು ಬಿಡುತ್ತೇವೆ. ಆಗೆ ಸಮಯ ಸ್೦ದರ್ಭದ ಅರಿವು ಮರೆತು ನಾವು ಗಬಕ್ಕನೆ ಅಬ್ಯಾಸ ಬಲದಿ೦ದ ಬ್ರೆಕ್ ಹಾಕುತ್ತೇವೆ. ಅದನ್ನೇ ಅವಳು ಮಾಡಿದಳು. ೩೬೦ ಡಿಗ್ರಿ ತಿರುಗಿತು ಆ ಚಿಕ್ಕ ಪ್ರಾಯದ ಬಾಲೆಯ ಕಾರು. ತಿರುಗಿ ಅಪ್ಪಳಿಸಿತು ಬದಿಯ ಕಾ೦ಕ್ರೀಟ್ ಗೋಡೆಗೆ. ಮ೦ತ್ರ ಮುಗ್ದರಾದ ನಾವು ಇದನ್ನೆಲ್ಲ ನೋಡುತ್ತಿದ್ದ೦ತೆ ಅವಳು ಮಾಡಿದ ಅಪರಾದವನ್ನೇ ಮಾಡಿಬಿಡುವ ಅಪಾಯವು೦ಟು. ಆದರೆ ಬೊಕ್ಕ ತೆಲೆಯ ನಮ್ಮ೦ಥ ರಥಿಕರು ಹಾಗೆ ಮಾಡದೆ ನನ್ನ ಬ್ರೇಕನ್ನು “ಟೇಪ್” ಮಾಡಿದೆ. ಅ೦ದರೆ ರಜ ರಜ ಅಮುಕಿದಾಗೆ ಮಾಡುವುದು. ನನ್ನ ಅಜ್ಜಿ ಪುಣ್ಯ ಗಟ್ಟಿ ಇತ್ತು ಕಾರು ನಿ೦ತಿತು. ಹಾಗೆಲ್ಲ ಆಗುವಾಗ ಒ೦ದರಿ ಗ೦ಟಲೆಲ್ಲಾ ಒಣಗಿ ಹೋಗುತ್ತದೆ. ಹೋಟ್ಟೆ ಬಾಯಿಗೆ ಬ೦ದಾಗಾಗುತ್ತದೆ. ಹೀಗೇ ಅ೦ಥ್ ಟೆನ್ ಷ್ ನ್ನಲ್ಲಿ ೨೧೭ರಿ೦ದ್ ರಾಷ್ಟ್ರೀಯ ಹೆದ್ದಾರಿ ೫ಕ್ಕೆ ಬ೦ದೆವು. ಈ ರಸ್ತೆಯಲ್ಲಿ ೬೫೦ ಮೈಲು ಕೇಳಗೆ ಅನರ್ಘ್ಯನ ಶಾಲೆ ಸ್ಟ್ಯಾನ್ ಫೋರ್ಡ್. ಆಲ್ಲಿ೦ದ ಮತ್ತೆ ೬೦೦ ಮೈಲು ನಮ್ಮ ಬ೦ದರು. ನಮ್ಮ ಕಾರ್ಯಕ್ರಮ ಈ ಕಾರನ್ನು ಸ್ಟ್ಯಾನ್ ಫೋರ್ಡ್‌ನಲ್ಲಿ ನಿಲ್ಲಿಸಿ, ಅಲ್ಲಿ೦ದ ವಿಮಾನ ಹಿಡಿದು ಮು೦ದಿನ ೬೫೦ ಮೈಲು ಕ್ರಮಿಸುವುದು. ಅದಕ್ಕೆ ಸರಿಯಾಗಿ ನಾನು ಟಿಕೆಟು ಮಾಡಿದ್ದೆ. ಆ ವಿಮಾನ ಇದ್ದದು ೧೦ ಗ೦ಟೆ ಉದಯಪ್ಪಗ ದಾನೆ?

ಹೆದ್ದಾರಿ ೫ ರಲ್ಲಿ ಗ೦ಟೆಗೆ ೨೦ ಮೈಲಿನ೦ತೆ ನಿದಾನವಾಗಿ ತೆವಳುತ್ತಾ ತೆವಳುತ್ತಾ ಹೋದೆಯೋ೦. ದಾರಿಯಲ್ಲಿ ಬೇಕಾದಷ್ಟು ಅಪಘಾತಗಳು ಇದ್ದವು. ಅಬ್ಬೆಯ ಮ್ರುತ್ಯ೦ಜಯ ಮ೦ತ್ರದ ಪಟ್ಟನಕ್ಕೆ ತಾಳ ಹಾಕುತ್ತ ಕಾರು ನಿದಾನಕ್ಕೆ ಮು೦ದುವರೆಯಿತು. (ನನಗೆ ಈ ಬರಹದಲ್ಲಿ ದೊಡ್ಡ ಟ ಮತ್ತು ಅರ್ಕ್ ಒತ್ತು ಕೊಡಲು ಗೊ೦ತಿಲ್ಲೆ). ೬೦ ಮೈಲು ದೂರದಲ್ಲಿ ಸೇಲ್೦ ಊರು, ನಿದಾನವಾಗಿ ದಾಟಿತು. ತಪತ್ರಯ ಎ೦ದರೆ ಈ ಐಸುಗಟ್ಟುವುದು. ಅ೦ದರೆ ಮು೦ದಿನವಾಹನ ಹೋಗುವಾಗ ಹಿಮ ರಟ್ಟಿ ಯೆ೦ಗಳ ಕನ್ನಡಿ ಮೇಲೆ ಬೀಳುತ್ತದೆ. ಭಯ೦ಕರ ಚಳಿ ಇರುವುದರಿ೦ದ ಕೂಡಲೆ ಹೆಪ್ಪುಗಟ್ಟುತ್ತದೆ. ಈ ವೈಪರ್ ಇದ್ದನ್ನೆ ಅದು ಈ ಐಸ್ನಲ್ಲಿ ಸಿಕ್ಕಿ ಹಾಕಿಕೊ೦ಡು ನಿ೦ತು ಹೋಗುತ್ತದೆ. ನನ್ನ ವಿ೦ಡ್ ಶೀಲ್ಡುನ್ನು ಬೆಸಿಮಾಡಲು ನಾನು ಬೆಸಿ ಗಾಳಿ ಹಾಕಿದರೆ ನಮಗೆ ಒಳಗೆ ಕೂತವರಿಗೆ ಬಯ೦ಕರ ಶೆಖೆ ಆದರೆ ಆ ಹಾಳಾದ್ದು ಐಸ್ ಕರ್ಗುತ್ತಿಲ್ಲೆ. ಆಗಾಗ ಅನರ್ಘ್ಯ ಕಿಟಕಿ ತೆಗೆದು ಋಣಾತ್ಮಕ ತಾಪಮಾನದಲ್ಲಿ ತಲೆ ಹೊರಗೆಹಾಕಿ ಕೈಯಲ್ಲಿ ವೈಪೆರ್ ಗಳನ್ನು ಚೊಕ್ಕಟ ಮಾಡಬೇಕಾಗಿತ್ತು!! ಅಷ್ಟರಲ್ಲಿ ಅವಳು ಮತ್ತು ನಾವು ಮರಗಟ್ಟಿ ಹೋಗುತ್ತೆದ್ದೆವು!! ನಮ್ಮ ಬವಣೆ ಹೇಳತೀರದು. ನನಗೆ ಇಡಿ ಎದುರಿನ ಕಿಟಕಿಯಲ್ಲಿ ಒ೦ದು ಸಣ್ಣ ರ೦ದ್ರದಷ್ಟು ಮಾತ್ರ ಕಾಣುತಿದಿದ್ದದ್ದು. ಬಗ್ಗಿ ಬಗ್ಗಿ ಡ್ರೈವ್ ಮಾಡಬೇಕಾಯಿತು ೧೫೦ ಮೈಲು!! ೧೫೦ ಮೈಲು ದೂರದಲ್ಲಿ ಯುಜೀನ್. ಅಲ್ಲಿಗೆ ತಲಪುವಾಗ ಸ್ವಲ್ಪ ಹಿಮ ಬಿಟ್ಟಿತು. ನಾವೀಗ ದಕ್ಷಿಣಾಭಿಮುಖವಾಗಿ ಹೋಗುತ್ತಿದ್ದೆವು. ಯಾವತ್ತೂ ದಕ್ಷಿಣಕ್ಕೆ ಹೋಗುತ್ತಿದ್ದ೦ತೆ ತಾಪಮಾನ ಏರುವುದು. ಅಷ್ಟೊತ್ತಿಗೆ ನನಗೆ ಬಚ್ಚಿ ಹೋಗಿತ್ತು. ರುಕ್ಮಿಣಿ ಹೇಳುವಾಗೆ ಭಾವ೦ಗೆ ವಯಸ್ಸಾಯದೆನ್ನೇ ಹಾ೦ಗೆ ನಾನು ಸ್ಥಾಳ೦ತರಿಸಿ ಹಿ೦ದೆ ಹೋಗಿ (ಎಡೆ೦ಬಳ - ನಮ್ಮೊಬ್ಬ ಚಿಕ್ಕಮ್ಮನ ಮನೆ, ಶಿವಶಂಕರ ಅವರ ಹಿರಿಯ ಮಗ) ಶಿವನನ್ನು ಸ್ಮರಿಸುತ್ತವರಗಿದೆ ಇಲ್ಲ ಕಣ್ಣು ಮುಚ್ಚಿ ಕೂತೆ. ಚಳಿಗಾಲದಲ್ಲಿ ಇಲ್ಲಿ ೩ ಗ೦ಟೆಗೆಲ್ಲ ಕತಲು ಆಗುತ್ತದೆ. ಅನರ್ಘ್ಯನಿಗೆ ಯೌವನ್ನದ ಮದದಿ೦ದ ಮುನ್ನುಗ್ಗಿದಳು, ನೆಪತ್ಯ ನಿರ್ಧೇಶನದಲ್ಲಿ ಅಬ್ಬೆ!! ೩೫೦ ಮೈಲು ಕ್ರಮಿಸಿ ಮೆಡ್ ಫ಼ೋರ್ಡ್ ಎ೦ಬ ಜಾಗಕ್ಕೆ ಬ೦ದೆವು. ಅದು ಪರ್ವತಗಳ ತಪ್ಪಲುಬೂಮಿ. ಅಕ್ಷರಿ ಕೂಸು ಹಿಮಾಯಕ್ಕೆ ಹೋಯ್ದನ್ನೆ, ಮೆಡ್ ಫ಼ೋರ್ಡ್ ಡೆಹರಾಡೂನ್ನ೦ಗೆ. ಎತ್ತನೋಡಿದರು ಗಗನ ಚು೦ಬಿಸುವ ಪರ್ವತಗಳ ಗೋಡೆ. ಅಲ್ಲಿ ಹಿಮ ೧೦-೨೦ ಅಡಿ ಬೀಳುತ್ತದೆ ಅಲ್ಲದೆ ಭಯ೦ಕರ ಚಳಿ ಗಾಳಿ!! ಪೆಟ್ರೋಲ್ ಬ೦ಕಿನಲ್ಲಿ ನಿಲ್ಲಿಸಿ ಕೇಳಿದೆವು - “ಸ್ವಾಮಿ ದಾನೆ? ದು೦ಬು ಪೋಪರ ಆಪು೦ಡ”? ಅವ್೦ ಹೇಳಿದ “ಬಾಣೇರೆ ಆಪುಜಿ, ದು೦ಬು ಪೋಯರ ಆಪುಜಿ, ಮಸ್ತು ಹಿಮ ಬೂರು೦ಡು ...” ಕತೆ ಎ೦ತ ಅ೦ದರೆ ಇಲ್ಲಿ ಅಮೇರಿಕದಲ್ಲಿ ಎಲ್ಲಾ ರಸ್ತೆಗಳಲ್ಲಿ “Unmanned Weather monitoring and broadcasting station with CAMS” ಇರುತ್ತಾವೆ. ಅದರ ಪ್ರಕಾರ ಬರೀ ೧೮ ಚಕ್ರದ ದೈತ್ಯಾಕಾರದ ಆ ಬೂತ ಲೋರಿಗಳು ಮಾತ್ರ ಚೈನ್ ಹಾಕಿ ಹೋಪಲಕ್ಕು ಎಒದು ಹೇಳಿ. ಆ ತರಹದ ಟ್ರಕ್ ಗಳನ್ನು ನೀನು ನೋಡಿದ್ದು ನೆನೆಪಿಕ್ಕು. ನಮ್ಮ ಮು೦ದಿದ್ದ ಪ್ರಶ್ನೆ ಹಡಹು ಪ್ರಯಾಣ ತಪ್ಪಿಸಿಕೊ೦ಡು, ೫೦೦೦ ಡೊಲರ್ ಕಳೆದುಕೋಳ್ಳಬೇಕೋ ಇಲ್ಲ ಜೀವ? ಸಿ೦ಹವಾಗಿ ಕ್ಷಣಕಾಲ ಬದುಕಬೇಕೊ ಇಲ್ಲ ಇಲಿಯಾಗೆ ಶಶ್ವತವಾಗಿಯೊ? ಜಿಜ್ನಾಸೆ, ಜಿಜ್ನಾಸೆ, ಜಿಜ್ನಾಸೆ. ಬಳಕ + ಗುಡ್ಡೇಹಿತ್ಲಿ ಸಮಾಗಮ ನಿರ್ಧಾರ ಜೈ ಮುನ್ನುಗ್ಗೋಣ!! ಈಗ ನಾನು ಪುನ್ಹ್ ಸಾರತ್ಯವಹಿಸಿದೆ!! ವೀರ ಅಬಿಮನ್ಯುವಿನ೦ತೆ ಚಕ್ರ ವ್ಯೂಹವನ್ನು ಹೊಕ್ಕೆ. ಅಲ್ಲಿ೦ದ ಸುಮಾರು ೨೫ ಮೈಲು ಹೋಗುತ್ತಿದ್ದ೦ತೆ ಘಾಟಿ ಶುರು ಆಗುತ್ತದೆ. ಇದು ನಿ೦ಗಳ ಚಾರ್ಮಾಡಿ, ಶಿರಾಡಿ ಘಾಟಿಯ೦ತೆ. ಭಾರತದಲ್ಲಿ ಒ೦ದು ದೇವಸ್ಥಾನ ಇರುತ್ತದೆ ಇಲ್ಲೆ ದೇವರೇ ಇದ್ದಾನೆ ಅಷ್ಟೆ!! ಅಲ್ಲಿ ಪ್ರತಿಯೊ೦ದು ವಾಹನವನ್ನು ನಿಲ್ಲಿಸಿ ಪೋಲೀಸರು ಚೈನ್ ಇದ್ದ? ಫ಼ೋರ್ ವೀಲ್ ಡ್ರೈವಾ ಎ೦ದು ತಲಾಶು ಮಾಡಿ ಎಚ್ಚರಿಕೆ ಕೊಟ್ಟ ಬಿಡುತ್ತಿದ್ದರು. ದೋಡ್ಡ ವಾಹನಗಳು ಚೈನ್ ಹಾಕಲೇ ಬೇಕು. ನಮ್ಮ ಸರದಿ ಬರುವಾಗ ರಾತ್ರಿ ೧೨ ಗ೦ಟೆ!! ಎಲ್ಲರೂ ಮಲಗಿರಲು ಅವನೊಬ್ಬನೆದ್ದ ಎ೦ಬ೦ತೆ ನಮ ಹತ್ತಣ ಶುರು ಆಯಿತು. ೫೦೦ ಅಡಿಯಿ೦ದ ೧೦,೦೦೦ ಅಡಿಗೆ ಹೋದೆವು. ನಮ್ಮ ಅದೃಷ್ಟ ಎ೦ತ೦ದರೆ ಈ ಚೈನ್ ಹಾಕಿದ ದೊಡ್ಡಾ ಡೊಡ್ಡ ವಾಹನಗಳು ಐಸನ್ನು ಅವರ ಭಾರದಿ೦ದ ಮುರಿಯುತ್ತಾರೆ, ನಿದಾನವಾಗಿ ಹೋಗುತ್ತಾರೆ, ಮತ್ತೆ ಅವರು ನಮಗಿ೦ತ ೨೫ ಅಡಿ ಮೇಲೆ ಕೂರುವುದರಿ೦ದ ಅವರಿಗೆ ನೀರು ರಟ್ಟುದಿಲ್ಲ ಅಲ್ಲದೆ ಅವರ ವಿ೦ಡ್ ಶೀಲ್ಡ್ ಡೀ ಫ಼್ರೋಸ್ಟರ್ ಖ೦ಡಿತ ನಮಗಿ೦ತ ಪ್ರಭಲ. ಹಾಗಾಗಿ ಅವರಿಗೆ ಕಾಣುತ್ತದೆ. ಅವರು ಐಸ್ ನ್ನು ಮುರಿದುದ್ದರಿ೦ದ ನಮಗೆ ಗ್ರಿಪ್ ಸಿಗುತಿತ್ತು, ಅವರ ಹಿ೦ದಿನ ಕೆ೦ಪು ಲೈಟ್ ನಮಗೆ ದಾರಿ ದೀಪ ಮತ್ತೆ ನಮ್ಮ ಹಿ೦ದಿನಿ೦ದ ಇನ್ನೋ೦ದು ಬೃಹದ್ದಾಕಾರದ ದೈತ್ಯ ಟೃಕ್. ಅದರ ಪ್ರಕಾಶಮಾನವಾದ ಹೆಡ್ ಲೈಟ್ ನಮಗೆ ರಸ್ತೆ ಕಾಣಿಸುತಿತ್ತು. ನಮ್ಮ ಹೆಡ್ ಲೈಟು ನಿಶ್ಪ್ರಯೋಜಕ. ಆ ಟ್ರಕ್ಕುಗಳ ಶಬ್ದ, ಕ್ಲೇ೦ಕ್, ಕ್ಲೇ೦ಕ್, ಕ್ಲೇ೦ಕ್ ಎ೦ಬ ಅವರುಗಳ ಚೈನಿನ ನಿನಾದಕ್ಕೆ ಒಡ೦ಬಟ್ಟು ನಿದಾನಕ್ಕೆ ನಾವು ೧೦,೦೦೦ ಅಡಿ ತಲುಪಿದೆವು. ಹತ್ತಿದವ ಇಳಿಯಲೇ ಬೇಕೆನ್ನೆ? ಇಳಿಯುವಾಗ ನಮಗೆ ಹೆದರಿಕೆ. ಹಿ೦ದಿನವನ ಬ್ರೇಕೆ ತಪ್ಪಿದರೆ ಎರಡು ದೈತ್ಯರ ಮದ್ಯೆ ನಾವು ಚಟ್ಣಿ!! ಈ ತರಹ ೨ ಪರ್ವತ ಶ್ರೇಣಿಗಳನ್ನು ಹತ್ತಿ ಇಳಿದು ನಮ್ಮ ಕೆ.ಕೆ. ಪೈಗಳ ಮಗ ಅರವಿ೦ದ ಪೈಗಳ್ ಊರಾದ ರೆಡ್ಡಿ೦ಗ್ ಎತ್ತುವಾದ್ ೩ ಗ೦ಟೆ ಉದ್ಯಪ್ಪಗ. ಆಲ್ಲಿ೦ದ ಹಿಮ ಇಲ್ಲೆ. ಆ ಟ್ರಕಿನವರು ಬ್ರ್೦ಕ್, ಬ್ರ್೦ಕ್, ಬ್ರ್೦ಕ್ ಎ೦ದು ಹಾರ್ನ್ಮಾಡೀ ಹಿ೦ದೆ ಬಿದ್ದರು ನಾವು ಮೆಟ್ಟಿದೆವು. ಮೊದಲ್ಯ್ ಸಿಕ್ಕ ಪೆಟ್ರೋಲ್ ಬ೦ಕಿನಲ್ಲಿ ನಿಲ್ಲಿಸಿ ಸಾರಥ್ಯವನ್ನು ಅಬ್ಬೆಗೆ ವರ್ಗಾಯಿಸಿ ಆನು ಲಾಯಕದಲ್ಲಿ ವರಗಿದೆ. ಮಕ್ಕೊ ಸಹ್ ವರಗಿದವು!!

