07 December 2008

ಬಿಳಿಹುಲಿಗೊಂದು ಬಾಲ


ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು ನನ್ನ ಮೇಜಿನ ಅಂಚುಗಟ್ಟಿ ನಿಂತ ಹಾಗೇ ಮೇಜಿನ ಕನ್ನಡಿಯಡಿಯಲ್ಲಿ ನಾನಿಟ್ಟಿದ್ದ ಎರಡು ವ್ಯಂಗ್ಯ ಚಿತ್ರಗಳನ್ನು ಗಮನಿಸಿದರು. ಮೊದಲು ಟೈಮ್ಸ್ ಆಫ್ ಇಂಡಿಯಾದ್ದು, ಕಲಾವಿದ - ಪೊನ್ನಪ್ಪ. ಅರವಿಂದ ಅಡಿಗರ ಬೂಕರ್ ವಿಜೇತ ಕೃತಿ ವೈಟ್ ಟೈಗರ್ ಯಾವುದೋ ಪುಸ್ತಕದಂಗಡಿಯ ಪ್ರದರ್ಶನ ಕಪಾಟಿನಲ್ಲಿರುವುದನ್ನು ನೋಡಿ ದಾರಿಹೋಕರು ಆಡುವ ಮಾತು “ಅದು ಭಾರತದ ಕೊಳಕುತನ, ಅವ್ಯವಹಾರಗಳ ಬಗ್ಗೆ ಆಡಿಕೊಳ್ಳುತ್ತದಂತೆ. ಕಳ್ಳಮಾಲು ಬರಲಿ, ಕೊಳ್ಳಬೇಕು.” ಟೀಚರಮ್ಮರ ಮುಖದಲ್ಲಿ ಅರ್ಥ ಹೊಳೆದ ಮಿಂಚು ಬರಲಿಲ್ಲ.
ದೃಷ್ಟಿ ಇನ್ನೊಂದಕ್ಕೆ ಹೊರಳಿತು. ಅದು ಪ್ರಜಾವಾಣಿಯದ್ದು, ಕಲಾವಿದ - ಪಿ. ಮಹಮ್ಮದ್. ಪುಸ್ತಕ ಮಳಿಗೆಯ ಗಲ್ಲಾ ಹಿಂದಿರುವವನನ್ನು ಏಕಕಾಲಕ್ಕೆ ಒಬ್ಬ ತರುಣಿ ಮತ್ತೊಬ್ಬ ಮುದುಕ “ನನಗೊಂದು... ಅಡಿಗ ಕೊಡಿ” ಎಂದು ಕೇಳುತ್ತಿದ್ದಾರೆ. ಹುಡುಗಿಯ ಮಾತಿಗೆ “ಇಂಗ್ಲಿಷ್”, ಮುದುಕನ ಮಾತಿಗೆ “ಕನ್ನಡ” ಸೇರಿಕೊಂಡಿದ್ದದ್ದು ಟೀಚರಮ್ಮರಿಗೆ ಕುತೂಹಲ ಮೂಡಿಸಿತು. ಹಿರಿಯಾಕೆ, ಹೆಸರು ಅಲ್ಪಜ್ಞಾನಿ ಎಂದಿಟ್ಟುಕೊಳ್ಳಿ “Hey! this, canara school old student aravind adigaaaaaa...” ಕಿರಿಯಾಕೆ, ಹೆಸರು ನಹಿಜ್ಞಾನಿ ಎಂದಿಟ್ಟುಕೊಳ್ಳಿ, ತನ್ನ ತಿಳಿವಿನಂಚು ವಿಸ್ತರಿಸಿದ ಕುಶಿಯಲ್ಲಿ “then what this kannadaaa adigaaa?” ಸೀನಿಯಾರಿಟಿ ಅಮೂಲ್ಯ, “translation man” ಅಲ್ಪಜ್ಞಾನಿ ಅಪ್ಪಣೆ ಕೊಟ್ಟಿತು! ಸೀಮಿತ ಜ್ಞಾನಿಯಾದ ನನಗೆ ಸಹಿಸಲಿಲ್ಲ, “(ಅಲ್ಲಾ, ಅದೂ) ಗೋಪಾಲಕೃಷ್ಣ ಅಡಿಗಾ (ಇರಬಹುದು ಅಥವಾ ಇಂಗ್ಲಿಷ್ ಕಾದಂಬರಿಕಾರನಾದರೂ ಕನ್ನಡಿಗನೆಂಬ ಅಭಿಮಾನದ ಮಾತಿರಬಹುದು)” ಎಂದು ಹೇಳಲಿದ್ದ ಅಷ್ಟನ್ನು ನುಂಗಿಕೊಂಡು ಹೆಸರನ್ನಷ್ಟೇ ಗೊಣಗಿದೆ. ಅಲ್ಪಜ್ಞಾನಿ ಸರ್ವಜ್ಞತ್ವ ಆರೋಪಿಸಿಕೊಂಡು, “ಓ! ನಮ್ಮ ಗೋಪಾಲಕೃಷ್ಣ ಅಡಿಗ translate ಮಾಡಿದ್ದಾರಾ!” ನಹಿಜ್ಞಾನಿ ಹಿಂದುಳಿಯಲಿಲ್ಲ “then easy nOO? We can also read nOO!” ಎಂದು ಮುಗಿಸಿದಾಗ ನನ್ನ ಬಿಲ್ಲಿನ ಅಕ್ಷರಗಳು ಚಿತ್ತಾಗಿ, ನೂರಂಕಿ ಕೂಡಿದರೂ ತಪ್ಪದ ಲೆಕ್ಕ ಎಡವಟ್ಟಾಗಿ ಹೋಯ್ತು.