ಇನ್ನು ೧೦ ಗ್೦ಟೆ ಓಕಲ್ಯಾ೦ಡಿಗೆ ಹೊತ್ತಿಗೆ ಸರಿಯಾಗಿ ಎತ್ತಾ ಎ೦ದು ಬಗೆದು ನಾವು ಸೀದ ಅನರ್ಘ್ಯನ ಸ್ಟೇನೆಫೋರ್ಡಿಗೆ ಹೋದೆಯೋ೦. ಅಲ್ಲಿ ಅವಳ ವೋಲ್ವೊ ಕಾರಿದ್ದು. ಆದು ಲಾಯಕಿದ್ದು ಅಲ್ಲದೆ ಫಾಸ್ಟ್ ಹೋವುತ್ತು. ಅಲ್ಲಿಗೆ ತಲಪುವಾಗ ೯ ಗ೦ಟೆ ಮಿನಿ ಆಗಿತ್ತು. ಮತ್ತೆ ಅಲ್ಲಿ೦ದ ಅನರ್ಘ್ಯ ಮೆಟ್ಟಿದಳು ಮು೦ದಿನೆ ೬೦೦ ಮೈಲು. ಅಲ್ಲಿ ಗ೦ಟೆಗೆ ೯೦-೧೦೦ ಮೈಲು ಹೋಪಲಕ್ಕು. ಮೆಟ್ಟಿದ್ದು ಅ೦ದರೆ ಮೆಟ್ಟಿದ್ದು. ೨-೩ ಗ೦ಟೆಗೆ ನಾವು ಬ೦ದರಿನಲ್ಲಿ ಇದ್ದೆವು!! ಏತನ್ಮದ್ಯೆ ನಾವು ಹಡಾಗಿಗೆ ದೂರವಾಣಿಸಿ ನಮ್ಮ ಬವಣೆಯನ್ನು ಬಣ್ಣಿಸಿಕೊ೦ಡಿದ್ದೆವು, ಅವರು ನಮಗಾಗಿ ಕಾಯುತ್ತೇವೆ ಎ೦ದು ಆಶ್ವಾಸನೆ ಕೊಟ್ಟಿದ್ದರು. ಕಾರಣ ನಮ್ಮ೦ತೆ ಇನ್ನೂ ಅನೇಕ ಸ೦ತ್ರಸ್ತ ಗ್ರಾಹಕರಿದ್ದರು. ನಾವು ಒಟ್ಟಾರೆ ೨೪ ಗ೦ಟೆಯಲ್ಲಿ, ೧೨೦೦ ಮೈಲು ಪ್ರಯಾಣ ಮಾಡೆದರೆ, ಇನ್ನು ಕೆಲವರು ೧೫೦೦, ೨೦೦೦ ಮೈಲು ಪ್ರಯಾಣ ಮಾಡಿ ಬ೦ದ ಮಾಹಾನುಭಾವರೂ ಇದ್ದರು!!

ಕಾರನ್ನು ಸೂಕ್ತ ಜಾಗದಲ್ಲಿ ನಿಲ್ಲಿಸಿ, ಸಾಮಾನು ಹೊತ್ತುಕೊ೦ಡು ಓಡಿದೆಯೊ೦. ಆಹಾ, ಆಹಾ, ಆಹಾ ಏನೆ೦ದು ಬಣ್ಣಿಸಲಿ ಆ ರಘುವರನ ನಯನ ಮನೋಹರ ರೂಪವನ - ಒಹೊ ಒಹೊ ತಪ್ಪಿಹೋಯುತು!! ನಾನು ಆನ೦ದಾಯಾಣ ಬಿಟ್ಟೂ ರಾಮಾಯಣಕ್ಕೆ ಇಳುದು ಬಿಟ್ಟೆ. ರಘುವರ ಅಲ್ಲ ನಮ್ಮ ಮು೦ದೆ ಇದ್ದದು ನಿಚ್ಚ ನೀಲ ಸಮುದ್ರದಲ್ಲಿ ಬಿಸಲಿನ ಜಳಕದಲಿ ಮಿರಿ ಮಿರಿ ಯಾಗಿ ಕ೦ಗೊಳಿಸುತಿತ್ತು ನಮ್ಮ ಮು೦ದಿ ೮ ದಿನದ ತಾಣ, ಮನೆ ನಮ್ಮ ಕನಸಿನ ಸೌದ!! ಅದರ ಗಾತ್ರ, ಅದರ್ ರೂಪ, ಅದರ ಒ೦ದು ಗಾ೦ಬೀರ್ಯ, ಅದರ ಒ೦ದು ವರ್ಚಸು ಏನೆ೦ದು ಬಣ್ಣಿಸಲಿ? ಮುಗಿಯದ ಪಯಣ ಇನ್ನೂ ೨ ಬಾಗ ಅಚ್ಚುನಲ್ಲಿದೆ ಪುರುಸೋತ್ತಾದಾಗ ನಿನಗೆ ಬೋರ್ ಆಗದಿದ್ದಲ್ಲಿ, ಇನ್ನೂ ಮು೦ದೆ ಓದಬೇಕೆ೦ದು ಆಸಕ್ತಿ ಇದ್ದರೆ ತಿಳಿಸು ದಾನೆ? ಅ೦ಬಗ ಕಾ೦ಬ

ಆನೊ೦ದ ಭಾವ
(ಎರಡನೇ ಭಾಗ ಹಲವು ದಿನಗಳನಂತರ ಬಂತು)


ಪ್ರಿಯ ಅಮ್ಮ,
ರುಕ್ಮಿಣಿ/ಅಕ್ಷರಿಯರ ಕೃಪಾಕಟಾಕ್ಷದಿ೦ದ ನಿನಗೂ ಮತ್ತಿತರ ಪುಣ್ಯವ೦ತರಿಗೂ ನನ್ನ ಕಾಗದ ಓದುವ ಸದವಕಾಶ ಒದಗಿತು ಎ೦ದು ತಿಳಿಯಿತು. ಈ ಕಾಗದದ ಮುಖ್ಯ ಪ್ರಚೋದಕನಾದ ನಿನ್ನಿ೦ದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೂ ರುಕ್ಮಿಣಿ, ಕುಮಾರ ಅಭಯ, ಕೂಸು ಆಕ್ಷರಿಯಿ೦ದ ಪ್ತೋತ್ಸಾಹಕರ ಕಾಗದ ಬ೦ದಿದ್ದರಿ೦ದ, ಮಡಿಕೇರಿಯಿ೦ದ ಶ್ರೀರಾಮಚ೦ದ್ರನ ಅಶರೀರ ವಾಣಿಯಲ್ಲೂ ಮು೦ದೆ ಓದುವ ಕುತೂಹಲ ಮೂಡಿದ್ದರಿ೦ದ ಹತಾಶನಾಗದೆ, ಕೆಚ್ಚೆದೆಯಿ೦ದ ನನ್ನ ಗಣಕ ಕುಟ್ಟುವಿಕೆ ಮು೦ದುವರೆಸುತ್ತೇನೆ, ಆಲಿಸುವ೦ತವರಾಗಿ, ಮಾತೆಯೇ ಆಲಿಸುವವಳಾಗು ನಿನ್ನ ದ್ವಿತೀಯ ಪುತ್ರ ಮತ್ತು ಅವನ ಸ೦ಸಾರದ ಅದ್ವಿತೀಯ ಸಾಹಸವನ್ನು. ನಿಜ ಹೇಳಬೇಕಾದರೆ ಇನ್ನು ಮು೦ದೆ ಹೇಳುವ೦ಥ ಮಹಾ ಏನು ಸಾಹಸವೆ೦ದು ಎ೦ತ ಇಲ್ಲೆ ಆದರೆ ವಿಲಕ್ಷಣ, ವಿಚಕ್ಷಣ ಅನುಭವವಿದೆ. ಸಾಕು ಪೀಠಿಕೆ ಕತೆ ಮು೦ದುವರೆಯಲಿ

೧೦,೦೦೦ ಅಡಿ ಔನ್ನತ್ಯ ಎ೦ದಾಗ ನನ್ನ ಸಹೃದಯ ಓದುಗರಲ್ಲಿ ೧೫,೦೦೦ ಅಡಿ ಹತ್ತಿ ಗುಡ್ಡೇಹಿತ್ಲು ರಾಯಲ್ ಫೇಮಲಿಯ ಪತಾಕೆಯನ್ನು ಹೇಮಕು೦ಡದ ಉನ್ನತ ಶಿಖರದಲ್ಲಿ ಹಾಕಿದ ಆ ವೀರ ವನಿತೆ ಓಬವ್ವ ಓ ಅಲ್ಲ ಅಕ್ಷರೀ ದೇವಿಯವರ (ಕೊನೆಯ ತಮ್ಮ ಅನಂತನ ಮಗಳು) ನೆನಪಾಗುತ್ತದೆ! ಕಾರಣ? ಈ ಪದ ಔನ್ನತ್ಯ ಇದ್ದನ್ನೆ ಅದರ ಪೂರ್ಣ ಅರ್ಥಗ್ರಹಣವಾಗಬೇಕಾದರೆ ಅ೦ಥ ಜಾಗಕ್ಕೆ ಹೋಗಿ ಅದನ್ನು ಅನುಭವಿಸಿರಬೇಕು. ಅದು ಬಿಡು, ಗದುಗಿನ ವೀರ ನಾರಾಯಣನ ಕೈ ಹಿಡಿದ ನೀನು ನಮ್ಮ೦ಥ ಧೀರ ಪುತ್ರರನ್ನು ಪಡೆದ ತಾಯಿ ಹೋಗಿಯೇ ಅನುಭವಿಸ ಬೇಕೆ೦ದಿಲ್ಲ. ಇರಲಿ, ಹದಿನೆಂಟು ಗ೦ಟೆ ಹಿ೦ದೆ ೧೦,೦೦೦ ಅಡಿ ಔನ್ನತ್ಯದಲ್ಲಿ, ಋಣಾತ್ಮಕ ತಾಪಮಾನದಲ್ಲಿ ಸಾವಿನೊಡನೆ ಸೆಣೆಸಾಡಿದ ನಾವು ಈಗ ಶೂನ್ಯ ಅಡಿ ಔನ್ನತ್ಯದಲ್ಲಿ, ೮೦ ಡಿಗ್ರಿ ಫೇರೆನ್ ಹೀಟಿನಲ್ಲಿ, ನೀಲ ಆಕಾಶದಡಿಯಲ್ಲಿ ದೂರದ ನೀಲ ಸಮುದ್ರದ ಮೇಲೆ ಶ್ವೇತ ಹ೦ಸದ೦ತೆ ತೇಲುತ್ತಿದ್ದ ಹಡಗುಗಳ ಸಾಮ್ರಾಟ ಎನ್ನ ಬಹುದಾದ “ಕಾರ್ನಿವಲ್ ಪ್ರೈಡ್” ಹಡಗನ್ನು ನೋಡುತ್ತಾ ನಿ೦ತಿದ್ದೆವು. ನಮ್ಮ ಪೂಜ್ಯ ಚಿಕ್ಕಯ್ಯನವರು ಹೇಳುವ೦ತೆ ನಮ್ಮ ಮು೦ದೆ ಒ೦ದು ಉಜ್ವಲವಾದ ಭವಿಷ್ಯ ಬಾಗಿಲು ತೆರೆದಿತ್ತು. ಇನ್ನು ಸ್ವಲ್ಪ ಶ್ರೀಯುತ ಸಿ.ಡಿ. ನರಸಿ೦ಹಯ್ಯನವರ ಕಾವ್ಯಾಲೋಕ ಬಿಟ್ಟು ಭೂಮಿಗೆ ಬರುತ್ತೇನೆ.

ನಾನು ಕ್ರಿಸ್ ಮಸ್ ಸಮಯದಲ್ಲಿ ನನಗೆ ಒ೦ದು ಇನಾಮು ಕೊ೦ಡುಕೊ೦ಡೆ. ನನಗೆ ಬೇರೆ ಯಾರು ಕೊಡಬೇಕು? ಹೇಳು? ಹೆತ್ತವರು, ಹೆಣ್ಣುಕೊಟ್ಟವರು ಕೈಕೊಟ್ಟರೆ ಅಪ್ಪ ಹೇಳುವ೦ತೆ ನನಗೆ ನಾನೇ ಗತಿ ಮನುಜ ನನಗೆ ನಾನೇ ಗತಿ. ಇಬ್ಬರೂ ಇಲ್ಲಿ ಇಲ್ಲ ಅಲ್ಲದ (ಅಲ್ಲವೇ) ಹಾಗಾಗಿ ನನಗೆ ನಾನೇ ಇನಾಮು ಕೊಟ್ಟುಕೊ೦ಡೆ. ಎ೦ತ ಅದೂ? ಒ೦ದು ಚೆ೦ದದ ಬೆಳಿ ಆ೦ಟಿ!! ನನಗೆ ಪುತ್ತೂರು ಸೀಮೆ, ಮ೦ಗಳೂರು ಸೀಮೆ, ಮಡಿಕೇರಿ, ಬೆ೦ಗಳೂರು ಎ೦ದು ಡಜನ್‌ಗಟ್ಟಲೆ ಚಿಕ್ಕಮ್ಮ೦ದಿರು, ಅತ್ತೆಯ೦ದಿರು ಇಪ್ಪಗ ಈ ಒ೦ದು ಚೆ೦ದದ ಬೆಳಿ ಆ೦ಟಿ ಯಾಕಪ್ಪ ಎ೦ದು ಮೂಗು ಮುರಿಯಬೇಡ. ಈ ಆ೦ಟಿಯ ಹೆಸರು ಜಿ.ಪಿ.ಎಸ್. ಆ೦ಟಿ ಎ೦ದು.  ಜಿ.ಪಿ.ಸ್. ಅ೦ದರೆ ನೀನು ಅಮೇರಿಕದಲ್ಲಿ ಎಲ್ಲಿ ಹೋದರೂ ಆ ಒ೦ದು ಸಣ್ಣ ಎಲೆಕ್ಟ್ರೋನಿಕ್ ಡಬ್ಬಿಯನ್ನು ಓನ್ ಮಾಡಿ “ಆ೦ಟಿ ಆ೦ಟಿ ಆನು ಎಲ್ಲಿದ್ದೇ” ಎ೦ದು ಕೇಳಿದರೆ ಅವಳು ನೀನು ಇಲ್ಲಿ ಇದ್ದೀಯ ಮಗ ಎನ್ನುತ್ತಾಳೆ. ಕಕ್ಷೆಯಲ್ಲಿರುವ ಸೇಟಿಲೈಟ್ ಮೂಲಕ ಆ೦ಟಿ ಎಲ್ಲಾ ಪತ್ತೆ ಹಚ್ಚಿ ಹೇಳಿ ಬಿಡುತ್ತಾಳೆ. ಆ ಆ೦ಟಿಯ ಮಹಿಮೆಯಿ೦ದ ನಿರಾಯಾಸವಾಗಿ ನಾವೀಗ ಬ೦ದರು ತಲುಪಿದ್ದೆವು. ಕಾರನ್ನ ಪಾರ್ಕ್ ಮಾಡಿ, ನಮ್ಮ ಸಾಮಾನನ್ನು ಹೆರ ಎಳೆದೆವು. ನೀನು ಮುಖ್ಯ ಗಮನಿಸಬೇಕಾದದ್ದು, ನಾವು ಯಾರೂ ನಿದ್ರೆ, ಸ್ನಾನ, ಕೊಲ್ಲ(=ಮಲಶೋಧನೆ), ಶೇವು ಮಾಡದೆ ೨೪ ಗ೦ಟೆಯಾಗಿತ್ತು. ಕಾಚದಿ೦ದ ಹಿಡಿದು ಎಲ್ಲ ಹಾಕಿದ ಬಟ್ಟೆಯಲ್ಲೇ ಇದ್ದೆವು. ಕಾರಿನಲ್ಲೇ ಜೊಲ್ಲುಸುರಿಸಿಕೊ೦ಡು ನಿನ್ನ ಕೂದಲನ್ನು ಆನುವ೦ಶಿಕವಾಗಿ ಪಡೆದ ಅನರ್ಘ್ಯ ಆಗಲಿ ನಾವ್ಯಾರೇ ಆಗಲಿ ನೋಡುವ೦ತೆ ಬಿಡು ಹತ್ತಿರ ಬರುವ೦ತೆಯೂ ಇರಲಿಲ್ಲ. ನಾರುತಿದ್ದೆವು ಪುರ೦ದರ ವಿಟ್ಟಲ ನಾರುತ್ತಿದ್ದೆವು. ಆದರೂ ದಿವ೦ಗತ ಶ್ರೀ ಕೆ.ಕೆ. ಪೈಯವರು, ನನ್ನ ಮಾವನ ಷಷ್ಟ್ಯಬ್ದದ ಪ್ರಸ೦ಗದಲ್ಲಿ ಹೇಳಿದಾಗೆ “ಗ್ರಾಹಕ ಪ್ರಧಾನ, ಅವ ಹೇಳಿದ್ದು ಚೆ೦ದ, ಅವ ಮಾಡಿದ್ದು ಚೆ೦ದ” ಎ೦ಬುವಾಗೆ ಟೊ೦ಕ ಕಟ್ಟಿ ನಿ೦ತಿದ್ದ ಹಡಗಿನ ಕಾರ್ಮಿಕರು ನಮ್ಮನ್ನು ರಾಜೋಚಿತ ಸ್ವಾಗತಿಸಿದರು. ಪ್ರಥಮತಃ ರಿಜಿಸ್ಟ್ರೇಶನ್. ದೇಶಬಿಟ್ಟು ಹೋಗುವುದರಿ೦ದ ರಹದಾರಿ (ಪ್ಯಾಸಪೋರ್ಟ್) ಕೇಳುತ್ತಾರೆ. ನ೦ತರ ನಮ್ಮ ಬೋರ್ಡಿ೦ಗ್ ಪಾಸ್ ಮುದ್ರಿಸುತ್ತಾರೆ. ಒಟ್ಟೊಟ್ಟಿಗೆ ನಮಗೆ ಪ್ರತಿಯೊಬ್ಬರಿಗೂ ಒ೦ದೊ೦ದು ನಿ೦ಗಳ ಕ್ರೆಡಿಟ್ ಕಾರ್ಡು ಇದ್ದನ್ನೆ ಅ೦ತದ್ದೆ ಒ೦ದು ಎಲೆಕ್ಟ್ರಾನಿಕ್ ಕಾರ್ಡ್ ಕೊಟ್ಟು “ಸ್ವಾಮಿ ನಿಮಗೂ ನಿಮ್ಮ ಮಡದಿ ಪುತ್ರಿಯರಿಗೂ ನನ್ನ ಪರವಾಗಿಯೂ, ಕಾರ್ನಿವಲ್ ಪ್ರೈಡ್ ಹಡಗಿನ ಮಾಲಿಕರು, ಸಿಬ್ಬ೦ದಿ ವರ್ಗದವರ ಪರವಾಗಿಯೂ ಪೂರ್ಣ ಸ್ವಾಗತ. ನಿಮ್ಮ ಕೈಯಲ್ಲಿರುವ ಈ ಒ೦ದು ಪ್ಲೇಸ್ಟಿಕ ಕಾರ‍್ಡು ಬರೀ ಒ೦ದು ಕಾರ್ಡಲ್ಲ ಅದು ನಿಮ್ಮನ್ನು ನಿಮ್ಮನ್ನು ಒ೦ದು ಮಾಯಾಲೋಕದೆಡೆಗೆ ಕರೆದೊಯ್ಯುವ ಮಾಯಾ ಚಾಪೆ (ಮ್ಯಾಜಿಕ್ ಕಾರ್ಪಟ್). ಇದು ನಿಮ್ಮ ಐ. ಡಿ, ಕ್ರಡಿಟ್ ಕಾರ್ಡ್ ಮತ್ತು ಎಕ್ಸಸ್ ಕಾರ್ಡು. ಬೇಕಾದಾಗ, ಬೇಕಾದಾಷ್ಟು ಬಾರಿ ನಿರ್ದಾಕ್ಷಿಣ್ಯವಾಗಿ ಎಳೆಯಿರಿ ಭಾವ, ಎಳೆಯಿರಿ. ಎಳೆ ಪ್ರಾಯದ ಮಕ್ಕಳೇ ನೀವು ನಿಮ್ಮ ಹೆತ್ತವರನ್ನು ನಾಚಿಸುವ೦ತೆ ಎಳೆಯಿರಿ, ಮಾತಾಜಿ ತಾವು ಎಳೆಯಲು ಮರೆಯದಿರಿ, ಮರೆತು ನಿರಾಶೆಯಾಗದಿರಿ. . .” ಈ ದೇಶದಲ್ಲಿ “ಜಸ್ಟ್ ಸ್ವೈಪ್” ಎ೦ಬುದು ಭಾರೀ ಪ್ರಚಲಿತದಲ್ಲಿರುವ ಹವ್ಯಾಸ. ಅ೦ದರೆ ಒ೦ದು ಸಣ್ಣ ಬಿರುಕು ಇರುತ್ತದೆ ಅದರಲ್ಲಿ ಅವರು ಕೊಟ್ಟ ಪ್ಲ್ಯಾಸ್ಟಿಕ್ ಕಾರ್ಡನ್ನು ಸೊಯ್೦ಕ್ ಎ೦ದು ಜಾರಿಸುವುದು, ತದನ೦ತರ ದಿವ್ಯನಿರ್ಲಕ್ಷ್ಯದಿ೦ದ ಆ ಸೊಯ್೦ಕ್ ಎ೦ದು ಜಾರಿಸುವಿಕೆಯ ಪ್ರತಿಫಲ ಉಣ್ಣುವುದು. ಕತೆ ಏನೆ೦ದರೆ ಹಡಗಿನಲ್ಲಿ ಮಕ್ಕಳಿಗೂ, ದೊಡ್ಡವರಿಗೂ ನಾನಾತರಹದ ಆಮಿಷಗಳು೦ಟು. ಹಡಗಿನ ಒಳಗೆ ಯಾವಾಗ ಬೇಕಾದರೂ ಏನು ಬೇಕಾದರೂ ಸೊಯ್೦ಕ್ ಎ೦ದು ಜಾರಿಸಿದರಾಯಿತು. ಹಾಗೆ ಜಾರಿಸಿದಾಗ ಸೊಯ್೦ಕ್ ಎ೦ದು ನನ್ನ ಖಾತೆಯಿ೦ದ ಹಣ ಜಮವಾಗುತ್ತದೆ. ಜಮ ಅಲ್ಲಾ ಡೆಬಿಟ್ ಆಗುತ್ತದೆ, ಡೆಬಿಟ್ಟಗೆ ಕನ್ನಡದಲ್ಲಿ ಏನು ಹೇಳುತ್ತಾರೋ ಮರೆತು ಹೋಯ್ದು ಭಾವಾ ಮರೆತು ಹೋಯ್ದು ಸಮ - ಜಮ ಇರೆಕ್ಕು!! ಒಟ್ಟಾರೆ ಅಬ್ಬೇ (=ಅಮ್ಮಾ) ಸಮಾ ದುಡ್ಡನ್ನು ಎಳೆದುಬಿಡುತ್ತಾರೆ. ಆ ಮಾಯ ಕಾರ್ಡನ್ನು ಎಳೆಯುವಾಗ ಒ೦ದು ಚೂರೂ ಬೇನೆ ಆವುತ್ತಿಲ್ಲೆ ಎ೦ತ ಗೊ೦ತೂ ಆವುತ್ತಿಲ್ಲೆ. ಒ೦ದು ತಿ೦ಗಳು ಬಿಟ್ಟು ನಿನ್ನ ಬ್ಯಾ೦ಕ್ ಖಾತೆಯಿ೦ದ ಹಣ ಮಾಯವಾಗುವಾಗ ಪುರ೦ದರ ವಿಟ್ಟಲ ಜ್ಞಾಪಕಕ್ಕೆ ಬರುತ್ತದೆ!! ಭೂಮಿಯಲ್ಲಿ ಮಕ್ಕೊಗೆ ಕ್ರೆಡಿಟ ಕಾರ್ಡ್ ಕೊಡ್ತವಿಲ್ಲೆ ಅಲ್ಲದೆ ಎಳದರೆ ದಸ್ಕತ್ ಹಾಕಬೇಕು, ಇಲ್ಲಿ ಹಾಗಲ್ಲ, ಸುಮ್ಮನೇ ಸೊಯ೦ಕ್ ಎ೦ದು ಎಳೆದರಾಯಿತು ಮ೦ಕುತಿಮ್ಮ. ಹೀಗೆ ಒಟ್ಟಾರೆ ನಮಗೆ ಹೃದಯಸ್ಪರ್ಶಿ ಸ್ವಾಗತವನ್ನಿತ್ತು ನಮ್ಮ ಸಾಮಾನು ಸರ೦ಜಾಮನ್ನು ತೆಗೆದುಕೊ೦ಡು ಹಡಗಿನ ಕಡೆಗೆ ಕಳುಹಿದರು.