8 comments:

 1. Subhaschandra Bose08 December, 2008 12:44

  chennagide!! modaleneyaddu(cartoon) ella pustakagaligu honduvantadu.
  pirated pustaka purchase maadidare tappenu endu prasnisuvavaru saaviraru.

  ReplyDelete
 2. 'ಬಿಳಿ ಹುಲಿಗೊಂದು ಬಾಲ' ಶೀರ್ಷಿಕೆಯೇ ಮಜವಾಗಿದೆ. ಬರಹಗಳಲ್ಲಿ ನಿಮ್ಮ "ಕುಟುಕು ಕಾರ್ಯಾಚರಣೆ' ಆನಂದದಾಯಕವಾಗಿದೆ ! -ಸುಧನ್ವಾ ದೇರಾಜೆ

  ReplyDelete
 3. I like this article and your sense of humour. Thanks.

  ReplyDelete
 4. B.S. Venktalakshmi09 February, 2009 13:58

  Hello Mr. Ashokavardhana,

  Nanna Nudi nimage kaikottidhe bidi.Naanu Nudi formatnalle chavadiyannu compose maduttheeni. Anekarige mail kalisuttheeni. Aadhare avaru nudiyannu download madikondirabeku ashte.

  Irali. Eega Aravind Adigara pustakavannu kurithu neevu barediruvudannu odhidhe. Tumba istavayithu. Haasyada hinneleyalle janara jaayamanavannu avaru pustakavondannu arthamadikolluva reethiyannu thorisuva ondhu baraha. Nimma lekhanada horage ninthu mathanaduvudhadhare, namma janarige thamma kolakannu horage haakuvavara bagge ondhu reethiya asadde athava gumaani irutthadhe. Aravinda Adigarantha lekhakaru kannadadalloo barabekagidhe. Prashasthi-puraskara, government librarigalige pustakavannu talluvudharalle aaskthi hondhiro namma lekhakaru innu meladharoo intha pustakavannu bareyalu prayathnisabeku.

  Naavella ondhu brashta haagu hadagetta vyvastheyalli badhukutthiddeevi. Illi raajakaranigala niluvu, nambikege anugunavaagi vathavarana srushtiyaagutthadhe. Aadhare nanna drishtiyalli tumbaa dhukkadha sangathiyendare karnatakadalli ee sarkara bandha mele, fanatics haagu jathivadhigalige ondhu reethiya kummakku pratyakshavagiyo, parokshavagiyo sikkidhe. Ella rajakeeya pakashagalu svarthadindha tumbirutthave annodhannu oppikondaroo torikegaagi illave votu gittisuva saluvagiyadharoo secularism annu kaapaduva sarkara namage bekagidhe.

  Andha haage kannada blogna create maadodhu hege? Blognalli kannadada aksharagalannu moodisuvudhu hege?/
  Chavadi bagge nimma abhimanakkagi krithagyatthe. Neevu Chavadi odhidhare, adhe chandha hanakke sama.