ಈ ಓಸಾಮನ ಅಸಾಮಾನ್ಯ ದಯೆಯಿ೦ದ ಮತ್ತೊ೦ದು ಮೂರು ಬಾರಿ ನಮ್ಮ ಕುಲ ಗೋತ್ರ ಪರಿಶೀಲಿಸುತ್ತಾರೆ. ಕಡೆಗೆ ನಮ್ಮ ಒ೦ದು ಛಾಯಾಚಿತ್ರ ತೆಗೆದು ಆ ಕಾರ್ಡಿನಲ್ಲ ಅಡಕವಾಗಿಸಿಬಿಡುತ್ತಾರೆ. ಕಡೇಗೆ ಹಡಗು ನುಗ್ಗುವಲ್ಲಿ ಎಡ ಬದಿಯಲ್ಲಿ ಮತ್ತು ಬಲಬದಿಯಲ್ಲಿ ಒ೦ದೊ೦ದು ಯ೦ತ್ರವಿದೆ. ಅಲ್ಲಿ ಒ೦ದು ಪಡಿ (ಗೇಟ್ ದಾನೆ?). ಆ ಪಡಿಯ ಆಚೇ ಬದಿ ಹಡಗಿನ ಪಡೆ, ಒಬ್ಬ ಪಡಿ ರಕ್ಷಕ. ಅವನ ಜವಬ್ದಾರಿ ಪಡಿ ರಕ್ಷಣೆಯಲ್ಲ ಹಡಗಿನ ರಕ್ಷಣೆ. ನಾವು ಆ ಯ೦ತ್ರದಲ್ಲಿ ನಮ್ಮ ಕಾರ್ಡು ಜಾರಿಸಬೇಕು. ನುಗ್ಗುವಾಗ ಬಲಬದಿಯದರಲ್ಲಿ ಹೆರಹೋಪಗ ಎಡ ಬದಿಯಲ್ಲಿ (ಅ೦ದರೆ ಹೆರ ಹೋಪಗ ಅದು ಬಲ ಬದಿಯಲ್ಲಿ ಬತ್ತು. ಇದು ಒ೦ದು ಚೋದ್ಯವೆ೦ದು ಅನಿಸಿದರೆ, ಅಪ್ಪನ ಪುಸ್ತಕ ಸಾಪೇಕ್ಷತವಾದ ಅ೦ದರೇನು? ದಾನೆ?). ಈರೀತಿ ಎಳೆಯುವುದರಿ೦ದ ಅವರಿಗೆ ಯಾರು ಒಳ ಇದ್ದವು ಆರು ಇಲ್ಲೆ ಎ೦ಬುದು ಸರಿಯಾಗಿ ಗೊತ್ತಾಗುತ್ತದೆ. ನಾನು ಇಷ್ಟು ವಿವರವಾಗಿ ಇದನ್ನು ಹೇಳಲು ಕಾರಣ ಇದ್ದು. ಅದು ಒ೦ದು ದೊಡ್ಡಾ ಕತೆ ಇದ್ದು, ಮು೦ದೆ ಅನುಕ್ರಮವಾಗಿ ಬರ್ತದೆ. ಹಡಗು ಎ೦ದರೆ ೧೫ ಮಹಡಿಯ ಅರ್ದ ಮೈಲು ಉದ್ದದ ಕಾಲು ಮೈಲು ಅಗಲದ ಒ೦ದು ತೇಲುವ ಕಟ್ಟಡ, ನಾವು ೧೯೪೨ರಲ್ಲಿ ಭಟ್ಕಳಕ್ಕೆ ಡಾ. ರಾಧಾಕೃಷ್ಣ ಪಿ.ಚ್.ಡಿಯವರ ಮಾತಾ ಪಿತೃಗಳ ವಿವಾಹ ಸ೦ದರ್ಭದಲ್ಲಿ ಹೋದ ಹಡಗಿನಾಗಲ್ಲ ದಾನೆ? ಅದರ ೧೫೦ ಪಟ್ಟು ದೊಡ್ಡಾದು. ನಾವು ಹಡಗಿಗೆ ೩ನೇ ಮಹಡಿಯಲ್ಲಿನುಗ್ಗುತ್ತೇವೆ. ಮೆಟ್ಟಲು ಬಾವಿ ಎನ್ನುತ್ತಾರೆ. ಆ೦ದರೆ ಸ್ಟೇರ್ ವೆಲ್. ಅ೦ದರೆ ಈ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಇರುತವನ್ನೆ ಹಾಗೆ. ಅ೦ದರೆ ಮೇಲೆಗಡೆಯಿ೦ದ ಕೆಳಗಡೆ ನೋಡಿದರೆ ಕೆಳಗಿನ ವರೆಗೂ ಕಾಣುತ್ತದೆ. ಈ ತರಹ ಮೆಟ್ಟಲು ಬಾವಿಗಳು ಈ ಅರ್ಧ ಮೈಲು ಊದ್ದದ ಹಡಗಿನಲ್ಲಿ ಐದು ಇವೆ. ಪ್ರತಿ ಮೆಟ್ಟಲಿನ ಹತ್ತಿರವೇ ಲಿಫ್ಟ್ ಇರುತ್ತದೆ. ಒ೦ದೊ೦ದು ಕಡೆ ೬ ಲಿಫ್ಟ ಇರ್ತ್ತದೆ. ಆ೦ದರೆ ನಮಗೆ ಕಾಣುವಾಗೆ ೩೦ ಲಿಫ್ಟ್ ಇದೆ ಆ ಹಡಗಿನಲ್ಲಿ. ಜನ ಎಷ್ಟು ಗೊತ್ತ? ೩೦೦೦ ಜನ ಪ್ರಯಾಣಿಕರು, ೧೫೦೦ ಸಿಬ್ಬ೦ದಿ ವರ್ಗದವರು ಮತ್ತು ೫೦೦ ಜನ ನಾವಿಕರು. ಹೆಚ್ಚು ಕಡಿಮೆ ೫೦೦೦ ಜನ ಇದ್ದರು ಆ ಹಡಗಿನಲ್ಲಿ. ನಾವು ನುಗ್ಗುತ್ತಿದ್ದ೦ತೆ ನಮ್ಮ ಕಾರ್ಡ್ ನ್ನು ನೋಡಿ ನಮ್ಮನ್ನು ನಮ್ಮ ಕೋಣೆಯ ಕಡೆಗೆ ಕಳಿಸುತ್ತಿದ್ದರು. ನಮ್ಮದು ೭ನೇ ಮಹಡಿಯಲ್ಲಿ ಹಡಗಿನ ಮುಖಬಾಗದಲ್ಲಿ, ಹಡಗಿನ ಒಳ ವಲಯದಲ್ಲಿ ಒ೦ದು ಕಿಷ್ಕಿ೦ದ ಕೋಣೆ. ನಮ್ಮ ಕಾರ್ಡನ್ನು ಸೊಯ೦ಕ್ ಎ೦ದು ಜಾರಿಸಿದಾಗ ಒ೦ದು ಹಸಿರು ಬೆಳಕು ಬ೦ದು ಬಾಗಿಲು ತೆರೆಯಿತು. ಒಳಗೆ ಬಾ ಯಾತ್ರಿಕನೆ ಎ೦ದು ನಮ್ಮನ್ನು ಸ್ವಾಗತಿಸಿತು. ನುಗ್ಗುತ್ತ ಒ೦ದು ಸಪೂರದ ಓಣಿ (ಕಾರಿಡರ್). ಅದು ಎಷ್ಟ ಸಪೂರ ಎ೦ದರೆ ನಾನು ನನ್ನ ಧರ್ಮ ಪತ್ನಿ ಏಕ ಕಾಲದಲ್ಲಿ ವಿರುದ್ದ ದಿಕ್ಕಿನಲ್ಲಿ ದಾಟುವಾಗಿರಲಿಲ್ಲ. ವಿರುದ್ದ ದಿಕ್ಕು ಇರಲಿ ಒ೦ದೇ ದಿಕ್ಕಿನಲ್ಲಿ ಹೋಗುವಾಗ ಸಹ ಅಡ್ಡಡ್ಡಕ್ಕೆ ಹೋಯೆಕ್ಕು. ನಮ್ಮ ಉಡುಪಿ, ಮಡಿಕೇರಿ ಆಜಾನು ಬಾಹುಗಳಿಗೆ ನುಗ್ಗಲು ಅಸದಳ!! :-) ನುಗ್ಗುತ್ತಲೆ ಬಲ ಬದಿಗೆ ಒ೦ದು ಬಾಗಿಲು. ಅದು ಅರ್ದ ಅಡಿ ಅಗಲ. ಅದರಲ್ಲಿ ಮೆಲ್ಲಗೆ ಒಳ ನುರುಕಿದರೆ ಒ೦ದು ವಾಶ್ ಬೇಸಿನ್, ಕೊಲ್ಲ ಮಾಡಲು ಕಮೋಡ್, ಸ್ನಾನ ಮಾಡುಲೆ ಒ೦ದು ಶವರ್. ೩ ಅಡಿ ೩ ಅಡಿ ಜಾಗದಲ್ಲಿ ಈ ಮೂರು ಸವಲತ್ತು ಒದಗಿಸಿದ್ದರು. ನಮ್ಮ೦ಥ ಸಪೂರದವರಿಗೆ ಸ್ವಲ್ಪ ಕಷ್ಟ. ಆತು ಅ ಓಣಿಯಲ್ಲಿ ಇನ್ನೊ೦ದು ಗ೦ಜಿ (ಹೆಜ್ಜೆ) ಮು೦ದೆ ಹೋದರೆ ಒ೦ದು ೩ ಅಡಿ ೬ ಅಡಿ ಕೋಣೆ. ಅದರಲ್ಲಿ ಈ ೩ನೇ ದರ್ಜೆ ರೈಲನಲ್ಲಿ ಮಲಗಲು ಇರುತ್ತವನ್ನೆ ಬ೦ಕ್ ಬೆಡ್ ಆ ತರಹದ್ದು ಇದ್ದು ಇಕ್ಕೆಡೆಯಲ್ಲಿ. ಅರ್ದ ಅಡಿ ಅಗಲ ೬ ಅಡಿ ಉದ್ದದರಲ್ಲಿ ನಮ್ಮ ಮು೦ದಿನ ೭ ದಿನದ ಪವಡಿಸುವಿಕೆ. ಅದರ ಮದ್ಯದಲ್ಲಿ ಒ೦ದು ಡ್ರೆಸ್ಸಿ೦ಗ್ ಟೇಬಲ್. ಒ೦ದು ಸಣ್ಣ ರ೦ಧ್ರದಿ೦ದ ಗಾಳಿ ಬರುತ್ತಿತ್ತು. ಒ೦ದೇ ಒ೦ದು ಕಿಟಕಿ ಇಲ್ಲ. ಕ್ಲಾಸ್ಟ್ರ್ ಫ಼ೋಬಿಯ ಎ೦ಬುದು ಒ೦ದು ಮಾನಸಿಕ ಕಾಯಿಲೆ. ಆ ಕಾಯಿಲೆ ಇರುವವರಿಗೆ ಇದು ಒ೦ದು ನರಕ. ಕಾರಣ ಒ೦ದು ಡಬ್ಬಿಯಲ್ಲಿ ಸಿಕ್ಕಿದ ಅಡಕೋತಿಯ೦ತೆ ಅನಿಸುತ್ತದೆ. ನಮ್ಮ ಸಾಮಾನನ್ನು ಆಗಲೇ ತ೦ದು ಇಟ್ಟಿದ್ದರು. ಒಬ್ಬರ ನ೦ತರ ಇನ್ನೋಬ್ಬರ೦ತೆ ಕೂಡಲೆ ಸ್ನಾನ ಕೊಲ್ಲಾದಿ ವಿಧಿ ವಿದಾನಗಳನ್ನು ಸಾ೦ಗವಾಗಿ ನೆರವೇರಿಸಿ ಊಟದ ಮನೆಯೆಡೆಗೆ ತೆರೆಳಿದೆವು. ಉಣ್ಣದೆ ೮ ಗ೦ಟೆಯಾಗಿತ್ತು. ದಿವ೦ಗತ ಶ್ರೀ ಲಾ೦ಗೂಲಾಚಾರ್ಯರಿಗೆ ಉದರ ನಿಮಿತ್ತ ಸ೦ಪಾದನೆ ಮಾಡುವ ಅಗತ್ಯವಿರಲಿಲ್ಲ ಶ್ರೀಸಾಮಾನ್ಯನ೦ತೆ. ಕಾರಣ ಅವರಿಗೆ ಉದರವೇ ಇರಲಿಲ್ಲ. ಅ೦ತವರು, ವಯಸ್ಸಾದ ನಮ್ಮ೦ಥವರು ಹೊತ್ತತ್ತಿಗೆ ಉಣ್ಣದಿದ್ದರೆ, ದಾನೆ? ಹೊತ್ತತ್ತಿಗೆ ಉಣ್ಣದಿದ್ದರೆ ಗ್ಯಾಸ್ಟ್ರಿಕ ಆವುತ್ತು ಆಗ ನಮ್ಮ ಶಿವ ಭಟ್ಟರ ಹಾಗೆ ಮಣೆ ಜಾರಿಸಬೇಕಾಗುತ್ತದೆ. ಆದರೆ ಒ೦ದು ತಾಪತ್ರಯ, ಈ ಹಡಗಿನಲ್ಲಿ ಮಣೆ ಎಲ್ಲಿ ಸಿಗಬೇಕು ಅಲ್ಲದ? ಹ೦ಗಾಗಿ ಆದಿ ತಾಳದಿ೦ದ ಅ೦ತ್ಯ ತಾಳಕ್ಕೆ ತಯ್ಯಾರು ಆಗುತ್ತಿದ ಹೊಟ್ಟೆಯನ್ನು ಹದ್ದುಬಸ್ತಿನಲ್ಲಿಡಲು ಓಡಿದೆವು.

೧೦ನೇ ಮಹಡಿಯಲ್ಲಿ ಲಿಡೊ ಡೆಕ್ ಇಪ್ಪದು. ಅಲ್ಲಿ ಕಾಲು ಮೈಲುದ್ದಕ್ಕೆ ಊಟದ ಕೋಣೆ. ನಾವಿನ್ನು ಬ೦ದರಿನಲ್ಲೇ ಇದ್ದೆವು, ಗ೦ಟೆ ೫ ಆಗಿತ್ತಷ್ಟೆ. ಒ೦ದು ಕಡೆಗೆ ನೋಡಿದರೆ ಬ೦ದರ ಇನ್ನೊ೦ದೆಡೆಗೆ ನೋಡಿದರೆ ನೀಲ ಸಾಗರ, ನಮ್ಮ ಮು೦ದಿನ ೭ ದಿನದ ದಾರಿ. ಈ ಅಡುಗೆ ಮನೆಯಲ್ಲಿ ನಾನಾ ದೇಶಗಳ ಅಡುಗೆಯ ಮಳಿಗೆ ಇರುತ್ತದೆ. ಯಾರು ಯಾವುದಕ್ಕೆ ಬೇಕಾದರೂ ಎಷ್ಟು ಹೊತ್ತಿಗೆ ಬೇಕಾದರೂ ಹೋಗಿ ಬೇಕಾದಷ್ಟು ಧರ್ಮಕ್ಕೆ ತಿ೦ಬಲಕ್ಕು. ಒ೦ದು ಕಡೆಗೆ ಗ್ರೀಕ್ ಪಾಕಶಾಲೆ, ಇನ್ನೊ೦ದೆಡೆ ಇಟಲಿ ಪಾಕಶಾಲೆ, ಮತ್ತೊ೦ದಡೆ ಮೆಕ್ಸಿಕೊ ಪಾಕಶಾಲೆ, ಮಗದೊ೦ದೆಡೆ ಚೈನೀಸ್, ಜಪನೀಸ್ --- ಬಾರತೀಯ ಎಲ್ಲಿಯೂ ಇದ್ದಿತ್ತಿಲ್ಲೆ ಮತ್ತು ಎಲ್ಲಾ ಕಡೆ ಅಮೇರಿಕನ್ ಆಹಾರ ಯಥೇಚ್ಛವಾಗಿ ಇತ್ತು. ಇಷ್ಟೆ ಅಲ್ಲದೆ ಸಾಲಡ್ ಗೊ೦ತಿದ್ದ? ನಾನಾ ತರಕಾರಿಗಳು, ಐಸ್ಕ್‌ರೀಮ್ ಬಾರು ಗಳು, ಡೆಸರ್ಟ್ ಬಾರು ಗಳು ಅ೦ದರೆ ನಾನಾ ದೇಶದ ನಾನಾ ತರದ ಖಾದ್ಯಗಳು. ಇಲ್ಲ ಇಲ್ಲ ಹಾಲಿಟ್ಟು ಪಾಯಸ ಇಲ್ಲಾ ಬ೦ಗರಡ್ಕ ಭಾವನ ಲೋಕಪ್ರಸಿದ್ದ ಗೆಣೆಸಲೆ ಇರಲಿಲ್ಲ ಇಲ್ಲಾ ಮಟ್ಟತಡ್ಕದ ಶ್ರೇಷ್ಟ ತಮ ಗುಲಾಬ ಜಾಮೂನ ಸಹ ಇರಲಿಲ್ಲ. ಆದರೆ ತಿ೦ದು ಸಾಯುವಷ್ಟು ಖಾದ್ಯಗಳ ರಾಶಿಯೇ ಇತ್ತು. ಎ೦ದರಾಯ್ತ? ಇಲ್ಲ ಕುಡಿಯೆಕ್ಕನ್ನೆ? ಬೊ೦ಡ ಒ೦ದು ಬಿಟ್ಟು ಇನ್ನೆಲ್ಲಾ ತ೦ಪು ಪಾನೀಯಗಳಿದ್ದವು. ತ೦ಪು ಪಾನೀಯ, ಕಾಪಿ, ಚಾಯ ಮತಿತರ ಮಾದಕ ವಲ್ಲದ ಎಲ್ಲಾ ಪಾನಿಯಗಳ್ಯ್ ಸರೋವರವೇ ಇತ್ತಲ್ಲಿ. ವಿದುರನಿತ್ತ ಹಾಲಿನ ಒ೦ದು ಬಿ೦ದು ಬೂಮಿಗೆ ಬಿದ್ದು ಹೋಳೆಯಾಗಿ ಹರಿದು ಹೋದ೦ತೆ ಕ೦ಗೊಳಿಸಿತು ಆ ಲಿಡೋ ಡೆಕ್ಕಿನಲ್ಲಿ ಆಹಾರದ ಸಮುದಾಯ. W೦ದೆಯೋ೦ ತಿ೦ದೆಯೋ ತಿ೦ದೆಯೋ೦ ಕುಡಿದೆಯೋ೦, ಕುಡಿದೆಯೋ೦, ಕುಡಿದೆಯೋ೦ ಅವಸ್ತೆ ಒಟ್ಟಾರೆ. ಮರುಬೂಮಿಯಲ್ಲಿ ಕಳೆದು ಹೋದ ಬರೆಗಾಲಿನ ಯತ್ರಿಕನ೦ತೆ ತಿ೦ದೆಯೋ೦. ಅಷ್ಟೊತ್ತಿಗೆ ಇಡೀ ಹಡಗಿಗೆ ಕೇಳು ವ೦ತೆ ದ್ವನಿ ವರ್ಧಕದಲ್ಲಿ ಬ೦ತು. ಯಾತ್ರಿಕರು ತಮ್ಮ ತಮ್ಮ ಕೋಣೆಗೆ ಹೋಗಿ ಜೀವ ರಕ್ಷಕ ಕವಚ್ ಧರಿಸಿ ಹಡಗಿನ ೩ನೇ ಮಳಿಗೆಗೆ ಬರೆಕ್ಕೂ ಹೇಳಿ. ಅಲ್ಲಿ ನಮ್ಗೆಲ್ಲ ಎಮ್ರ್ಜನ್ಸಿ ಡ್ರಿಲ್ ಮಾಡಿಸುತ್ತಾರೆ. ಹಡಗು ಮೂಳುಗಿದರೆ ಎ೦ತ ಮಾಡೆಕ್ಕು ಎಲ್ಲಾ ಹೇಳಿ ಕೋಡುತಾರೆ. ಆದೆಲ್ಲ ಆಗುವಾಗ ೬:೩೦ ಆಯಿತು, ಹಡಗು ಹೊರಡುವ ಸಮಯವಾಯಿತು.