  ReplyDelete
 5. ಅಶೋಕವರ್ಧನ ಜಿ.ಎನ್10 February, 2009 07:53

  ಮಾನ್ಯರೇ
  ಒಳ್ಳೆಯ ಮಾತುಗಳಿಗೆ ಅನಂತ ವಂದನೆಗಳು.
  ಚಿತ್ರದುರ್ಗದಲ್ಲಿ ಸಮ್ಮೇಳನಾಧ್ಯಕ್ಷರು ಹೇಳಿದ ಮಾತು ನೆನಪಿಸಿಕೊಳ್ಳಿ, ಸಾಹಿತ್ಯದ ಸರಕಾರೀಕರಣದ (ಮಠೀಕರಣವೂ ಸೇರಿ) ವಿರುದ್ಧ ನಾನು ಹಲವು ವರ್ಷಗಳಿಂದ ಹಲವು ರೀತಿಗಳಲ್ಲಿ ಹೇಳಿದ ಮಾತು (ನನ್ನ `ಪುಸ್ತಕ ಮಾರಾಟ ಹೋರಾಟ' ಅವಶ್ಯ ಅಲ್ಲೇ ಎಲ್ಲಾದರೂ ಸಂಗ್ರಹಿಸಿ, ಓದಿನೋಡಿ. ನನ್ನಲ್ಲಿ ಪ್ರತಿಗಳು ಮುಗಿದಿವೆ) ನಿಮ್ಮ ಪತ್ರದಲ್ಲೂ ಕಾಣುತ್ತಿದೆ. ಬಹಳ ಹಿಂದೆಯೇ ವಿ.ಎನ್. ಲಕ್ಷ್ಮೀನಾರಾಯಣ ಟಂಕಿಸಿದ ನುಡಿಗಟ್ಟು `ಹೊಗಳು ಸಾಹಿತ್ಯ' ಒಂದೇ ಇಂದು ನಡೆಯುವ ನಾಣ್ಯ! ವಸ್ತುನಿಷ್ಠವೆಂಬಂತೆ ಕಾಣುವ ಅನೇಕಾನೇಕ ಬರಹಗಳು, ಮಾಧ್ಯಮಗಳೂ ಇಂದು ಅನ್ಯೋದ್ದೇಶ ಅಥವಾ ಮತೀಯ ಲಕ್ಷ್ಯಗಳನ್ನೇ ಇಟ್ಟುಕೊಂಡಿರುವುದು ಬಲು ಶೋಚನೀಯ. ಬ್ಲಾಗ್, ಚಾವಡಿಯಂಥ `ಅರೆಖಾಸಗಿ' (ಆದರೆ ಅಲ್ಪ ಪ್ರಸಾರದ) ಮಾಧ್ಯಮಗಳಾದರೂ ಸಾಂತ್ವನದ ಸಿಂಚನ ಕೊಡುತ್ತಿರುವುದು ಸಮಾಧಾನದ ಸಂಗತಿ.
  `ಬರಹ' ತಂತ್ರಾಂಶ ಮತ್ತೆ ಅದರಲ್ಲೇ ಲಭ್ಯವಿರುವ unicode ವ್ಯವಸ್ಥೆಗಳು ನನ್ನ ಸೀಮಿತ ಕಂಪ್ಯೂ-ಜ್ಞಾನದಲ್ಲಿ ಯಾರೊಡನೆಯೂ ಪತ್ರ ವ್ಯವಾಹಾರ ಮತ್ತು ಬ್ಲಾಗು ತುಂಬಲು ತುಂಬಾ ಸಹಕಾರಿಯಾಗಿವೆ. ಆದರೆ ನನ್ನ ಮಟ್ಟಿಗೆ ಬ್ಲಾಗ್(ಉಚಿತವಾಗಿಯೇ) ವ್ಯವಸ್ಥೆ ಮಾಡುವ, ತುಂಬುವ ಮತ್ತು ನಿರ್ವಹಣೆ ಮಾಡುವ ಸೂಕ್ಷ್ಮಗಳೆಲ್ಲವನ್ನೂ ಮಗ - ಅಭಯಸಿಂಹ ಮಾಡುತ್ತಿದ್ದಾನೆ; ಈ ದಿನಗಳಲ್ಲಿ ಅಂಥವರನ್ನು ಹುಡುಕಿಕೊಳ್ಳುವುದು ನಿಮಗೆ ಕಷ್ಟವಾಗದು.
  ಅಶೋಕವರ್ಧನ

  ReplyDelete
 6. B.S. Venktalakshmi10 February, 2009 15:21

  Nimma utthara sikkithu.
  Nanoo ondhu Blog maadikollalu prayatnisuttheeni.
  Chavadiyalli jagadha abhavadindha helalagadiruva aneka vichargalannu hanchikollalu idhu nanage sahaya maadabahudhu.
  Nodona. Yaarannadharu samparkisuttheeni. Yaaradharu nanoo obba Blog-writer aagalu sahakara odhagisabahudhu.

  ReplyDelete
 7. good satire
  bili huligondu baala
  you are giving
  good moral values
  for the cartoons and cartoonists works...
  ....very few editors...in kannada magazines
  hats off to your blog...!
  keep it up...

  thanks

  harini

  ReplyDelete
 8. Dr. B. Janardana Bhat18 September, 2009 10:32

  Dear sir,
  I liked your write up on the 2 cartoons and their commentators. Your writing reminded me of B. G. L. Swami. You have the same penchant for satire as he. You must write a book like Kaaleju Ranga.
  Yours,
  Janardana Bhat.
  P. S. This is a belated comment though as I visited your site for the first time today.

  ReplyDelete