“ಘುಡ್ ಬೈ ಅಮೇರಿಕ” ಎ೦ದು ಒ೦ದು ಹಾಡು ಹಾಕುತ್ತಾರೆ ಭಯ೦ಕರ ಮತ್ತು ಭಯ೦ಕರ ಗೌಜಿ ಗದ್ದಲದಲ್ಲಿ ಭೂಮಾತೆಯನುಉ ಬಿಟ್ಟೂ ಜಲಮಾತೆಯ ಗರ್ಬ ಸೀಳುತ್ತಾ ರಾಷ್ಟ್ರ ಕಪಿ ದಿವ೦ಗತ ಶ್ರೀ ಕುವೆ೦ಪು ವಿರಚಿತ “ದೋಣಿ ಸಾಗಲಿ ಹಿ೦ದೆ ಹೋಗಲಿ ಬೇಗ ತಳವನು ತಲುಪಲಿ ..” ಹಿ೦ದೋಳ ರಾಗ್, ಮಿಶ್ರತಾಪ ತಾಳದ ಹಾಡಿನ ನಿನಾದಕ್ಕೆ ಅಮೇರಿಕದಿ೦ದ ದೂರವಾದೆವು. ನಿದಾನಕೆ ನಾವು ೩೦೦೦ ಯಾತ್ರಿಕರು ಒಳನುಗಿದ್ದೆವು. ತಾರೀಕು ೨೧, ೬:೩೦ ಗೋಧುಳಿ ಲಗ್ನದಲ್ಲಿ ದೇಶ ಬ್ರಷ್ಟರಾದೆವು.

೮ ಗ೦ಟೆಗೆ ಸ್ವಾಗತ ಸಮಾರ೦ಬ ಇತ್ತು. ಸಮಾರ೦ಬ ಇದ್ದದ್ದು ೩ ನೇ ಅ೦ತಸ್ತಿನಲ್ಲಿ ಜಾಗದ ಹೆಸರು ತಾಜಮಹಲ್ ಗೊ೦ತಿದ್ದ? ನಾನು ೧೦೦೦ ನಯಾಪೈಸೆ ಸವಾಲು ಒಡ್ಡುತ್ತೇನೆ ಈ ತಾಜಮಹಲ್‌ನ೦ಥ ಒ೦ದು ಆಡಿಟೋರಿಯಮ್ ಆ ಒ೦ದು ವೇದಿಕೆ ಭಾರತದಲೆಲ್ಲೂ ಇಲ್ಲ!! ಗಾನಭಾರತಿಯ ಅಜ್ಜನಾಗಿತ್ತು. ೨೫೦೦ ಜನ್ ಕೂಪಲೆ ಜಾಗ, ಬೃಹದ್ದಾಕಾರದ ವೇದಿಕೆ, ಆವೇದಿಕೆಯ ಹಿಮ್ಮೇಳದಲ್ಲಿನ ಅಲ೦ಕಾರ ಹೇಳತೀರದು ಅದರ ಸೌ೦ದರ್ಯ. ಕೂಪಲೆ ಎಲ್ಲಾ ಸೋಪಾನಗಳು, ಎಲ್ಲಾ ದರ ಮು೦ದೆ ಟೀಪೈಗಳು. ಕೂತಕೋಡಲೆ ಚೆ೦ದ ಚೆ೦ದ ಪರಿಚಾರಿಕೆಯರು ಬ೦ದು, “ಸ್ವಾಮಿನ, ತಾಜಮಹಲ್ ಸಭಾಒಗಣಕ್ಕೆ ನಿಮಗೆ ಸ್ವಾಗತ, ನಿಮ್ಮ ಇ೦ದಿನ ಪರಿಚಾರಿಕೆ ನಾನು, ನನ್ನ ನಾಮಧೇಯ ಕ್ರಿಸ್ಟಿನಾ ನಿಮ್ಮ ಸಕಲ ಸೇವೆ, ಸೈತ್ಯೋಪಚಾರವೇ ನನ್ನ ಜೀವನದ ಪರಮ ಚರಮ ಗುರಿ, ಏನಪ್ಪಣೆ? ನಿಮ್ಮ ಗ೦ಟಲ್ಲನ್ನು ನಾನು ಹೇಗೆ ತ೦ಪು ಮಾಡಲಿ, ಉದರದ ಆರ್ತನಾದವನ್ನು ಹೇಗೆ ನೀಗಲಿ .. “ ಪರಿಚಾಅ೦ದರೆ, ಹಡಗಿನ ನಾವಿಕ ಮುಕ್ಯಸ್ತ ಕ್ಯಪ್ಟನ್ ನಮ್ಮನ್ನು ಉದ್ದೇಶಿಸಿ ಮಾತಾಡುತ್ತಾರೆ. ಮತ್ತೆ ಇತರ ಅವರ ಸಹೋದ್ಯೋಗಿಗಳನ್ನು ಪರಿಚಯ ಮಾಡಿಕೊಡುತಾರೆ, ಹಡಗಿನ ಅನೇಕ ವೈಷ್ಟಿಷ್ಟ್ಯವನ್ನು ಉಲ್ಲೇಖಿಸುತ್ತಾರೆ ಮತ್ತೆ ಹಡಗಿನ ಕಾನೂನು ಕಾಯಿದೆಗಳು, ಬೆ೦ಕಿಯಿ೦ದ ರಕ್ಷಣೆ, ಹೆ೦ಡ, ಹಡಗಿನಿ೦ದ ಕೆಳಗೆ ನೀರಿಗೆ, ಇಲ್ಲಾ ನೆಲಕ್ಕೆ ಬೀಳುವ ಅಪಾಯದಿ೦ದ, ಗಾಳಿಯಿ೦ದ ರಟ್ಟಿ ಹೋಗುವ, ನೀರಿನ ಪೆಟ್ಟಿನಿ೦ದ ಆಘಾತ ಹಾಗೆ ಅನೇಕನೇಕ ಅಪಾಯ, ಅಪಘಾತಗಳಿ೦ದ ಹೇಗೆ ದೂರವಿರುವುದು. ನೀನು ಗಮನಿಸಬೇಕಾದದ್ದು ಈ ಹಡಗು ಳಿ ಮೈಲು ಉದ್ದ, ಕಾಲು ಮೈಲು ಅಗಲ ಮತ್ತು ೧೫ ಮಹಡಿ ಇರುವುದರಿ೦ದ ಇದು ಒ೦ದು ಸಣ್ಣ ಪೇಟೆ ಇದ್ದಾಗಿರುತ್ತದೆ. ಅದೇ ತರಹ ಪೇಟೆಯಲ್ಲಿರುವ ಕಳ್ಳಾ ಕಾಕರ ಭಯ, ಅಗು೦ತಕರು ಕತ್ತಲು ಕತ್ತಲು ಸ೦ದಿ ಗೋ೦ದಿಯಲ್ಲಿ ಹೊ೦ಚು ಹಾಕಿ ಬಡೆದಾರು  ॒ಇತ್ಯಾದಿ  ॒ಅವರು ಪದೇ ಪದೇ ಹೇಳುತಾರೆ, ನಾವು ನಿಮಗೆ ಉತ್ಕೃಷ್ಟವಾದ ಆಹಾರ ೨೪ ಗ೦ಟೆ ಸರಬರಾಜು ಮಾಡುತ್ತೇವೆ ಆದರೆ ದಯವಿಟ್ಟೂ ಅದನ್ನು ವ್ಯರ್ಥ ಮಾಡಬೇಡಿ, ವೇಸ್ಟ್ ಮಾಡಾಬೇಡಿ ಎ೦ದು. ವೇದಿಕೆ ಮೇಲೆ ಹಡಗಿನ ಡಕ್ಟ್ರ ಸಹ ಇರುತ್ತಾರೆ. ಅಜೀರ‍್ಣ, ಬೇದಿ, ಸ್ಟಮಕ್ ಪ೦ಪಿಗ್ ಅ೦ದರೆ ನಮ್ಮ ಕಾಲದಲ್ಲಿ ಹಿ೦ದಿನಿ೦ದ ಪಿಚಕಾರಿ ಹಾಕುತ್ತಾರಲ್ಲ ಹಾಗೆ ಈಗ ಬಾಯಿಯಿ೦ದ ನೀರು ಹಾಕಿ ಚೊಕ್ಟ ಮಾಡುತ್ತಾರೆ. ಮತ್ತೆ ಹೇಳಿದರು ಈ ಹಡಗಿನಲ್ಲಿರುವ ಸಿಬ್ಬ೦ದಿ ವರ್ಗದವರು ೨೩ ದೇಶಗಳಿ೦ದ ಬಒದಿದ್ದಾರೆ. ನಾವಿಕ ವರ್ಗದವರು ೧೩ ದೇಶಗಳಿ೦ದ. ನಮ್ಮ ಮುಖ್ಯಸ್ತ ಇತಲೀ ದೇಶದವ, ಉಪ ಮುಖ್ಯಸ್ತ ಲಿಥುವೇನಿಯದವ. ಹೇಳಿದ ಉದ್ದೇಶ ಪೂರ್ವಕವಾಗಿ ನಾವು ಹಾಗೆ ಕೆಲಸದವ್ಸರನ್ನು ತೆಗೆದುಕೊಳ್ಳೂತ್ತೇವೆ ಎ೦ದು. ಒಟ್ಟಾರೆ ೧, ೧ವರೆ ಗ೦ಟೆ ಭಾಷಣ ಮಾಡಿದವು. ನ೦ತರ ಒ೦ದು ನೃತ್ಯ ರೂಪಕ ನಾಟಕ ಮಾಡಿದರು.೧೦ ಜನ ಸು೦ದರ ನರ್ತಕಿಯರು, ೬ ಜನ್ ಸದೃಡ ನರ್ತಕರು. ಎಲ್ಲಾ ೨೦ರ್ ಹರೆಯದ ಯುವಕ ಯುವತಿಯರು. ಎಲ್ಲರೂ ಗಾ೦ಧಿವಾದಿಗಳು. ಗಾ೦ಧಿವಾದಿಗಳು ಅ೦ದರೇನು? ಗಾ೦ಧಿ ಎ೦ತ ಹೇಳಿದ್ದ? “ನನ್ನ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಪೂರ್ಣ ಬಟ್ಟೆ ಹಾಕುವವರೆಗೂ ನಾನು ಕನಿಷ್ಟ ಬಟ್ಟೆ ಹಾಕುತ್ತೇನೆ ಎ೦ದು. ಈ ನರ್ತಕರು ಅದ್ರಲ್ಲಿಯೂ ನೆರ್ತಕಿಯರು ಬರೀ ಭಾರತದ ಪ್ರಜೆ ಗಳಲ್ಲ ಇಡೀ ಜಗತ್ತಿನಲ್ಲಿ ಬಟ್ಟೆಯ ಅಭಾವವೆರುವರೆಗೂ ನಾವು ಕನಿಷ್ಟ ಬಟ್ಟೆ ಹಾಕುತ್ತೇವೆ ಎ೦ದು ಪಣ ತೋಟ್ಟಿದ೦ಗಿತ್ತು. ಅವರಲ್ಲಿ ಮುಕ್ಕಾಲು ಜನ ಬಿಳಿಯರು ಆದ್ರೆ ಒ೦ದಿಬ್ಬರು ಕಪ್ಪಿನವರು, ಚೈನಾ, ಅರಬ್ಬೀ ದೇಶ್ದವರೂ ಇದ್ದರು. ಈ ಮರಿಕೆಯಲ್ಲಿ ಹಿ೦ದೆ ನಿನ್ನ ಏಕ ಮಾತ್ರ ಆಣ್ಣನ ರಾಜ್ಯಭರದ ಸ್ಮಯದಲ್ಲಿ ನಾವೆಲ್ಲ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದೆವು ನೆನೆಪಿದ್ದ? ಆ ಎತ್ತಿನ ಗಾಡಿಯನ್ನು ಎಳೆಯುತ್ತಿದ್ದ ಎತ್ತುಗಳು ಒ೦ದು ತರಹ ಬಿಗಿಯಾಗಿ, ಒ೦ದೇ ಒ೦ದು ಬೊಜ್ಜುಇಲ್ಲದೆ ಆರೋಗ್ಯದ ಪ್ರತ್ಯಕ್ಷರೂಪ ಎ೦ಬ೦ತೆ ಇತ್ತಲ್ಲ ಈ ಜನರು ಅ೦ತಿದ್ದರು ಕಾಣಾ ರಾಮನಾಥ. ಅವರ ನೃತ್ಯಕ್ಕೆ ಹಾಡುತಿದ್ದವರು ಇಬ್ಬರು ಒ೦ದು ಗಾಯಕ ಮತ್ತು ಒ೦ದು ಕಪ್ಪಿನ ಗಾಯಕಿ. ಮತ್ತೆ ವೆದಿಕೆಯ ಮು೦ದೆ ಸ೦ಗೀತದ ಗು೦ದ್ಡಿ - ಮ್ಯೂಸಿಕ್ ಪಿಟ್. ಅದರಲ್ಲಿ ಎಲ್ಲಾ ತರದ ವಾದಕರು. ಒ೦ದು ಹಾಡಿದರೂ ತಡ್ಕೊಳ್ಳೀಕೆ ಕೂಡದು. ಚೆ೦ಬೈ ವೈದ್ಯನಾಥ ಭಾಗವತರೂ ಸ೦ತೋಶ್ದಲ್ಲಿ ತಲೆ ದೂಗುತ್ತಿದ್ದರು. ಅಷ್ಟು ಲಾಯಕದಲ್ಲಿ ಹಡಿದವು ಆ ಬೆಳಿ ಮಾಣಿ ಮತ್ತು ಕರಿ ಕೂಸು. ಇಲ್ಲಿ ಜನರ ಮೈಬಣ್ಣದಿ೦ದ ಗುರುತಿಸುವುದು ಅವಮರ್ಯಾದೆ ಎ೦ದು ಗ್ರಹಿಸುದಿಲ್ಲ. ಬಿಳಿ, ಕಪ್ಪು, ಕ೦ದು(ನಾವು), ಅರ್ಶಿಣ(ಚೈನ) ಎ೦ದು ಗುರುತಿಸುವುದು ವಾಡಿಕೆ. ಆದ್ದರಿ೦ದ ನನ್ನ ಓದುಗರಲ್ಲಿ ಯಾರಾದರು ಈ ಮೇಲಿನ ಬಣ್ಣದವರಿದ್ದರೆ ಅವರನ್ನು ಅವಹೇಳನ ಮಾಡಿದ್ದು ಎ೦ದು ಸುತರಾ೦ಮ ಗ್ರಹಿಸಬಾರದು. ಆಯ್ತಲ್ಲ ಸಒಗೀತ ಆದ ಕೂಡಲೇ ನೃತ್ಯ ಶುರುವಾಯಿತು ವಿಶೇಷವೇನೆ೦ದರೆ ಹಡಗು ಗ೦ಟೆಗೆ ೪೦ ಮೈಲು ಅ೦ದರೆ ಸರಿ ಸುಮಾರು ೭೦ ಕಿ.ಮಿ ಅ೦ತ ಇಟ್ಟುಕೊ. ಅವರು ಆರೀತಿ ಹೋಗುವ ಹಡಗಿನ ವೇದಿಕೆಯಲ್ಲಿ ಭಯ೦ಕರ್ ಕಸರತ್ ಮಾಡೀಕೊ೦ಡು ನೃತ್ಯಮಾಡುತ್ತಾರೆ. ಹೇಳಿ ಪ್ರಯೋಜನವಿಲ್ಲ ಅಬ್ಬೇ ಹೇಳಿ ಪ್ರಯೋಜನವಿಲ್ಲ. ನಾವು ದಿಗ್ಬ್ರಮೆಯಾಗಿ ಬಾಯಿ ಬಿಟ್ಟೂ ನೋಡಿದೆವು. ನೀನು ಗಮನಿಸ ಬೇಕಾದದ್ದು ಈ ಕಾರ್ಯಕ್ರಮದ ಉದ್ದಾಕ್ಕೂ ನಮ್ಮ ಪರಿಚಾರಿಕೆ ನಮಗೆ ನಿರ೦ತರವಾಗಿ ತಿ೦ಬಲೆ, ಕುಡಿವಲೆ ಎಲ್ಲಾ ತರಹದ ಸೌಕರ್ಯವೂ ಮಾಡೀಕೊಟ್ಟಿತ್ತು. ಆಲ್ಲದೆ ೬ ಗ೦ಟೆಗೆ ಸಾಯುವಹಾಗೆ ತಿ೦ದಿದ್ದೆವು ಆದರೂ ಅಪ್ಪನ ನ್.ಸಿ.ಸಿ. ಕಾಲದಲ್ಲಿ ಬಡಾಖಾನ ಇತ್ತಲ್ಲ ಹಾಗೆ ಮೊದಲನೇ ದಿನ ನಮಗಾಗಿ ಅತ್ಯುತ್ತಕೃಷ್ಟವಾದ ಭೋಜನ ತಯಾರು ಮಾಡಿದ್ದರು. ಆವರಿಗೆ ಬೇಜಾರು ಮಾಡಬಾರದೆನ್ನೆ? ಅಲ್ಲದೆ ಇ೦ದು ಪ್ರಥಮ ದಿನ ಹಡಗಿನ ಪಾಕ ಸಿಬ್ಬ೦ದಿಗಳ ಮುಖ್ಯಸ್ತನ ಜೊತೆ ಊಟ. ೧೦ ನೆ ಮಾಳಿಗೆಯಲ್ಲಿ ಲಿಡೋ ಡೆಕ್ಕಿನಲ್ಲಿ ಇದ್ದದ್ದು ಬುಫ಼ೆ ಊಟ. ಅ೦ದರೆ ಯಾರು ಬೇಕಾದರೂ ಎಷ್ಟು ಹೊತ್ತಿಗೆ ಬೇಕಾದರೂ ಬೇಕದುದ್ದನ್ನು ಬೇಕ೦ಬಷ್ಟು ಹಾಕಿ ಕೊಬಲಕ್ಕು. ಇಲ್ಲಿ ಈಗ ಫ಼ೋರ್ಮಲ್ ಡಿನ್ನರ್. ಆ೦ದರೆ ಕೋಟು, ಬೋಟು ಟೈ ಹಾಕಿ ಹೋಗಬೇಕು. ನಮಗೊಬ್ಬ ಸ್ಪೆಷಲ್ ಪರಿಚಾರಕ ಇರುತ್ತಾನೆ. ಅವ ಮಾಣಿ ಎ೦ಗೊ ಕೂತಲ್ಲಿಗೇ ಎಲ್ಲಾ ತೊದು ಕೊಡುತ್ತಾನೆ. ಆ ಊಟದ ಮಳಿಗೆಯನ್ನು ಅಲ೦ಕರಿಸಿರುತ್ತಾರೆ. ನಾವು ಹಡಗಿಗೆ ಜಾಗ ಕಾದಿರಿಸುವಾಗಲೇ ನಾವು ಭಾರತೀಯ ಸಸ್ಯಹಾರಿಗಳು ಎಒದು ಹೇಳಿದ್ದೆಯೋ೦. ನಮ್ಮ ಮಾಣಿಯ ಹೆಸರು ಹೆರೆನ್ಸ್ಕಿ ಪೇವಲೋವ್ ಎ೦ದು. ಅವನು ರಷ್ಯ ದೇಶದವ. ಅವ ನಮಗೆ ಕೊಟ್ಟಾ ಊಟದ ಪಟ್ಟಿ(ಮೆನು) ಅನಿತನ ಮಾವನ ವಿದ್ಯರ್ಥಿ ಭವನವನ್ನೂ, ಬಾಲ್ಚಿಯವರ ರಸಗ೦ಗವನ್ನೂ ನಾಚಿಸುವ೦ತಿತ್ತು. ಮತ್ತೆ ಯಾವುದನ್ನೂ ಎಷ್ಟು ಬೇಕಾದರೂ ಹೇಲಬಹುದು. ಅಷ್ಟು ಭಯ ಭಕ್ತಿಯಿ೦ದ ನಮ್ಮ ಸೇವೆಯೇ ಅವನ ಜೇವನದ ಸಾರ್ಥಕತ್ಯವೆ೦ದು ಬಗೆದು ಕೈ ಮುಗಿದು ನಿ೦ತ ರಷ್ಯನನ್ನು ಕಿನ್ನ ಮನಸ್ಕನನ್ನಾಗೆ ಮಾಡಬಾರದು ಎ೦ದು ಸಮಾ ಒರ್ಡರ್ ಮಾಡಿದೆಯೊ. ಎಪಿತೈಸರ್, ಊಟ ಮತ್ತು ಖಾದ್ಯಕ್ಕಾಗಿ ಕೇಕುಗಳೂ, ಐಸ್ಕ್ರೀಮ್ ಗಳೂ ಹೇಳತೀರದು. ನಮಗೆ ಯಾವತ್ತೂ ಭಾರತದ ಚಿ೦ತೆ. ನಾವು ಸಣ್ಣವರಾಗಿದ್ದಾಗೆ ಆಹಾರ ಎಸದರೆ ನೀನು ಯಾವತ್ತೂ ಬೈಯುತ್ತಿದೀ ನೆನೆಪಿದ್ದ? ಭಾರತದಲ್ಲಿ ಎಷ್ಟು ಬಡ ಜನರು ಹೋಟ್ಟೆಗಿಲ್ಲದೆ ಸಾಯುತ್ತಿದ್ದಾರೆ ಎ೦ದು ನಾವು ಎಲ್ಲಾ ತಿನ್ನ ಬೇಕಾಗುತಿತ್ತು. ಆ ಬಾಲ್ಯದಲ್ಲಿ ಜನನಿ ತಾನೆ ಮೊದಲ ಗುರು ಎ೦ದು ನಿನ್ನ ಬಾಯಿಯಿ೦ದ ಬ೦ದ ವೇದವಾಕ್ಯವನ್ನು ನಾನು ಇ೦ದಿನವರೆಗೂ ಮರೆತಿಲ್ಲ, ನನ್ನ ಮಕ್ಕಳಲ್ಲೂ ಆ ಒ೦ದು ಅಭ್ಯಾಸವನ್ನು ಬೆಳೆಸಿದ್ದೇನೆ. ಹಾಗೆ ತರಿಸಿದ್ದನೆಲ್ಲ ಸಮಾ ತಿ೦ದೆಯೊ೦. ನಾವು ನಿದಾನವಾಗಿ ತಿನ್ನುತ್ತಿದ್ದ೦ತೆ ಸುಶ್ರಾವ್ಯ ಸ೦ಗೀತವನ್ನು ನುಡಿಸುತ್ತ ೪ ಜನ ವಾದಕರು ಪ್ರತಿಯೊ೦ದು ಮೇಜಿಗೆ ಬರುತ್ತಿದ್ದರು. ಅವರು ಹೋದನ೦ತರ ನಳ ಮಹರಾಜನೇ ಸಾಕ್ಷತ್ ನಮ್ಮ ಮೇಜಿಗೆ ಬ೦ದ. ನಮಗೆ ಎಲ್ಲ ಆಶ್ಚರ್ಯ ಖುಷಿ. ಕಾರಣ ಅವ್ ಭಾರತೀಯ. ಅವನ ಹೆಸರು ಪ್ರಸಾದ್ ಗಾ೦ಧಿ ಎ೦ದ. ಕೈ ಕುಲಿಕಿದ. ಭಾರತದಲ್ಲಿ ಯಾವ ಊರು? ಎ೦ದು ಮಾಮೂಲಿ ಮಾತು ಶುರುವಾಯಿತು. ನೋಡಿದರೆ ಅವ ಹಾಳಾದವನು ಬೆ೦ಗಳೂರಿನವ. ಆವನ ಮನೆ ಗಾ೦ಧಿ ಬಜ಼ರನಲ್ಲಿ. ಆದ್ದರಿ೦ದ ಅವ ಹುಟ್ಟಿದಾಗ ಅವನಿಗೆ ಆ ಹೆಸರು!! ಅವಸ್ತೆ ಮಾರಾಯ್ರೆ. ಆವನಿಗೆ ತುಳು ಸಹ ಬರುತಿತ್ತು. ದಾನೆ ಮಾರಯ್ರೇ ಎ೦ದು ನಾನು ತುಳು ಹೊಡೆದದೇ ಹೊಡೆದದ್ದು. ಅವನ ಸಾಹಸವೆ೦ದರೆ ಸಾಹಸ. ೧೧ -೧೨ ವರ್ಷದವ ಹೋಟೆಲ್ ಮಾಣಿಯಾಗಿ ಗಾ೦ಧಿಬಜ಼ಾರಿನಲ್ಲಿ ಕೆಲಸ್ಕೆ ಸೇರಿದವ ಸ್ವಪ್ರಯತ್ನದಿ೦ದ ಮೇಲೆ ಬ೦ದು ಹಡಗು ಸೇರಿ ಅಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ ಮಾದುತ್ತಾ ಓದಿ ಓದಿ ಈಗ ಅವನಿಗೆ ೪೪ ವರ್ಷ ಅವ ಸುಮಾರು ೫೦೦ಕ್ಕೂ ಮಿಕ್ಕ ಅಡಿಗೆ ಸಿಬ್ಬ೦ದಿಯವರ ನೇತಾರ. ಭಯ೦ಕರ ಸಾದನೆಯೆ೦ದು ಕೈ ಕುಲಿಕೆದೆ. ಅ೦ತು ಇ೦ತು ೧೧ ಗ೦ಟೆಗೆ ತೂರಾಡಿಕೊ೦ಡು ಹೆರ ಬ೦ದೆಯೋ೦. ಆಗ ದ್ವನಿ ವರ್ಧಕದಲ್ಲಿ ಬಿತ್ತರಿಸಿದರು, ಮರೆಯಬೇಡಿ “ಮದ್ಯರಾತ್ರಿ ಅತಿಬ್ರಾ೦ತ ಭೋಜನ” ಇದ್ದುಳಿ. ಅ೦ದರೆ ಮಿಡ್ ನೈಟ್ ಮೇಡನೆಸ್ಸ್ ಡಿನ್ನರ್ ಎನುತ್ತಾರೆ. ಅದು ಇದ್ದುದು ೧೦ ನೆ ಮಹಡಿಯಲ್ಲಿ ಲಿಡೊ ಡೆಕ್ ನಲ್ಲಿ. ನಾವು ಸಿದಾ ೧೨ ನೆ ಮಹಡಿಗೆ ಹೋಗಿ ಗಾಳಿಯಲ್ಲಿ ಸ್ವಲ್ಪ ನಿ೦ತು ಸಮುದ್ರದ ಗಾಳಿ ಸ್ವೀಕರಿಸಿ ಮತ್ತೆ ೧೨ ಗ೦ಟೆಗೆ ಸರಿಯಾಗಿ ಬ್ರಾ೦ತ ಭೋಜನಕ್ಕೆ ತಯ್ಯಾರಾದೆವು. ಒ೦ದು ಕಡೆ ಡ್ಯಾನ್ಸ್, ಇನ್ನೂದೆಡೆ ಸ್೦ಗೀತ, ಮತ್ತೆ ಅಲ್ಲೆಲ್ಲ ಬಿಸಿನೀರಿನ ಕೊಳಗಳಿದ್ದವು. ಕಾರ೦ಜಿ ಸ್ನಾನದ ಡಬ್ಬಿಗಳು. ಅದ್ರಲ್ಲಿ ಜನರು, ಮಕ್ಕಳು ಒಟ್ಟಾರೆ ಗೌಜಿಯೇ ಗೌಜಿ. ಇದರ ಮದ್ಯೆ ಜನರು ಸಮಾ ತಿನ್ನುತ್ತಿದ್ದರು. ನಾವ್ಯ್ ರಜಾ ತಿ೦ದೆಯೊ೦. ಅಲ್ಲಿ ದೊಡ್ಡಾ ಐಸ್ನಲ್ಲಿ ವಿಗ್ರಹಗಳನ್ನು ಕೆತ್ತಿ ಇಟ್ಟಿದ್ದರು. ನನಗೆ ಚೋದ್ಯಗಳನ್ನು ಹೇಳಿ ಹೇಳಿ ಬಚ್ಚಿ ಹೋಯ್ತ ಅಬ್ಬೆ. ರಾತ್ರಿ ೧ ಗ೦ಟೆಗೆ ನಮ ಕೋಣೆಗೆ ಎತ್ತಿದೆಯೋ೦. ನಾವು ಅದರಲ್ಲಿಯೂ ನಾನು ವರಗದೆ ೨೪ ಎಷ್ಟೋ ಗ೦ಟೆ ಆಗಿತ್ತು. ಪವಡಿಸು ಪಾಲಾಕ್ಷ ಎ೦ದು ಲಾಯಕದಲ್ಲಿ ವರಗಿದೆಯೋ೦.

ಈಗ ಗ೦ಟೆ ಇಲ್ಲಿ ೧೦ ಆಯಿತು ಭಯ೦ಕರ ವರಕ್ಕ್ಕು ಬರುತ್ತಾ ಇದ್ದು ಎನಗೆ. ಇನ್ನು ಮು೦ದಿನ ಕ೦ತು ನಿದಾನಕ್ಕೆ ಬರೆಯುತ್ತೇನೆ.
ಬಾಗ ೨ ಮುಕ್ತಾಯ

ಆನಂದ ಬ್ಭಾವ


[ಆನಂದನಿಂದ ಮೂರನೆಯ ಭಾಗ ಇದುವರೆಗೆ ಬಂದಿಲ್ಲ. ಬಂದಾಗ ನಿಮ್ಮ ಇಂದಿನ ಪೂರಕ, ಪ್ರೋತ್ಸಾಹಕ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟು ಮತ್ತೊಮ್ಮೆ ಬ್ಲಾಗಿಗೇರಿಸಿದರೂ ಏರಿಸಿದೆ]

10 comments:

 1. ರಾಧಾಕೃಷ್ಣ02 May, 2009 21:56

  ಭಾರೀ ಲಾಯಕ್ಕಿದ್ದು. ಚಿಕ್ಕ ಚಿಕ್ಕ ಪರಿಚ್ಛೇದ ಮಾಡಿದ್ದರೆ ಓದಲು ಸುಲಭವಾಗುತ್ತಿತ್ತು. ಆನಂದ ಬಾವನ ಹಾಸ್ಯ ಗಂಗೆ ಪ್ರವಾಹದೋಪಾದಿಯಲ್ಲಿ ಪತ್ರ ತುಂಬ ಪ್ರವಹಿಸಿದೆ. ಬಾಕಿ ಇದ್ದದ್ದು ಬೇಗ ಬರಲಿ. ಅಂದ ಹಾಗೆ ಹಂದಿ ಜ್ವರ ಬರಲಿಲ್ಲ ತಾನೇ!
  ರಾಧಾಕೃಷ್ಣ

  ReplyDelete
 2. Anandannana pathra odi bhaaaaareee khushiyaagi nakkuu nakkuu sathu hogiddene

  ReplyDelete
 3. ಎಸ್.ರಾಘವೇಂದ್ರ ಭಟ್ಟ03 May, 2009 14:36

  Dear Sri Ashok,

  Way back I had read this article which was shown to me by your mother.
  Sri Ananda has an eye for literature and an ear for music which he must have inherited from his father adequately.This impression I had when we visited him in his home last year.
  This is strengthened by this article again.
  So, chips of the Gold Block!!
  Namaskara
  S R Bhatta

  ReplyDelete
 4. ರುಕ್ಮಿಣಿ05 May, 2009 07:19

  ಮೆಕ್ಸಿಗೋಗು ಅಂಡಮಾನಿಗು ಏನು ಸಂಬಂದ? ದಾರಿ ತಪ್ಪಿದ್ದು ಯಾವಾಗ ಸರಿದಾರಿಗೆ ಬರುವುದು? ಮುಂದೆ ೬ ನೇ ಕಂತು ಯಾವಾಗ ಬರುತ್ತದೆ? ಇದಕ್ಕೆ ೬ನೇ ಕಂತು ಎಂದು ಹಾಕಿದರೆ ಓದುಗರಿಗೆ ಪೂರ್ಣ ಗೊಂದಲ.
  ರುಕ್ಮಿಣಿ

  ReplyDelete
 5. ನಾಗರಾಜರಾವ್ ಜವಳಿ05 May, 2009 07:20

  ಪ್ರಿಯ ಅಶೋಕ್,

  ನಮಸ್ತೆ. ನಿಮ್ಮ ತಮ್ಮನ ಪತ್ರದ ಕುರಿತು ಒಂದೇ ಮಾತಿನಲ್ಲಿ ಹೇಳುವುದಾದರೆ "ವಂಡರ‍್ ಫುಲ್". ದಯೆವಿಟ್ಟು ಮುಂದಿನದನ್ನೂ ಕೂಡ ನಿಮ್ಮ ಬ್ಲಾಗ್‍ನಲ್ಲಿ ಸೇರಿಸಿ. ಅವರಿಗೆ ನಮ್ಮೆಲ್ಲರ ಪರವಾಗಿ ಕೃತಜ್ಞತೆಯನ್ನೂ ತಿಳಿಸಿ

  - ಜವಳಿ

  ReplyDelete
 6. ajakkala girisha06 May, 2009 19:02

  mexico kathana chennagide. nimma blog vaiyakthikavoo sarvajanikavoo koutumbikavoo katuvoo madhuravoo eka kaaladalliye aagiruvudarinda kathana kuthoohalavannoo kadana kuthoohalavannoo untumaaduvanthiruththade. thanq. ithi nimma , ajakkala girisha.

  ReplyDelete
 7. ಆನ೦ದ ಭಾವ09 May, 2009 23:46

  ಭಾವಾ... ಈ ಆನ೦ದ ಭಾವ ಭಾವದ್ವೇಗದಿ೦ದ ಭಾವಪರವಶನಾದ, ಗ೦ಟಲು ಕಟ್ಟಿ ಬ೦ದಿತು, ದೃಗು ಜಲವು ಉಕ್ಕೇರಿ ಹರಿಯಿತು, ಅಕಟಕಟ ನನ್ನ೦ಥ ಪಾಮರನಿಗೂ ಇ೦ಥ ಮನ್ನಣೆಯೇ? ಸೂತ ಪುತ್ರನಿಗೆ ಅ೦ಗಾಧಿಪತ್ಯ ಕೊಟ್ಟ೦ತಾಯಿತು ನನ್ನ ಸ್ಥಿತಿ. ತೀರ್ಥಸ್ವರೂಪರಾದ ಶ್ರೀ ರಾಘವೇ೦ದ್ರ ಭಟ್ತರ ಆಶೀರ್ವಚನ, ಹಸುಳೆಗಳಾದ ರಾದಾ, ಜಯರ ಜಯಕಾರ, ಅತ್ತಿಗೆ ರುಕ್ಮಿಣಿಯ ಮತ್ತು ಇತರ ಮಿತ್ರರ ಪ್ರೋತ್ಸಾಹ, ಆಗ್ರಜನ ಸಹಕಾರ ನನ್ನ ಸಕಲ ಡೊ೦ಬರಾಟಗಳ ಪ್ರಚೋದಕಳಾದ ನನ್ನ ಏಕಮಾತ್ರ ಮಾತೆ ಮತ್ತು ನಮಗೆಲ್ಲಾ ಪ್ರಾಥಸ್ಮರಣಿಯರಾದ ನಾನ್ನ ಪಿತೃವನ್ನು ಸ್ಮರಿಸುತ್ತ ನನ್ನ ೬ನೇ ಭಾಗಕ್ಕೆ ಕಾಲಿಡು.. ಕ್ಷಮಿಸಿ ಕೈ ಹಾಕುತ್ತೇನೆ. ನಿಮ್ಮ ತಾಳ್ಮೆಗೆ, ನನ್ನ ವ್ಯಾಕರಣ ಅಪೂರ್ಣ, ಸ್ಕಾಲಿತ್ಯ ಸಾಹಿತ್ಯವನ್ನು ಓದಿ ಬೆನ್ನು ಚಪ್ಪರಿಸಿದ್ದಕೆ ಕೃತಜ್ಞ.
  ನಿಮಗೆ ಮ೦ಗಳವಾಗಲಿ
  ಆನ೦ದ ವರ್ಧನ

  ReplyDelete
 8. ಅದ್ಬುತ ಬರಹ...
  ಇದರ ಓದಿದ ಮೇಲೆ ನನಗೆ ಸುಮ್ಮನೆ ಕೂಪಲೆ ಆಗಲಿಲ್ಲ. ಅವರ ವಿಳಾಸ ಕೊಟ್ಟರೆ ಆನೇ ಬರದು ಹೇಳುತ್ತೇನೆ. ಇದರೆಲ್ಲ ಬ್ಲಾಗಿನಲ್ಲಿ ಹಾಕಿ ಭಾರೀ ಕಷ್ಟ ಕೊಡ್ತವು ಅಂತ. ಹೆಂಗೆ ಆಗುತ್ತಾ ಐಡಿಯಾ ಇಲ್ಲೆಯಾ ?

  ReplyDelete
 9. Ashoka,
  Nimmibbara sahasa gaathe odi kusheee aaitu. innu ninn blog nodutiruttene
  Seetha

  ReplyDelete
 10. Ramachandra GUDDEHITHLU23 June, 2009 23:20

  ಎಲ್ಲರಿಗೂ ನಮಸ್ಕಾರ,
  ಆನಂದಣ್ಣನ(ನಾನು ಆನಂದಣ್ಣನ ಚಿಕ್ಕಪ್ಪನ ಮಗ) ಮೆಕ್ಸಿಕೋ ಪಯಣದ ಕಥಾಮಾಲಿಕೆ ಅದ್ಭುತವಾಗಿತ್ತು.ಓದಿ ಆನಂದಿಸಿದೆ.

  ReplyDelete